6ನೇ ಹಂತದ ಚುನಾವಣೆ : ದೆಹಲಿಯಲ್ಲಿ ಕಡಿಮೆ ಮತದಾನ

ನವದೆಹಲಿ, ಮೇ 12: ಲೋಕಸಭಾ ಚುನಾವಣೆಗೆ ಆರನೇ ಹಂತದ ಮತದಾನ ಇಂದು(ಮೇ.12)ರಂದು ನಡೆಯಲಿದೆ. ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ನಡೆಯುತ್ತಿರುವ ಏಳು ಹಂತಗಳ ಲೋಕಸಭಾ ಚುನಾವಣೆಯ ಆರನೇ ಹಂತಕ್ಕೆ ಇಂದು ನಡೆಯಲಿದೆ.

Lok sabha elections 2019 phase sixth polling live updates in Kannada
ಉತ್ತರ ಪ್ರದೇಶದ 14, ಹರಿಯಾಣದ 10, ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ ಎಂಟು, ದೆಹಲಿಯ ಏಳು, ಹಾಗೂ ಜಾರ್ಖಂಡ್‍ನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಇಂದು(ಭಾನುವಾರ) ಮತದಾನ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಪ್ರಜ್ಞಾ ಸಿಂಗ್, ಶೀಲಾ ದೀಕ್ಷಿತ್, ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂದಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಕ್ರೀಡಾಪಟುಗಳಾದ ವೀರೇಂದ್ರ ಸಿಂಗ್, ಗೌತಮ್ ಗಂಭೀರ್ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

president

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಈ 59 ಕ್ಷೇತ್ರಗಳಲ್ಲಿ ಬಿಜೆಪಿ 45ರಲ್ಲಿ ಗೆಲುವು ಸಾಧಿಸಿತ್ತು. ತೃಣಮೂಲ ಕಾಂಗ್ರೆಸ್ 8, ಕಾಂಗ್ರೆಸ್ 2 ಹಾಗೂ ಸಮಾಜವಾದಿಪಕ್ಷ ಮತ್ತು ಎಲ್‍ಜೆಪಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾಗಿತ್ತು.

May 12, 2019, 6:46 pm IST

ದೇಶದ ರಾಜಧಾನಿ ದೆಹಲಿಯಲ್ಲಿ ಸಂಜೆ 6 ಗಂಟೆಯ ತನಕ ಶೇ 55.44ರಷ್ಟು ಮತದಾನವಾಗಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಇದು ಕಡಿಮೆ ಮತದಾನವಾಗಿದೆ.
May 12, 2019, 6:45 pm IST

ಯಾವ ರಾಜ್ಯದಲ್ಲಿ ಎಷ್ಟು ಮತದಾನ? * ಜಾರ್ಖಂಡ್‌ 64.46 * ಪಶ್ಚಿಮ ಬಂಗಾಳ 80.13 * ಉತ್ತರ ಪ್ರದೇಶ 50.82 * ಮಧ್ಯಪ್ರದೇಶ 60.12 * ದೆಹಲಿ 55.44 * ಹರ್ಯಾಣ 62.12 * ಬಿಹಾರ 55.04
May 12, 2019, 6:45 pm IST

6ನೇ ಹಂತದಲ್ಲಿ ಸಂಜೆ 6 ಗಂಟೆಯ ತನಕ 59.70 ರಷ್ಟು ಮತದಾನವಾಗಿದೆ. 7 ರಾಜ್ಯಗಳ 59 ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಿತು.
May 12, 2019, 5:24 pm IST

ಬಿಹಾರದ 8 ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಯ ತನಕ ಶೇ 52.74ರಷ್ಟು ಮತದಾನವಾಗಿದೆ.
May 12, 2019, 5:04 pm IST

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪತ್ನಿ ಉಷಾ ಅವರ ಜೊತೆ ನಿರ್ಮಲ ಭವನದಲ್ಲಿ ಮತದಾನ ಮಾಡಿದರು
May 12, 2019, 3:23 pm IST

ಮಧ್ಯಾಹ್ನ 3 ಗಂಟೆವರೆಗಿನ ಮತದಾನ

ಮಧ್ಯಾಹ್ನ 3 ಗಂಟೆವರೆಗಿನ ಮತದಾನ: ಒಟ್ಟು 46.52ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳ-ಶೇ.63.09, ಹರ್ಯಾಣ ಶೇ.47.57, ಉತ್ತರಪ್ರದೇಶ ಶೇ.40.96, ಬಿಹಾರ-ಶೇ.43.86, ಜಾರ್ಖಂಡ್-54.09, ಮಧ್ಯಪ್ರದೇಶ- 48.53 ರಷ್ಟು ಮತದಾನವಾಗಿದೆ.
May 12, 2019, 2:40 pm IST

ಸುನಿಲ್ ಅರೋರ

ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಹಾಗೂ ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರ ದೆಹಲಿಯಲ್ಲಿ ಮತ ಚಲಾಯಿಸಿದರು.
May 12, 2019, 1:17 pm IST

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ

ಪಶ್ಚಿಮ ಬಂಗಾಳ: ನಮ್ಮ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಅವರನ್ನು ನೋಡಲು ತೆರಳಿದ್ದೆ, ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ. ಮತದಾರರು ಮತಗಟ್ಟೆಗೆ ಬರದಂತೆ ತಡೆಯುತ್ತಿದ್ದಾರೆ- ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ದಿಲೀಪ್ ಘೋಷ್
May 12, 2019, 12:56 pm IST

ಮಧ್ಯಾಹ್ನ 12ವರೆಗೆ ಎಷ್ಟು ಮತದಾನ

ಮಧ್ಯಾಹ್ನ 12ವರೆಗೆ ಎಷ್ಟು ಮತದಾನ: ಪಶ್ಚಿಮ ಬಂಗಾಳ-ಶೇ.38.26, ದೆಹಲಿ- ಶೇ.19.55, ಹರ್ಯಾಣ-ಶೇ.23.26, ಉತ್ತರಪ್ರದೇಶ-ಶೇ.21.75, ಬಿಹಾರ-ಶೇ.20.70, ಜಾರ್ಖಂಡ್-ಶೇ.31.27, ಮಧ್ಯಪ್ರದೇಶ-28.25 ಒಟ್ಟು 25.13ರಷ್ಟು ಮತದಾನವಾಗಿದೆ.
May 12, 2019, 12:20 pm IST

ಪ್ರಿಯಾಂಕಾ ಗಾಂಧಿ

ದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಮತ ಚಲಾಯಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ
May 12, 2019, 11:59 am IST

ಪ್ರಿಯಾಂಕಾ ಗಾಂಧಿ

ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಬರ್ಟ್ ವಾದ್ರಾ ಮತ ಚಲಾಯಿಸಲು ಮತಗಟ್ಟೆಕಡೆಗೆ ಧಾವಿಸಿದ್ದಾರೆ.
May 12, 2019, 11:46 am IST

ಬಂಕಾಪುರ

ಪಶ್ಚಿಮ ಬಂಗಾಳದ ಬಂಕಾಪುರದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ
May 12, 2019, 11:33 am IST

ಭೂಪೇಂದ್ರ ಸಿಂಗ್ ಹೂಡಾ

ಹರ್ಯಾಣಾದಲ್ಲಿ ಸೋನಿಪತ್‌ನ ಕಾಂಗ್ರೆಸ್ ಅಭ್ಯರ್ಥಿ ಭೂಪೇಂದ್ರ ಸಿಂಗ್ ಹೂಡಾ ಮತ ಹಕ್ಕು ಚಲಾಯಿಸಿದರು.
May 12, 2019, 11:29 am IST

ಕಪಿಲ್ ದೇವ್

ದೆಹಲಿಯಲ್ಲಿ ಲೆಜೆಂಡ್ ಕ್ರಿಕೆಟರ್ ಕಪಿಲ್ ದೇವ್ ಪತ್ನಿ ರೋಮಿ ಹಾಗೂ ಮಗಳು ಅಮೇಯ ಜೊತೆ ಆಗಮಿಸಿ ಮತ ಚಲಾಯಿಸಿದರು.
May 12, 2019, 10:42 am IST

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ. ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಕಾರು ಮತ್ತು ಬೆಂಗಾವಲು ಪಡೆಯ ವಾಹನ ಗಾಜು ಪುಡಿ
May 12, 2019, 10:22 am IST

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತದಾನ ಮಾಡಿದರು
May 12, 2019, 10:00 am IST

ತಮ್ಮ ಹಕ್ಕು ಚಲಾಯಿಸಿದ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್
May 12, 2019, 9:42 am IST

ಬೆಳಗ್ಗೆ 9 ಗಂಟೆ ತನಕ ಮತದಾನದ ಪ್ರಮಾಣ * ಬಿಹಾರ 9.03 * ಹರ್ಯಾಣ 3.74 * ಮಧ್ಯ ಪ್ರದೇಶ 4.01 * ಉತ್ತರ ಪ್ರದೇಶ 6.86 * ಪಶ್ಚಿಮ ಬಂಗಾಳ 6.58 * ಜಾರ್ಖಂಡ್ 12.45 * ದೆಹಲಿ 3.74
May 12, 2019, 9:32 am IST

ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಭಾನುವಾರ ಮತದಾನ ನಡೆಯುತ್ತಿದೆ. ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪತ್ನಿ ಸಮೇತರಾಗಿ ಬಂದು ತಮ್ಮ ಹಕ್ಕು ಚಲಾಯಿಸಿದರು.
May 12, 2019, 9:22 am IST

ವೋಟ್ ಮಾಡುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ಮತದಾನ ಮಾಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
May 12, 2019, 9:09 am IST

ಮಾತಿನ ಚಕಮಕಿ ನಡೆದಿದೆ.

ಸುಲ್ತಾನ್ ಪುರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಮಹಾಘಟಬಂಧನ್ ಅಭ್ಯರ್ಥಿ ಸೋನು ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ.
May 12, 2019, 9:08 am IST

ಯುವಕರು ಹೆಚ್ಚಾಗಿ ಮತದಾನ ಮಾಡುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ
May 12, 2019, 9:02 am IST

ಶೀಲಾ ದೀಕ್ಷಿತ್

ದೆಹಲಿಯ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿ ಶೀಲಾ ದೀಕ್ಷಿತ್ ನಿಜಾಮುದ್ದೀನ್‌ನಲ್ಲಿ ಮತದಾನ ಮಾಡಿದರು
May 12, 2019, 9:01 am IST

ಬಿಜೆಪಿ ಕಾರ್ಯಕರ್ತನ ಸಾವು

ಪಶ್ಚಿಮ ಬಂಗಾಳದ ತಾಪ್ಸಿಯಾ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತನ ಸಾವು, ಟಿಎಂಸಿ ಕೈವಾಡದ ಶಂಕೆ
May 12, 2019, 8:31 am IST

ಸಿದ್ಧಾರ್ಥ್ ನಾಥ್

ಉತ್ತರಪ್ರದೇಶದ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಪ್ರಯಾಗ್‌ರಾಜ್‌ನಲ್ಲಿ ತಮ್ಮ ಮತ ಚಲಾಯಿಸಿದರು
May 12, 2019, 8:19 am IST

ವಿರಾಟ್ ಕೊಹ್ಲಿ

ಹರ್ಯಾಣಾದಲ್ಲಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗುರುಗ್ರಾಮದ ಶಾಲೆಯೊಂದರಲ್ಲಿ ಮತ ಚಲಾಯಿಸಿದರು.
May 12, 2019, 8:18 am IST

ದೆಹಲಿಯ ಚಾಂದಿನಿ ಚೌಕ

ದೆಹಲಿಯ ಚಾಂದಿನಿ ಚೌಕದಲ್ಲಿ ಮತಗಟ್ಟೆ 124ರಲ್ಲಿ ಮತದಾರರು ಮತ ಚಲಾಯಿಸಲು ಸರತಿಯಲ್ಲಿ ನಿಂತಿದ್ದಾರೆ.
May 12, 2019, 8:18 am IST

ಗುಂಡಿನ ದಾಳಿ

ಪಶ್ಚಿಮ ಬಂಗಾಳದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆದಿದೆ. ಅನಂತ, ರಂಜಿತ್ ಎನ್ನುವವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
May 12, 2019, 8:18 am IST

2014ರ ಸಾರ್ವತ್ರಿಕ ಚುನಾವಣೆ

ಕ್ಷೇತ್ರಗಳಲ್ಲಿ ಬಿಜೆಪಿ 45ರಲ್ಲಿ ಗೆಲುವು ಸಾಧಿಸಿತ್ತು. ತೃಣಮೂಲ ಕಾಂಗ್ರೆಸ್ 8, ಕಾಂಗ್ರೆಸ್ 2 ಹಾಗೂ ಸಮಾಜವಾದಿಪಕ್ಷ ಮತ್ತು ಎಲ್‍ಜೆಪಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾಗಿತ್ತು.
May 12, 2019, 8:17 am IST

ಮುಖ್ಯ ಅಭ್ಯರ್ಥಿಗಳು

ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಪ್ರಜ್ಞಾ ಸಿಂಗ್, ಶೀಲಾ ದೀಕ್ಷಿತ್, ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂದಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಕ್ರೀಡಾಪಟುಗಳಾದ ವೀರೇಂದ್ರ ಸಿಂಗ್, ಗೌತಮ್ ಗಂಭೀರ್ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+