ಜ್ಯೋತಿಷ್ಯ ಭವಿಷ್ಯ: ಕೆಲ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ - ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಸಂಪೂರ್ಣ ವಿವರ
ನವದೆಹಲಿ, ಮೇ 12: ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಮತದಾನ ಅಂತಿಮಗೊಂಡಿದ್ದು, ರಾಜಕೀಯ ವಲಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಸಿತ್ತು. ಆದರೆ, ಕಮಲ-ದಳ ನಾಯಕರ ನಿರೀಕ್ಷೆಯಂತೆ 28 ಕ್ಷೇತ್ರವನ್ನ ಗೆಲ್ಲುವುದು ಅನುಮಾನ ಎನ್ನಲಾಗಿದೆ.
ಹೌದು, ದೇಶದ ಮುಂದಿನ ಚುಕ್ಕಾಣಿಯನ್ನು ಹಿಡಿಯುವವರು ಯಾರು ? ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸೀಟನ್ನು ಬಿಜೆಪಿ ಗೆಲ್ಲಲಿದೆಯೇ? ದೇಶದಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ನಂಬರ್ ಗಳನ್ನ ಗೆಲ್ಲಲಿದೆಯೇ ಎಂಬ ಬಗ್ಗೆ ಮೂರನೇ ಹಂತದ ಮತದಾನ ಮುಗಿದ ನಂತರ, ರಾಶಿಫಲಗಳ ಲೆಕ್ಕಹಾಕಿ, ಜ್ಯೋತಿಷ್ಯ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಕೆ.ಎಂ. ಸಿನ್ಹಾ ಭವಿಷ್ಯ ನುಡಿದಿದ್ದಾರೆ.

ದೇಶಾದ್ಯಂತ ಒಟ್ಟು ಏಳು ಹಂತದ ಚುನಾವಣೆಯ ಪೈಕಿ ಈಗಾಗಲೇ ಮೂರು ಹಂತದ ಮತದಾನ ಮುಕ್ತಾಯಗೊಂಡಿದೆ. ಕರ್ನಾಟಕದಲ್ಲಿ ಎರಡೂ ಹಂತದ ಮತದಾನ ನಡೆದಿದ್ದು, ದಕ್ಷಿಣದ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚುನಾವಣೆ ನಾಲ್ಕನೇ ಹಂತದಲ್ಲಿ ನಡೆಯಲಿದೆ.
2019 ರ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ದೇಶಾದ್ಯಂತ ಮೋದಿ ಅಲೆ ಕೈ ಹಿಡಿಯಲಿದೆಯೇ ಎನ್ನುವ ಅಂಶಗಳು ಚರ್ಚೆಯಲ್ಲಿತ್ತು. ಆದರೆ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಇತ್ತ ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹೊಡೆತ ಬೀಳಲಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲು ಕಂಡಿತ್ತು. ಅಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಇನ್ನು, 2024 ರ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆಯನ್ನ ಎದುರಿಸಿದ್ದು, 28 ಕ್ಷೇತ್ರವನ್ನ ಗೆಲ್ಲವ ನಿರೀಕ್ಷೆಯಲ್ಲಿದ್ದ ಕಮಲ-ದಳ ನಾಯಕರಿಗೆ ಶಾಕ್ ಎದುರಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ 18 - 20 ಸ್ಥಾನವನ್ನು ಮಾತ್ರ ಗೆಲ್ಲುವ ಸಾಧ್ಯತೆಯಿದೆ ಎಂದು ಖ್ಯಾತ ಜ್ಯೋತಿಷಿ ಕೆ.ಎಂ. ಸಿನ್ಹಾ ಅವರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಬಿಜೆಪಿ ಮೈತ್ರಿಕೂಟ 400 ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದೊಂದು ಸೀಟನ್ನು ಬಿಜೆಪಿ ಗೆಲ್ಲಬಹುದು ಎಂದು ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ಅಲ್ಲದೇ ಹಲವು ರಾಜ್ಯಗಳಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನ ಗೆಲ್ಲಲಿದೆ ಎಂದು ಖ್ಯಾತ ಜ್ಯೋತಿಷಿ ಕೆ ಎಂ ಸಿನ್ಹಾ ಅವರು ತಿಳಿಸಿದ್ದಾರೆ.
* ಕರ್ನಾಟಕ : 28 ಸ್ಥಾನಗಳ ಪೈಕಿ 18 ರಿಂದ 20
* ಆಂಧ್ರ ಪ್ರದೇಶ : 25 ಸ್ಥಾನಗಳ ಪೈಕಿ 3 ರಿಂದ 5
* ಅಸ್ಸಾಂ : 14 ಸ್ಥಾನಗಳ ಪೈಕಿ 12
* ಬಿಹಾರ : 40 ಸ್ಥಾನಗಳ ಪೈಕಿ 28 ರಿಂದ 31
* ಛತ್ತೀಸಗಢ : 11 ಸ್ಥಾನಗಳ ಪೈಕಿ 10
* ದೆಹಲಿ : 7 ಸ್ಥಾನಗಳ ಪೈಕಿ ಎಲ್ಲಾ 7
* ಗುಜರಾತ್ : 26 ಸ್ಥಾನಗಳ ಪೈಕಿ ಎಲ್ಲಾ 26
* ಹರ್ಯಾಣ : 10 ಸ್ಥಾನಗಳ ಪೈಕಿ 6 ರಿಂದ 7
* ಹಿಮಾಚಲ ಪ್ರದೇಶ : 4 ಸ್ಥಾನಗಳ ಪೈಕಿ ಎಲ್ಲಾ 4
* ಜಮ್ಮು ಕಾಶ್ಮೀರ : 6 ಸ್ಥಾನಗಳ ಪೈಕಿ 4
* ಜಾರ್ಖಂಡ : 14 ಸ್ಥಾನಗಳ ಪೈಕಿ 12
* ಉತ್ತರ ಪ್ರದೇಶ : 80 ಸ್ಥಾನಗಳ ಪೈಕಿ 70
* ಕೇರಳ: 20 ಸ್ಥಾನಗಳ ಪೈಕಿ 1
* ಮಧ್ಯ ಪ್ರದೇಶ: 29 ಸ್ಥಾನಗಳ ಪೈಕಿ 28
* ಮಹಾರಾಷ್ಟ್ರ : 48 ಸ್ಥಾನಗಳ ಪೈಕಿ 28 - 31
* ಉತ್ತರ ಪ್ರದೇಶ : 80 ಸ್ಥಾನಗಳ ಪೈಕಿ 70
* ತಮಿಳುನಾಡು: 38 ಸ್ಥಾನಗಳ ಪೈಕಿ 1 ರಿಂದ 2












Click it and Unblock the Notifications