ಮಾರುತಿ ಸುಜುಕಿಯಿಂದ ಮೇ ಅಂತ್ಯಕ್ಕೆ 10 ಸಾವಿರ ವೆಂಟಿಲೇಟರ್ ಪೂರೈಕೆ
ನವದೆಹಲಿ, ಏಪ್ರಿಲ್ 24: ಭಾರತದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾದ ಮಾರುತಿ ಸುಜುಕಿ ಆಗ್ವಾ ಹೆಲ್ತ್‌ಕೇರ್‌ನೊಂದಿಗೆ ಕೈಜೋಡಿಸಿದ್ದು ಮೇ ಅಂತ್ಯದೊಳಗೆ 10 ಸಾವಿರ ವೆಂಟಿಲೇಟರ್ ತಯಾರಿಸುವ ಗುರಿ ಹೊಂದಿದ್ದಾರೆ.
ಏಪ್ರಿಲ್ 11 ರಂದು ಮೊದಲ ವೆಂಟಿಲೇಟರ್ ಉತ್ಪಾದಿಸಲಾಗಿತ್ತು. ಮುಂದಿನ ಹತ್ತು ದಿನಗಳಲ್ಲಿ ಅತಿ ಹೆಚ್ಚು ವೆಂಟಿಲೇಟರ್‌ಗಳನ್ನು ತಯಾರಿಸುವ ಸಲುವಾಗಿ ಮಾರುತಿ ಆಗ್ವಾ ಹೆಲ್ತ್‌ಕೇರ್ ಜೊತೆ ಕೈಜೋಡಿಸಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ವೆಂಟಿಲೇಟರ್ ತಯಾರಿಸುವುದಾಗಿ ಕೇಂದ್ರ ಸರ್ಕಾರದ ಬಳಿ ಕೇಳಿದ್ದೆವು ಎಂದು ಎಂಎಸ್‌ಐಎಲ್ ಮುಖ್ಯಸ್ಥ ಆರ್‌ಸಿ ಭಾರ್ಗವ ಹೇಳಿದ್ದಾರೆ.

ಆದರೆ ನಮ್ಮ ಬಳಿ ವೆಂಟಿಲೇಟರ್ ತಯಾರು ಮಾಡುವ ಯಾವುದೇ ತಂತ್ರಜ್ಞಾನವಾಗಲಿ ಅಥವಾ ಮಾಹಿತಿಯಾಗಲಿ ಇಲ್ಲ. ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ವೆಂಟಿಲೇಟರ್ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಲಿದೆ ಎಂದು ಸರ್ಕಾರ ಹೇಳಿತ್ತು. ಹಾಗಾಗಿ ಆಗ್ವಾ ಹೆಲ್ತ್‌ಕೇರ್ ಜೊತೆ ಸೇರಿ ವೆಂಟಿಲೇಟರ್ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಆಗ್ವಾ ಹೆಲ್ತ್‌ಕೇರ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮಾರ್ಚ್ 30ರ ವರೆಗೆ 1250 ವೆಂಟಿಲೇಟರ್‌ಗಳನ್ನು ತಯಾರಿಸಲಾಗಿತ್ತು.ಪ್ರತಿ ದಿನಕ್ಕೆ 200-300 ವೆಂಟಿಲೇಟರ್‌ಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. ಎಂಎಸ್‌ಐಎಲ್ ಸರ್ಕಾರಕ್ಕೆ ನಿತ್ಯವೂ ವೆಂಟಿಲೇಟರ್‌ಗಳನ್ನು ನೀಡುತ್ತದೆ.
ಒಟ್ಟಿನಲ್ಲಿ ಈ ತಿಂಗಳಾಂತ್ಯದಲ್ಲಿ ಒಟ್ಟು 10 ಸಾವಿರ ವೆಂಟಿಲೇಟರ್‌ಗಳು ತಯಾರಾಗಬೇಕು. ಸರ್ಕಾರವು ಮತ್ತಷ್ಟು ಬೇಡಿಕೆಗಳನ್ನಿಟ್ಟರೆ ಜೂನ್‌ನಲ್ಲಿ ಮತ್ತೆ ಹತ್ತು ಸಾವಿರ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಕಂಪನಿ ಜೊತೆ ಸೇರಿ ಮಾಸ್ಕ್ ಕೂಡ ತಯಾರಿಸಲಾಗುತ್ತಿದೆ. ಹರ್ಯಾಣಾ ಹಾಗೂ ಗುಜರಾತ್‌ನಲ್ಲಿ ಎರಡು ಲಕ್ಷ ಮಾಸ್ಕ್ ವಿತರಣೆ ಮಾಡಿದ್ದೇವೆ ಎಂದು ಭಾರ್ಗವ ಮಾಹಿತಿ ನೀಡಿದ್ದಾರೆ.












Click it and Unblock the Notifications