'ಮಹಾ' ಚುನಾವಣೆ ಪೂರ್ವ ಸಮೀಕ್ಷೆ ಫಲಿತಾಂಶ!

ನವದೆಹಲಿ, ಅ 10 (ಪಿಟಿಐ): ಮುಂದಿನ ವಾರ (ಅಕ್ಟೋಬರ್ ಹದಿನೈದು) ನಡೆಯಲಿರುವ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.

ದ ವೀಕ್ ಮತ್ತು ಹಂಸ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿವೆ. ಆಡಳಿತಾರೂಢ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳ ಬೇಕಾಗುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. (ಮಹಾ: ಬಿಜೆಪಿ-ಸೇನೆ ಮುಸುಕಿನ ಗುದ್ದಾಟ)

ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಮೊದಲು ಉದ್ಭವ್ ಠಾಕ್ರೆ, ನಂತರ ಪೃಥ್ವಿರಾಜ್ ಚೌಹಾಣ್ ಎಂದು ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಯ ನಂತರ ಶಿವಸೇನೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

Maharashtra pre-poll survey, NDA heading for clear majority

ಸಿಎಂ ಹುದ್ದೆಗೆ ಜನರ ನೆಚ್ಚಿನ ಅಭ್ಯರ್ಥಿ ಸಮೀಕ್ಷೆಯಲ್ಲಿ ಉದ್ಭವ್ ಠಾಕ್ರೆ, ಪೃಥ್ವಿರಾಜ್ ಚೌಹಾಣ್ ನಂತರ ಶರದ್ ಪವಾರ್, ರಾಜ್ ಠಾಕ್ರೆ ಮತ್ತು ಬಿಜೆಪಿಯ ದೇವೇಂದರ್ ಫಡ್ನವೀಸ್ ಇದ್ದಾರೆ. ದ ವೀಕ್ ಮತ್ತು ಹಂಸ ರಿಸರ್ಚ್ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ
ಸಿಗಬಹುದೆಂದು ಕೆಳಗೆ ನೀಡಲಾಗಿದೆ.

ಮಹಾರಾಷ್ಟ್ರ ಸದನದ ಒಟ್ಟು ಬಲಾಬಲ - 288 (ಆವರಣದಲ್ಲಿ ಹಿಂದಿನ ಚುನಾವಣೆಯ ಫಲಿತಾಂಶ)
ಬಿಜೆಪಿ - 154 (46)
ಶಿವಸೇನೆ - 47 (45)
ಕಾಂಗ್ರೆಸ್ - 25 (82)
ಎನ್ಸಿಪಿ - 17 (62)
ಎಂಎನ್ಎಸ್ - 10 (13)
ಇತರರು - (54)

ಇಂಡಿಯಾ ಟುಡೇ ಮತ್ತು CICERO ಸಮೀಕ್ಷೆ ಪ್ರಕಾರ
ಬಿಜೆಪಿ - 133 (46)
ಶಿವಸೇನೆ - 54 (45)
ಕಾಂಗ್ರೆಸ್ - 30 (82)
ಎನ್ಸಿಪಿ - 33 (62)
ಎಂಎನ್ಎಸ್ - 14 (13)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+