ಮಹಾರಾಷ್ಟ್ರ ಚುನಾವಣೆ: ಕಂಡು ಕೇಳದ ಇತಿಹಾಸ ಸೃಷ್ಟಿ, ಚುನಾವಣಾ ಅಖಾಡ ಬಲು ರೋಚಕ!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಈ ಭಾರೀ ದೇಶದಲ್ಲೇ ಕಂಡು ಕೇಳರಿಯದ ಹೊಸ ದಾಖಲೆಗೆ ಸಾಕ್ಷಿಯಾಗ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ ಮಹಾರಾಷ್ಟ್ರ ಚುನಾವಣಾ ಕಣದಲ್ಲಿ ಇತಿಹಾಸವೇ ಸೃಷ್ಟಿಯಾಗುತ್ತಿದೆ. ಮಹಾರಾಷ್ಟ್ರ ರಾಜಕೀಯ ಈಗಾಗಲೇ ಗೋಜಲು ಗೋಜಲಾಗಿದೆ. ಇಲ್ಲಿನ ಎರಡು ಪ್ರಮುಖ ಪಕ್ಷಗಳು ಈಗಾಗಲೇ ಇಬ್ಭಾಗವಾಗಿದ್ದು, ಭಾರೀ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಈ ಚುನಾವಣಾ ಕಣದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿವೆ. ಇದರ ಮ್ಯಾಜಿಕ್‌ ಸಂಖ್ಯೆ 145. ಮಹಾರಾಷ್ಟ್ರದಲ್ಲಿ ಈಗ ಆರು ಪಕ್ಷಗಳು ಪ್ರಮುಖವಾಗಿವೆ. ಅದರಲ್ಲಿ 2 ಬಣಗಳು ಸಹ ಇವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಮಹಾರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾಗಿ ಗುರುತಿಸಿಕೊಂಡಿವೆ. ಇದರೊಂದಿಗೆ ಶಿವಸೇನಾ ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ ಸಹ ಇವೆ. ಆದರೆ, ಈ ಪಕ್ಷಗಳು ಈಗಾಗಲೇ ಇಬ್ಭಾಗವಾಗಿವೆ.

Maharashtra Election Unheard of history is created the election arena is very exciting

ಇದೀಗ ಮಹಾರಾಷ್ಟ್ರ ಚುನಾವಣಾ ಕಣದಲ್ಲಿ ಹೊಸ ಹಾಗೂ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣದಲ್ಲಿ ಈ ಬಾರಿ ಬರೋಬ್ಬರಿ 8,000 ಸಾವಿರ ಜನ ಇದ್ದಾರೆ. ಹೌದು ಮಹಾರಾಷ್ಟ್ರದಲ್ಲಿ ಇರುವುದೇ 288 ವಿಧಾನಸಭಾ ಕ್ಷೇತ್ರಗಳು. ಆದರೆ, ಇದರ ನೂರು ಪಟ್ಟಿಗೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಇಲ್ಲಿಯವರೆಗೆ 7,995 ಅಭ್ಯರ್ಥಿಗಳು ಚುನಾವಣೆಗೆ ಇಳಿದಿದ್ದಾರೆ. ಇಷ್ಟು ಜನ ಅಭ್ಯರ್ಥಿಗಳು 10,905 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಬಾರಿ ತೀವ್ರ ಜಿದ್ದಾಜಿದ್ದಿ ಇರಲಿದೆ ಎನ್ನುವುದು ಈ ವಿಷಯದಿಂದಲೇ ತಿಳಿಯುತ್ತಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಹಾಗೂ ಮಹಾವಿಕಾಸ ಅಘಾಡಿ ಎನ್ನುವ ಮೈತ್ರಿಕೂಟಗಳು ಇವೆ. ಈ ಕೂಟಗಳೇ ಅಖಾಡದಲ್ಲಿ ಸದ್ದು ಜೋರಾಗಿವೆ. ಮಹಾಯುತಿಯಲ್ಲಿ ಬಿಜೆಪಿ, ಶಿವಸೇನಾ (ಏಕನಾಥ್‌ ಶಿಂಧೆ ಬಣ) ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಅಜಿತ್ ಪವಾರ್)ಗಳು ಇವೆ. ಇನ್ನು ಮಹಾವಿಕಾಸ್‌ ಅಘಾಡಿಯಲ್ಲಿ ಪ್ರಧಾನವಾಗಿ ಕಾಂಗ್ರೆಸ್‌, ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಶರದ್‌ ಪವಾರ್‌) ಹಾಗೂ ಶಿವಸೇನಾ (ಶರದ್‌ ಪವಾರ್‌) ಪಕ್ಷಗಳು ಇವೆ. ಇದರ ಹೊರತಾಗಿ ಮಹಾರಾಷ್ಟ್ರದಲ್ಲಿ 22ಕ್ಕೂ ಹೆಚ್ಚು ಪಕ್ಷಗಳು ಇವೆ.

Maharashtra Election Unheard of history is created the election arena is very exciting

ನವೆಂಬರ್‌ 20ಕ್ಕೆ ಚುನಾವಣೆ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯು ನವೆಂಬರ್‌ 20ರಂದು ನಡೆಯಲಿದೆ. ಈ ಬಾರಿ ಒಂದೇ ಹಂತದಲ್ಲಿ ಮಹಾರಾಷ್ಟ್ರ ಚುನಾವಣೆ ನಡೆಯುತ್ತಿದೆ. ನವೆಂಬರ್‌ 23ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಈ ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳು ಇವೆ. 145 ಈ ರಾಜ್ಯದ ಮ್ಯಾಜಿಕ್‌ ನಂಬರ್‌ ಇದೆ. ಎರಡು ಪ್ರಮುಖ ಪಕ್ಷಗಳು ಇಬ್ಭಾಗವಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣಿ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+