LPG: ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಬುಕಿಂಗ್‌ ಹೊಸ ನಿಯಮಗಳು

LPG Gas Booking: ಎಲ್‌ಪಿಜಿ ಕುರಿತಂತೆ ಆಗಾಗ ಅಪ್ಡೇಟ್‌ ಮಾಹಿತಿಗಳು ಹೊರಬೀಳತ್ತಲೇ ಇರುತ್ತವೆ. ಹಾಗೆಯೇ ಇದೀಗ ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಬುಕಿಂಗ್‌ ಹೊಸ ನಿಯಮಗಳ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಸಂಪೂರ್ಣ ವಿವರ ಇಲ್ಲಿದೆ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅತ್ಯಗತ್ಯ ಭಾಗವಾಗಿದೆ. ನೀವು ಇಂಡೇನ್ (Indane), ಎಚ್‌ಪಿ (HP Gas) ಅಥವಾ ಭಾರತ್ ಗ್ಯಾಸ್ (Bharat Gas) ಬಳಕೆದಾರರಾಗಿದ್ದರೆ, ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮಗಳು ಮತ್ತು ಆನ್‌ಲೈನ್ ಬುಕ್ಕಿಂಗ್ ವಿಧಾನಗಳನ್ನು ತಿಳಿದುಕೊಳ್ಳಲೇಬೇಕಿದೆ.

LPG Gas Cylinder Booking New Rules 25-Days Gap OTP Verification and Online Booking Details

ಎಲ್‌ಪಿಜಿ ಬಳಕೆದಾರರ ಗಮನಕ್ಕೆ..

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ ಮಾಡುವ ಗ್ರಾಹಕರಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿಯಮಗಳು ಹಾಗೂ ಪರಿಶೀಲನಾ ಕ್ರಮಗಳು ಜಾರಿಯಲ್ಲಿವೆ. ಸಿಲಿಂಡರ್ ಬುಕ್ಕಿಂಗ್‌ ವೇಳೆ ಗ್ರಾಹಕರು ತಮ್ಮ ವಿವರಗಳು, ಮೊಬೈಲ್‌ ಸಂಖ್ಯೆ ಹಾಗೂ ಅಗತ್ಯ ಇರುವ ಪರಿಶೀಲನಾ ಪ್ರಕ್ರಿಯೆಗಳನ್ನು ಸರಿಯಾಗಿ ಪೂರ್ಣಗೊಳಿಸುವುದು ಮುಖ್ಯವಾಗಿದೆ.

ರಿಫಿಲ್ ಬುಕಿಂಗ್‌ಗೆ ನಿಗದಿತ ಅಂತರ

ಗ್ಯಾಸ್ ಸಿಲಿಂಡರ್‌ಗಳ ಅಕ್ರಮ ಸಂಗ್ರಹಣೆ ಹಾಗೂ ಸಾಗಾಟವನ್ನು ತಡೆಯುವ ಉದ್ದೇಶದಿಂದ ರಿಫಿಲ್ ಬುಕಿಂಗ್ ಅವಧಿಗೆ ನಿಯಮಗಳನ್ನು ನಿಗದಿಪಡಿಸಲಾಗಿದೆ. ನಗರ ಪ್ರದೇಶಗಳಲ್ಲಿ ಎರಡು ರಿಫಿಲ್ ಬುಕಿಂಗ್‌ಗಳ ನಡುವೆ ಕನಿಷ್ಠ 25 ದಿನಗಳ ಅಂತರ ಇರಬೇಕು ಎಂಬ ನಿಯಮವಿತ್ತು. ಆದರೆ ಗ್ರಾಮೀಣ ಪ್ರದೇಶಗಳಿಗೂ ಇದು ಅನ್ವಯ ಆಗಲಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾತ ತಿಳಿಸಿತ್ತು. ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಕನಿಷ್ಠ 45 ದಿನಗಳ ಅಂತರ ಇರಬೇಕಿತ್ತು.

ನೋಂದಾಯಿತ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು

ಗ್ಯಾಸ್ ಸಿಲಿಂಡರ್ ಡೆಲಿವರಿ ವೇಳೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 4 ಅಂಕಿಗಳ OTP ಅನ್ನು ಡೆಲಿವರಿ ಸಿಬ್ಬಂದಿಗೆ ತಿಳಿಸಿದ ಬಳಿಕವೇ ಸಿಲಿಂಡರ್ ನೀಡಲಾಗುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ.

LPG Gas Cylinder Booking New Rules: ಮನೆಗೆ ಒಂದೇ ಗ್ಯಾಸ್ ಸಿಲಿಂಡರ್

ಮನೆಗೆ ಪೈಪ್‌ಲೈನ್ ಗ್ಯಾಸ್ ಸಂಪರ್ಕ (ಪಿಎನ್‌ಜಿ) ಇದ್ದರೆ, ಎಲ್‌ಪಿಜಿ ಸಿಲಿಂಡರ್ ಸಂಪರ್ಕವನ್ನು 30 ದಿನಗಳೊಳಗೆ ರದ್ದುಪಡಿಸಬೇಕಾಗುತ್ತದೆ. ಒಂದೇ ಮನೆಯಲ್ಲಿ ಎರಡೂ ಸಂಪರ್ಕಗಳನ್ನು ಏಕಕಾಲದಲ್ಲಿ ಹೊಂದಲು ಸಾಧ್ಯವಿಲ್ಲ ಎಂಬ ನಿಯಮ ಜಾರಿಗೆ ಬಂದಿದೆ ಎಂದು ವರದಿಯಾಗಿದೆ.

LPG Gas Booking: ಆನ್‌ಲೈನ್‌ನಲ್ಲಿ ಸುಲಭ ಬುಕ್ಕಿಂಗ್ ವಿಧಾನಗಳು

* ಗ್ಯಾಸ್ ಏಜೆನ್ಸಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ವಿವಿಧ ಡಿಜಿಟಲ್ ಮಾರ್ಗಗಳ ಮೂಲಕ ಮನೆಯಿಂದಲೇ ಸಿಲಿಂಡರ್ ಬುಕ್ ಮಾಡಬಹುದು. ಇಂಡೇನ್ ಗ್ಯಾಸ್ ಆಗಿದ್ದರೆ, ವಾಟ್ಸಾಪ್‌ನಲ್ಲಿ 7588888824 ಸಂಖ್ಯೆಗೆ REFILL ಎಂದು ಸಂದೇಶ ಕಳುಹಿಸಬಹುದು. ಅಥವಾ 7718955555 ಸಂಖ್ಯೆಗೆ IVRS ಮೂಲಕ ಕರೆ ಮಾಡಬಹುದು.

* ಭಾರತ್ ಗ್ಯಾಸ್: ವಾಟ್ಸಾಪ್‌ನಲ್ಲಿ 1800224344 ಸಂಖ್ಯೆಗೆ Hi ಅಥವಾ Book ಎಂದು ಸಂದೇಶ ಕಳುಹಿಸಿ ಸಿಲಿಂಡರ್ ಬುಕ್ ಮಾಡಬಹುದು.

* ಎಚ್‌ಪಿ ಗ್ಯಾಸ್: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9222201122 ಸಂಖ್ಯೆಗೆ ವಾಟ್ಸಾಪ್ ಮೂಲಕ ಬುಕ್ಕಿಂಗ್ ಮಾಡಬಹುದು. ಅಥವಾ 9493602222 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬುಕಿಂಗ್ ಮಾಡಬಹುದು.

ಅಷ್ಟೇ ಅಲ್ಲದೆ PhonePe, Google Pay, Paytm ಹಾಗೂ UMANG ಆ್ಯಪ್‌ಗಳಲ್ಲಿರುವ ಎಲ್‌ಪಿಜಿ ವಿಭಾಗದ ಮೂಲಕವೂ ಗ್ರಾಹಕರು ತಮ್ಮ ವಿವರಗಳನ್ನು ನಮೂದಿಸಿ ಸಿಲಿಂಡರ್ ಬುಕ್ ಮಾಡಬಹುದು. ಗ್ಯಾಸ್ ಸಿಲಿಂಡರ್ ಬುಕಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಂಡು, ಡಿಜಿಟಲ್ ಮಾರ್ಗಗಳ ಮೂಲಕ ಸುಲಭವಾಗಿ ಸಿಲಿಂಡರ್ ಬುಕ್ ಮಾಡಬಹುದು.

ಆದ್ದರಿಂದ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್‌ ಮಾಡುವ ಮುನ್ನ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ನಿಯಮಗಳಲ್ಲಿ ಆಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕೃತ ಗ್ಯಾಸ್‌ ಏಜೆನ್ಸಿ ಅಥವಾ ಸಂಬಂಧಿತ ತೈಲ ಕಂಪನಿಗಳ ಮಾಹಿತಿಯನ್ನೇ ಅನುಸರಿಸುವುದು ಉತ್ತಮ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+