Get Updates
Get notified of breaking news, exclusive insights, and must-see stories!

LPG Price: ಈ ವಿಧಾನ ಬಳಸಿದರೆ ನಿಮ್ಮ ಎಲ್‌ಪಿಜಿ ಸಿಲಿಂಡರ್‌ ಖರ್ಚು ಕಡಿಮೆ, ಹೇಗೆ?

ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. ದೇಶದಾದ್ಯಂತ ಇದೀಗ ಬಹುತೇಕರು ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅವಲಂಬಿಸಿದ್ದಾರೆ. ಹಿಂದಿನಂತೆ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಒಲೆಗಳನ್ನು ಬದಿಗಿಟ್ಟು, ಎಲ್ಲರೂ ಸಿಲಿಂಡರ್‌ ಬಳಸುತ್ತಿದ್ದಾರೆ. ಕೇಂದ್ರ ಸರ್ಕಾರವು ಸಬ್ಸಿಡಿ ಮೂಲಕ ಅಗ್ಗದ ದರಕ್ಕೆ ಗ್ರಾಹಕರಿಗೆ ಎಲ್‌ಪಿಜಿ ಪೂರೈಕೆ ಮಾಡುತ್ತಿದೆ. ಪ್ರತಿ ತಿಂಗಳು ಎಲ್‌ಪಿಜಿ ದರಗಳು ಏರಿಳಿತ ಕಾಣುತ್ತವೆ. ನವೆಂಬರ್‌ 1ರಿಂದ ದರ ಇಳಿಕೆ ಕಾಣುವ ನಿರೀಕ್ಷೆ ಇದೆ. ಇದರೊಂದಿಗೆ ಮತ್ತೊಂದು ಗುಡ್‌ನ್ಯೂಸ್‌ ಸಿಕ್ಕಿದೆ.

ದೇಶದಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆಯು ಕ್ರಾಂತಿ ಮೂಡಿಸಿದೆ. ಪ್ರತಿ ಮನೆಯಲ್ಲೂ ಸಿಲಿಂಡರ್‌ಗಳನ್ನೇ ಪ್ರಧಾನವಾಗಿ ಅಡುಗಗೆಗಾಗಿ ಬಳಕೆ ಮಾಡಲಾಗುತ್ತಿದೆ. ಕಾಲ ಬದಲಾದಂತೆ ಇದೀಗ ಅಡುಗೆಗಾಗಿ ಎಲೆಕ್ಟ್ರಿಕ್‌ ವಸ್ತುಗಳ ಬಳಕೆ ಕೂಡ ಕ್ರಮೇಣ ಹೆಚ್ಚಾಗಿದೆ. ಈ ಎರಡೂ ವೆಚ್ಚಗಳನ್ನು ಗಮನಿಸಿದರೆ, ಎಲ್‌ಪಿಜಿ ಹಾಗೂ ಪಿಎನ್‌ಜಿಗಿಂತ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ಖರ್ಚು ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ.

LPG Cylinder Price Cost Saving Smart Method To Reduce Expenses IEEFA Report

ಹೌದು ಮೊದಲು ಮನೆಯಲ್ಲಿ ವಿದ್ಯುತ್‌ ಸಂಪರ್ಕ ಇರುವುದು ಕೂಡ ದುಬಾರಿಯಾಗಿತ್ತು. ಕೆಲವೆಡೆ ಸಂಪರ್ಕವಿದ್ದರೂ ವಿದ್ಯುತ್‌ ಇರುತ್ತಿರಲಿಲ್ಲ. ಆದರೆ ಈಗ ವಿದ್ಯುತ್‌ ಸಂಪರ್ಕ ಕೂಡ ಸುಧಾರಿಸಿದೆ. ವಿದ್ಯುತ್‌ ಕಡಿತದಂತಹ ಅಡಚಣೆಯೂ ಮೊದಲಿನಂತೆ ಇಲ್ಲವಾಗಿದೆ. ಕೆಲವೆಡೆ ಸರ್ಕಾರಗಳು ಉಚಿತ ವಿದ್ಯುತ್‌ ಕೂಡ ಒದಗಿಸುತ್ತಿವೆ. ಈ ಕಾರಣದಿಂದ ಅಡುಗೆ ಮನೆಗಳಲ್ಲಿ ಎಲೆಕ್ಟ್ರಿಕ್‌ ಸ್ಟವ್‌ಗಳ ಬಳಕೆಯೂ ಹೆಚ್ಚಾಗಿದೆ. ಇದರ ವೆಚ್ಚ ಕೂಡ ಕಡಿಮೆ ಎನ್ನಲಾಗಿದ್ದು, ಎಲ್‌ಪಿಜಿ ಬಳಕೆಗಿಂತಲೂ ಅಗ್ಗ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಎಲ್‌ಪಿಜಿ ವೆಚ್ಚ ಕಡಿಮೆ ಹೇಗೆ?

ಇನ್ಸ್‌ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಾಲಿಸಿಸ್‌ನ (ಐಇಇಎಫ್‌ಎ) ಹೊಸ ವರದಿಯ ಪ್ರಕಾರ, ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಹಾಗೂ ಪೈಪ್ಡ್ ನ್ಯಾಚುರಲ್‌ ಗ್ಯಾಸ್‌ಗಿಂತಲೂ (ಪಿಎನ್‌ಜಿ) ವಿದ್ಯುತ್ ಆಧಾರಿತ ಮಾಡುವ ಅಡುಗೆ ವೆಚ್ಚ ಕಡಿಮೆ ಎಂದು ಹೇಳಿದೆ. 2024-25ನೇ ಹಣಕಾಸು ವರ್ಷದಲ್ಲಿ ಇದು ಪಿಎನ್‌ಜಿಗಿಂತಲೂ ಶೇ 14ರಷ್ಟು ಅಗ್ಗ ಎಂದು ಹೇಳಿದೆ. ಅಲ್ಲದೆ ಸಬ್ಸಿಡಿ ರಹಿತ ಎಲ್‌ಪಿಜಿಗಿಂತಲೂ ಶೇ 37ರಷ್ಟು ಅಗ್ಗವಾಗಿದೆ ಎಂದು ಉಲ್ಲೇಖಿಸಿದೆ. ವರದಿ ಕಂಡುಹಿಡಿದಿದೆ. ಎಲ್‌ಪಿಜಿ ಸಬ್ಸಿಡಿ ಇದ್ದರೂ ವಿದ್ಯುತ್ ಆಧಾರಿತ ಉಪಕರಣಗಳಿಂದ ಅಡುಗೆ ಮಾಡುವ ವಿಧಾನವು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತಿದೆ ಎಂದು ವಿಶ್ಲೇಷಿಸಿದೆ.

ಒಂದೆಡೆ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಭಾರತವು ಆಮದು ಮಾಡಿಕೊಳ್ಳುವ ಇಂಧನಗಳ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಈಗಿನ ಅಸ್ಥಿರ ಜಾಗತಿಕ ಮಾರುಕಟ್ಟೆಗಳು ಮತ್ತು ಭೌಗೋಳಿಕ ರಾಜಕೀಯವಾಗಿಯೂ ಸವಾಲನ್ನು ಒಡ್ಡಿದೆ. ಕಳೆದ ಆರು ವರ್ಷಗಳಲ್ಲಿ ದೇಶದ ಎಲ್‌ಪಿಜಿ ಆಮದು ಬಿಲ್‌ಗಳು ಕೂಡ ಶೇಕಡ 50ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಈಗಿನ ಪರಿಸ್ಥಿತಿಯಲ್ಲಿ ಅಡುಗೆಗಾಗಿ ಎಲೆಕ್ಟ್ರಿಕ್‌ ಉಪಕರಣಗಳ ಮೊರೆ ಹೋಗುತ್ತಿರುವುದು ಕೂಡ ಉತ್ತಮ ಬೆಳವಣಿಗೆ ಎನ್ನಲಾಗಿದೆ.

ಸದ್ಯ ಪಿಎನ್‌ಜಿ ಹಾಗೂ ಸಬ್ಸಿಡಿ ರಹಿತ ಎಲ್‌ಪಿಜಿ ಎರಡೂ ದುಬಾರಿಯಾಗಿವೆ. ಪಿಎನ್‌ಜಿ ಬಳಸುವ ನಾಲ್ಕು ಜನರ ಕುಟುಂಬಕ್ಕೆ ಅಡುಗೆ ಇಂಧನದ ವಾರ್ಷಿಕ ವೆಚ್ಚವು ₹6,657 ಎಂದು ಅಂದಾಜಿಸಲಾಗಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ವೆಚ್ಚ ಕೂಡ ₹6,424 ಕ್ಕೆ ತಲುಪಿದೆ ಎಂದು ಐಇಇಎಫ್‌ಎ ಹೇಳಿದೆ. ವಿದ್ಯುತ್ ಆಧಾರಿತ ಅಡುಗೆ ಎಂದರೆ ವೆಚ್ಚ ಉಳಿತಾಯ ಎಂದು ಹೇಳಿದೆ. ಇನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಮಾತ್ರವೇ ವಿದ್ಯುತ್‌ಗಿಂತ ಅಗ್ಗ ಎಂದೂ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+