Monsoon Rain: ಮಾನ್ಸೂನ್ ಮಳೆ ಮೇಲೆ ಎಲ್‌ನಿನೋ ಪ್ರಭಾವ; ಬರಗಾಲ, ಯುದ್ಧದಿಂದ ಪರಿಣಾಮ ತೀವ್ರ
Monsoon Rain: ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಯುದ್ಧದಿಂದ ಭಾರತವು ಸೇರಿದಂತೆ ವಿವಿಧ ದೇಶಗಳ ಮೇಲೆ ಈಗಾಗಲೇ ಪರಿಣಾಮ ಬೀರುವುದಕ್ಕೆ ಪ್ರಾರಂಭವಾಗಿದೆ. ಇದೀಗ ಮಾನ್ಸೂನ್ ಸಹ ಕೈಕೊಡುತ್ತಿದ್ದು, ಈ ಬಾರಿ ಮಳೆ ಕೊರತೆಯಿಂದ ರೈತರು ಭಾರೀ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಭಾರತದ ಮಳೆ ವ್ಯವಸ್ಥೆ (ಮಾನ್ಸೂನ್) ದೇಶದ ಹವಾಮಾನ ಮತ್ತು ಆರ್ಥಿಕತೆಯಲ್ಲಿ ಬಹಳ ಮುಖ್ಯ ಪಾತ್ರವನ್ನು ಬೀರುತ್ತದೆ. ಭೂಮಿ ಮತ್ತು ಸಮುದ್ರದ ತಾಪಮಾನ ವ್ಯತ್ಯಾಸದಿಂದ ಗಾಳಿಯ ದಿಕ್ಕು ಬದಲಾಗುವುದರಿಂದ ಈ ಮಾನ್ಸೂನ್ ಉಂಟಾಗುತ್ತದೆ. ಆದರೆ ಈ ಬಾರಿ ಹಲವು ಅಡೆತಡೆಗಳು ಎದುರಾಗಿವೆ. ಭಾರತದಲ್ಲಿ ಬರಗಾಲದ ಆತಂಕ ಎದುರಾಗಿದ್ದು. ಕೊಲ್ಲಿ ಯುದ್ಧದಿಂದ ರಸಗೊಬ್ಬರ ಕೊರತೆ ಭೀತಿಯ ನಡುವೆ ಕಡಿಮೆ ಮಳೆಯ ಬರಸಿಡಿಲು ಬಡಿದಂತೆ ಆಗಿದೆ.
ಇದೇ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬೀಳುವ ದಕ್ಷಿಣ-ಪಶ್ಚಿಮ ಮಾನ್ಸೂನ್ ಮಳೆ ಭಾರತದಲ್ಲಿ ವರ್ಷಪೂರ್ತಿ ಬೀಳುವ ಮಳೆಯ ಸುಮಾರು ಶೇ 75% ಪ್ರಮಾಣದ ಮಳೆಯನ್ನು ಕೊಡುತ್ತದೆ. ಇದು ಅಕ್ಕಿ, ಹತ್ತಿ, ಕಬ್ಬು ಮೊದಲಾದ ಖರೀಫ್ ಬೆಳೆಗಳಿಗೆ ಅತ್ಯಂತ ಅಗತ್ಯವಾದ ಮಳೆಯಾಗಿದೆ. ಅಲ್ಲದೆ ಇದೀಗ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ Vs ಇರಾನ್‌ನ ನಡುವೆ ಉಂಟಾಗಿರುವ ಉದ್ವಿಗ್ನತೆಯು ಸಹ ಭಾರತದಲ್ಲಿನ ರೈತರಿಗೆ ಆತಂಕವನ್ನುಂಟು ಮಾಡಿದೆ.

ಮಾನ್ಸೂನ್ ಮಳೆಯ ಮೇಲೆ ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ ಈ ವರ್ಷ ಮಳೆ ಕೊರತೆ ಎದುರಾಗುವ ಸಾಧ್ಯತೆ ಇದೆ. ಇದರಿಂದ ಭಾರತದಲ್ಲಿ ಬರಗಾಲದ ಆತಂಕ ಶುರುವಾಗಿದೆ. ಅಲ್ಲದೆ ಕೊಲ್ಲಿ ಯುದ್ಧದಿಂದ ರಸಗೊಬ್ಬರ ಕೊರತೆ ಭೀತಿಯ ನಡುವೆ ಕಡಿಮೆ ಮಳೆಯ ಬರಸಿಡಿಲು ಬಡಿದಂತೆ ಆಗಿದೆ.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನಡೆಯುವ ಉತ್ತರ-ಪೂರ್ವ ಮಾನ್ಸೂನ್ ಕಡಿಮೆ ಅವಧಿಯದ್ದಾದರೂ ಬಹಳ ಮುಖ್ಯ. ಇದು ಮುಖ್ಯವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲ ಭಾಗಗಳಿಗೆ ಮಳೆಯ ಪ್ರಮುಖ ಮೂಲವಾಗಿದೆ. 2026ರಲ್ಲಿ ಭಾರತದ ದಕ್ಷಿಣ-ಪಶ್ಚಿಮ ಮಾನ್ಸೂನ್ ಸಾಮಾನ್ಯಕ್ಕಿಂತ ಕಡಿಮೆ (ಸುಮಾರು 94%) ಇರಬಹುದು ಎಂದು ಸ್ಕೈಮೆಟ್ ವೇದರ್ ಸಂಸ್ಥೆ ಮುನ್ಸೂಚನೆ ನೀಡಿದೆ.
ಇದಲ್ಲದೆ, ಎಲ್‌ನಿನೋ ಪ್ರಭಾವ ಹೆಚ್ಚಾಗುತ್ತಿರುವುದರಿಂದ, ವಿಶೇಷವಾಗಿ ಮಾನ್ಸೂನ್ ಕೊನೆಯ ಭಾಗದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಕೃಷಿ ಮತ್ತು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀಳುವ ಆತಂಕ ಇದೆ. ಒಟ್ಟಾರೆ ಮುಂದಿನ ಎರಡು ತಿಂಗಳ ಅವಧಿಯು ಭಾರತಕ್ಕೆ ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ವರ್ಷ ಮಳೆ ಕೊರತೆಯೂ ಎದುರಾದರೆ ಯುದ್ಧದಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಕ್ಷೇತ್ರಗಳು ಇನ್ನಷ್ಟು ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ.
Monsoon Rain: ಏನಿದು ಎಲ್‌ನಿನೋ ಪ್ರಭಾವ
ಎಲ್ ನಿನೋ ಎನ್ನುವುದು ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಾಗುವ ಒಂದು ಹವಾಮಾನ ವಿದ್ಯಮಾನವಾಗಿದೆ. ಇದು ಜಾಗತಿಕವಾಗಿ ಮಳೆ ಮತ್ತು ತಾಪಮಾನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇದು ಮುಂಗಾರು ಮಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಇದರಿಂದ ಮಳೆ ಕಡಿಮೆಯಾಗಿ ಬರಗಾಲದಂತಹ ಪರಿಸ್ಥಿತಿ ಉಂಟಾಗಬಹುದು ಎನ್ನುವ ಮಾತೂ ಇದೆ.
ಎಲ್ ನಿನೋ ಅವಧಿಯಲ್ಲಿ ಭೂಮಿಯ ಸರಾಸರಿ ತಾಪಮಾನವು ಹೆಚ್ಚಾಗುತ್ತದೆ, ಇದರಿಂದಾಗಿ ವಿಪರೀತ ಸೆಕೆ ಅಥವಾ ಶಾಖದ ಅಲೆಗಳು ಸೃಷ್ಟಿಯಾಗುವುದು ಸಹ ಇದೆ. ಇನ್ನು ಮುಖ್ಯವಾಗಿ ಭಾರತದಲ್ಲಿ ಮುಂಗಾರು ಮಳೆ ಕಡಿಮೆಯಾಗುವುದರಿಂದ ಕೃಷಿ ಉತ್ಪಾದನೆ ಕುಂಠಿತವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.












Click it and Unblock the Notifications