ಅಮೇಥಿ ಲೋಕಸಭಾ ಫಲಿತಾಂಶ : ಸ್ಮೃತಿ ವಿರುದ್ಧ ರಾಹುಲ್ ಹೀನಾಯ ಸೋಲು
Recommended Video
ಅಮೇಥಿ (ಉತ್ತರ ಪ್ರದೇಶ), ಮೇ 23 : ಭಾರತೀಯ ಜನತಾ ಪಕ್ಷದ ಘಟಾನುಘಟಿ ನಾಯಕಿ ಸ್ಮೃತಿ ಇರಾನಿ ವಿರುದ್ಧ 2014ರ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಡೆಗೂ ಸೋಲು ಕಂಡಿದ್ದಾರೆ.
ಆರಂಭದಿಂದಲೂ ಸ್ಮೃತಿ ಇರಾನಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು, ಯಾವುದೇ ಹಂತದಲ್ಲಿಯೂ ರಾಹುಲ್ ಗಾಂಧಿ ಅವರು ಮುನ್ನಡೆ ಸಾಧಿಸಲಿಲ್ಲ. ರಾಹುಲ್ ಅವರು ತಾಯ್ನೆಲದಲ್ಲಿಯೇ ಹೀನಾಯ ಸೋಲು ಕಾಣುವಂತಾಗಿದೆ.
ಇಬ್ಬರ ನಡುವೆ ಜಿದ್ದಾಜಿದ್ದಿ ಹೋರಾಟ ಕಂಡುಬಂದಿತ್ತು. ಆರಂಭದಿಂದಲೂ ಸ್ಮೃತಿ ಇರಾನಿ ಅವರು ಅಲ್ಪ ಅಂತರ ಕಾದುಕೊಂಡು ಬಂದಿದ್ದಾರೆಯೇ ಹೊರತು ಭಾರೀ ಅಂತರದಿಂದ ಮುಂದಿರಲಿಲ್ಲ.

ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸ್ಮೃತಿ ಇರಾನಿ ಅವರನ್ನು ಪರಾಭವಗೊಳಿಸಿದ್ದರು. ಈ ಬಾರಿ ಸ್ಮೃತಿ ಇರಾನಿ ಅವರು ಭಾರೀ ವಿಶ್ವಾಸದಿಂದ ರಾಹುಲ್ ವಿರುದ್ಧ ಸ್ಪರ್ಧಿಸಿದ್ದಾರೆ.
ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಕಳೆದ ಬಾರಿಯೂ ಸೋನಿಯಾ ಅವರು ಗೆದ್ದಿದ್ದರು. ಒಂದು ವೇಳೆ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರೆ ಕಾಂಗ್ರೆಸ್ಸಿಗೆ ಭಾರೀ ಮುಖಭಂಗ ಆದಂತಾಗುತ್ತದೆ.












Click it and Unblock the Notifications