ದೇಶಾದ್ಯಂತ 22 ಮೆಮು ರೈಲು ಸೇವೆ ವಿಸ್ತರಣೆ: ಎಲ್ಲೆಲ್ಲಿಗೆ?
ಬೆಂಗಳೂರು, ಜನವರಿ 24: ಮೆಮು ರೈಲು ಸೇವೆಯನ್ನು ಕಲಬುರಗಿಯ ಚಿತ್ತಾಪುರದ ವರೆಗೆ ವಿಸ್ತರಣೆ ಮಾಡಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ.
ಒಟ್ಟು 22 ರೈಲುಗಳು ದೇಶದಾದ್ಯಂತ ವಿಸ್ತರಣೆಯಾಗಲಿದೆ. ಸಿಕಂದರಾಬಾದ್- ತಂದೂರ್-ಸಿಕಂದರಾಬಾದ್ ಮೆಮು ರೈಲು(67249/67250) ಚಿತ್ತಾಪುರದವರೆಗೆ ವಿಸ್ತರಣೆಯಾಗಿದೆ.
ಈ ಮಾರ್ಗದಲ್ಲಿ ಐದು ನಿಲುಗಡೆ ಬರಲಿದೆ. ಮಂತತ್ತಿ, ನಾವಂದಗಿ, ಕುರ್ಗುಂಟಾ, ಸೀರಮ್, ಮಲ್‌ಖೈದ್ ರಸ್ತೆ ಮೂಲಕ ತೆರಳಲಿದೆ.
ವಿಸ್ತರಿಸಲಾಗಿರುವ 22 ರೈಲುಗಳ ಪಟ್ಟಿ
- ರೋರ್‌ಕೆಲಾ-ಕೋರಾಪುಟ್ ಎಕ್ಸ್‌ಪ್ರೆಸ್ ಮೆಮು ರೈಲು(18107/18108) ಜಗ್ದಲ್‌ಪುರ ವರೆಗೆ ವಿಸ್ತರಣೆಯಾಗಿದೆ
-ಬರೇಲಿ-ಸಿಂಗ್ರಾಲಿ ಎಕ್ಸ್‌ಪ್ರೆಸ್ (14630/14629) ಹಾಗೂ 14370/243370 ಶಕ್ತಿನಗರ ಎಕ್ಸ್‌ಪ್ರೆಸ್ ತನಕ್‌ಪುರ ವರೆಗೆ ವಿಸ್ತರಣೆಯಾಗಿದೆ.
-ಫಿರೋಜ್‌ಪುರ್- ಲುಧಿಯಾನಾ ಎಕ್ಸ್‌ಪ್ರೆಸ್ ಚಂಡೀಗಢದವರೆಗೆ ವಿಸ್ತರಣೆಯಾಗಿದೆ. ಈ ರೈಲು ಸಾಹಿಬ್‌ಜಾದಾ ಅಜಿತ್ ಸಿಂಗ್ ನಗರದಲ್ಲಿ ನಿಲುಗಡೆಯಾಗಲಿದೆ.

- ಬರ್ಮರ್-ಹರಿದ್ವಾರ ಎಕ್ಸ್‌ಪ್ರೆಸ್ ರೈಲು ರಿಶಿಕೇಶದವರೆಗೆ ವಿಸ್ತರಣೆಯಾಗಿದೆ.
-ದುರ್ಗ-ಜೈಪುರ ಎಕ್ಸ್‌ಪ್ರೆಸ್ ಅಜಮರ್ ವರೆಗೆ ವಿಸ್ತರಣೆ
-ಕಾಮಾಖ್ಯ-ಜೈಪುರ ಎಕ್ಸ್‌ಪ್ರೆಸ್ ಉದಯಪುರದವರೆಗೆ ವಿಸ್ತರಣೆ
-ಹೌರಾ-ವಿಜಯವಾಡ ಎಕ್ಸ್‌ಪ್ರೆಸ್-ತಿರುಪತಿವರೆಗೆ ವಿಸ್ತರಣೆ
-ವಿಲ್ಲುಪರಂ-ಖಾರಗ್‌ಪುರ ಎಕ್ಸ್‌ಪ್ರೆಸ್ ಪುರುಲಿಯಾ ವರೆಗೆ ವಿಸ್ತರಣೆ
-ಪುರಿ ಬಾರ್ಬಿಲ್ ಎಕ್ಸ್‌ಪ್ರೆಸ್- ರೋರ್‌ಕೆಲಾ ವರೆಗೆ ವಿಸ್ತರಣೆ
-ಬಿಕಾನೇರ್-ಚೆನ್ನೈ ಎಕ್ಸ್‌ಪ್ರೆಸ್ ಮಧುರೈವರೆಗೆ ವಿಸ್ತರಣೆ
-ಬಾಂದ್ರಾ-ಪಾಟ್ನಾ ಎಕ್ಸ್‌ಪ್ರೆಸ್ ಸಹರ್ಸಾ ವರೆಗೆ ವಿಸ್ತರಣೆ
- ಶ್ರೀಮಾತಾ ವೈಷ್ಣೋದೇವಿ ಕತ್ರ-ಅಹಮದಾಬಾದ್ ಸರ್ವೋದಯ ಎಕ್ಸ್‌ಪ್ರೆಸ್ ಗಾಂಧಿಧಾಮದವರೆಗೆ ವಿಸ್ತರಣೆ
-ಯಶವಂತಪುರ-ಇಂದೋರ್ ಎಕ್ಸ್‌ಪ್ರೆಸ್ ಡಾ. ಅಂಬೇಡ್ಕರ್ ನಗರದವರೆಗೆ ವಿಸ್ತರಣೆ
-ಸೇಲಮ್-ಕಾಟ್‌ಪಾಡಿ ಎಕ್ಸ್‌ಪ್ರೆಸ್ ಅರಕ್ಕೋನಮ್ ವರೆಗೆ ವಿಸ್ತರಣೆ
-ಬ್ರಹಮ್ ಪುರ ಎಕ್ಸ್‌ಪ್ರೆಸ್ ಇಚ್ಛಾಪುರಂ ವರೆಗೆ ವಿಸ್ತರಣೆ
- ಸಿಖಂದರಾಬಾದ್ -ತಂದೂರ್ ಎಕ್ಸ್‌ಪ್ರೆಸ್ ಚಿತ್ತಾಪುರದ ವರೆಗೆ ವಿಸ್ತರಣೆ
- ಸುರೇಂದ್ರನಗರ-ದ್ರಾಂಗ್ಧಾರಾ ಎಕ್ಸ್‌ಪ್ರೆಸ್ ಬೋಟದ್ ವರೆಗೆ ವಿಸ್ತರಣೆ
-ಉದ್ಧಂಪುರ-ಜಮ್ಮೂ ಎಕ್ಸ್‌ಪ್ರೆಸ್ ಪಠಾಣ್‌ಕೋಟ್ ವರೆಗೆ ವಿಸ್ತರಣೆ
-ಮಿರಿಲಗುಡ ಎಕ್ಸ್‌ಪ್ರೆಸ್-ಕಾಚಿಗುಡ ಎಕ್ಸ್‌ಪ್ರೆಸ್ ನದಿಕುಡೆವರೆಗೆ ವಿಸ್ತರಣೆ
-ಪ್ರತಾಪನಗರ-ಛೋಟಾ ಉದಯಪುರ್ ಎಕ್ಸ್‌ಪ್ರೆಸ್ ಮೋತಿ ಸಾಡ್ಲಿವರೆಗೆ ವಿಸ್ತರಣೆ
-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ಬ್ರಹ್ಮಾಪುರದವರೆಗೆ ವಿಸ್ತರಣೆ











Click it and Unblock the Notifications