Maharashtra election Exit Polls: ಮಹಾರಾಷ್ಟ್ರದಲ್ಲಿ ಬಿಜೆಪಿ & ಮಹಾಯುತಿ ಮತ್ತೆ ಅಧಿಕಾರಕ್ಕೆ, ಟ್ವಿಸ್ಟ್ ಇದೆ...
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತದಾನ ಬುಧವಾರ (ನವೆಂಬರ್ 20) ನಡೆದಿದೆ. ಮತದಾನ ಮುಕ್ತಾವಾದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಯಾವ ಮೈತ್ರಿಕೂಟ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ನಿಖರ ಭವಿಷ್ಯಕ್ಕೆ ಖ್ಯಾತಿ ಗಳಿಸಿರುವ ಫಲೋಡಿ ಸಟ್ಟಾ ಬಜಾರ್ ಇದೀಗ 2024ನೇ ಸಾಲಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ. ಯಾವ ಮೈತ್ರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಅತ್ಯಂತ ಗೊಂದಲದ ವಾತಾವರಣ ಇದೆ. ಪ್ರಮುಖ ಪಕ್ಷಗಳು ಇಬ್ಭಾಗವಾಗಿದ್ದರಿಂದ ಯಾವ ಪಕ್ಷದ ಕಡೆ ಮತದಾರರು ಇದ್ದಾರೆ ಎನ್ನುವ ಕೌತುಕ ಇತ್ತು. ಅದಕ್ಕೆ ಮತದಾನೋತ್ತರ ಸಮೀಕ್ಷೆ ಉತ್ತರಿಸಿದೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿಪಕ್ಷಗಳ ನಡುವೆ ನೇರ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಇತ್ತು. 1995ರ ನಂತರ ಎಂದೂ ಕಾಣದಂತಹ ರಾಜಕೀಯ ಧ್ರುವೀಕರಣವೂ ಕಳೆದ ಐದು ವರ್ಷಗಳಲ್ಲಿ ನಡೆದಿದೆ. ಐದು ವರ್ಷಗಳ ಅವಧಿಯಲ್ಲಿ ಶಿವಸೇನಾ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಗಳು ಇಬ್ಭಾಗವಾಗಿವೆ. ವಿಚಿತ್ರವೆಂದರೆ ಕಳೆದ ಐದು ವರ್ಷಗಳಲ್ಲಿ ಈ ಎಲ್ಲಾ ಪಕ್ಷಗಳು ಅಧಿಕಾರ ನಡೆಸಿವೆ ಅಥವಾ ಅಧಿಕಾರದಲ್ಲಿದ್ದ ಪಕ್ಷಗಳ ಭಾಗವಾಗಿವೆ. ಹೀಗಾಗಿ, ಜನ ಇಲ್ಲಿ ಎಲ್ಲಾ ಪಕ್ಷಗಳು (ಮಹಾಯುತಿ ಹಾಗೂ ಮಹಾ ವಿಕಾಸ್ ಅಘಾಡಿ) ಅಧಿಕಾರ ನಡೆಸಿರುವುದನ್ನು ನೋಡಿದ್ದಾರೆ. ಹೀಗಾಗಿ, ಯಾವ ಪಕ್ಷಕ್ಕೆ ಅಧಿಕಾರ ಕೊಡಲಿದ್ದಾರೆ ಎನ್ನುವ ಕುತೂಹಲವಿತ್ತು.

ಇದೀಗ ಫಲೋಡಿ ಸಟ್ಟಾ ಬಜಾರ್ ಎಕ್ಸಿಟ್ ಪೋಲ್ ಪ್ರಕಟಿಸಿದ್ದು (ಮತದಾನೋತ್ತರ ಸಮೀಕ್ಷೆ) ಇದರ ಪ್ರಕಾರ, ಮಹಾರಾಷ್ಟ್ರದಲ್ಲಿ ಮತ್ತೆ ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಮಹಾಯುತಿ ಮೈತ್ರಿ ಕೂಟವು ಬಿಜೆಪಿ ನೇತೃತ್ವದಲ್ಲಿ ಇದೆ. ಇದರಲ್ಲಿ ಬಿಜೆಪಿ, ಶಿವಸೇನಾ (ಏಕನಾಥ್ ಶಿಂಧೆ) ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಅಜಿತ್ ಪವಾರ್ ಬಣ) ಇದೆ. ಇದೀಗ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.
2024ನೇ ಸಾಲಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು 145 ಮ್ಯಾಜಿಕ್ ನಂಬರ್ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬರಲಿದ್ದು, 144 ಸ್ಥಾನಗಳಿಂದ 152 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಈ ಫಲಿತಾಂಶವು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ ಎಂದು ಹೇಳಲಾಗಿದೆ. ಇನ್ನು ಮಹಾರಾಷ್ಟ್ರದ ಮ್ಯಾಜಿಕ್ ನಂಬರ್‌ನ ಸಮೀಪದಲ್ಲೇ ಚುನಾವಣೆ ಫಲಿತಾಂಶ ಅಂದಾಜಿಸಿರುವುದರಿಂದ ಕೊನೆಯ ಕ್ಷಣದಲ್ಲಿ ಏನಾದರೂ ಬದಲಾವಣೆ ಆಗಬಹುದೇ ಎಂದು ನಿರೀಕ್ಷೆ ಮಾಡಲಾಗಿದೆ.

ಫಲೋಡಿ ಸಟ್ಟಾ ಬಜಾರ್ ನಿಖರ ಹಾಗೂ ಅತ್ಯಂತ ಹತ್ತಿರದ ಚುನಾವಣೆ ಫಲಿತಾಂಶಕ್ಕೆ ಹೆಸರು ವಾಸಿಯಾಗಿದೆ. ಆದಾಗ್ಯೂ, ಈ ವರ್ಷದ ಪ್ರಾರಂಭದಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಅಂದಾಜಿಸುವಲ್ಲಿ ಸಟ್ಟಾ ಬಜಾರ್ ವಿಫಲವಾಗಿತ್ತು.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು
ಮಹಾರಾಷ್ಟ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವಷ್ಟೇ ಯಾರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲವೂ ಇದೆ. 2019ನೇ ಸಾಲಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪ ಮುಖ್ಯಮಂತ್ರಿ ದೇವೇಂಧ್ರ ಫಡ್ನವಿಸ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿತ್ತು. ಉಳಿದ ಎಲ್ಲಾ ಪಕ್ಷಗಳಿಗಿಂತ ಈ ಪಕ್ಷವೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು.
ಬಿಜೆಪಿ ಕಳೆದ ಬಾರಿ 288 ವಿಧಾನಸಭಾ ಕ್ಷೇತ್ರಗಳ ಪೈಕಿ 105 ಸ್ಥಾನಗಳಲ್ಲಿ ಗೆದಿತ್ತು. ಆದರೆ, ದೇವೇಂದ್ರ ಫಡ್ನಿವಿಸ್ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಅಲ್ಲದೇ ಅವರು ಆಡಳಿತದಲ್ಲಿ (ಅಧಿಕಾರ) ಭಾಗಿಯಾಗುವುದಕ್ಕೂ ಹಿಂದೇಟು ಹಾಕಿದ್ದರು. ಬಿಜೆಪಿಯ ಹೈಕಮಾಂಡ್‌ನ ಒತ್ತಾಯದ ಮೇರೆಗೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ: ಇನ್ನೂ ಜಾರ್ಖಂಡ್ ವಿಧಾನಸಭೆ ಚುನಾವಣೆಯೂ ಮುಕ್ತಾಯವಾಗಿದ್ದು, ಇಲ್ಲೂ ನವೆಂಬರ್ 23ಕ್ಕೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು. ಇಲ್ಲೂ ಪ್ರಾದೇಶಿಕ ಪಕ್ಷಗಳು ತೀವ್ರ ಪೈಪೋಟಿ ನೀಡಿವೆ.












Click it and Unblock the Notifications