ರಾಜೀವ್ ಗಾಂಧಿ ಹೆಸರಲ್ಲಿ ಚುನಾವಣೆ ಎದುರಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು

Recommended Video

      ಕಾಂಗ್ರೆಸ್ ಗೆ ನೇರ ಸವಾಲು ಹಾಕಿದ ಮೋದಿ..!

      ನವದೆಹಲಿ, ಮೇ 6: ಭಾನುವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಮತ್ತೆ ರಾಜೀವ್ ಗಾಂಧಿ ಅವರ ಹೆಸರು ಪ್ರಸ್ತಾಪಿಸಿದ್ದಾರೆ.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಮಾಜಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವಂತೆ ಮೋದಿ ಅವರು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

      ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಅವರು, ರಾಜಧಾನಿ ದೆಹಲಿಯ ಚುನಾವಣೆ ಸೇರಿದಂತೆ ಇನ್ನೂ ಎರಡು ಹಂತಗಳಲ್ಲಿ ಚುನಾವಣೆ ಬಾಕಿ ಉಳಿದಿದೆ ಎಂದು ಕಾಂಗ್ರೆಸ್‌ಗೆ ನೆನಪಿಸಿದರು.

      Lok Sabha elections 2019 fight remaining elections name of Rajiv Gandhi nardendra modi challenge

      'ನಾನು ಕಾಂಗ್ರೆಸ್ ಪಕ್ಷಕ್ಕೆ, ವಂಶಪಾರಂಪರ್ಯದ ಕುಟುಂಬಕ್ಕೆ, ಅವರ ಪರಿವಾರದವರು ಮತ್ತು ಅವರ ಸೇವಕರಿಗೆ ಸವಾಲು ಹಾಕುತ್ತಿದ್ದೇನೆ... ನಿಮಗೆ ಧೈರ್ಯವಿದ್ದರೆ, ದೆಹಲಿ ಚುನಾವಣೆಯನ್ನು ತಮ್ಮ ವಿರುದ್ಧ ಗಂಭೀರ ಆರೋಪಗಳನ್ನು ಹೊಂದಿದ್ದ ಮತ್ತು ಕಳೆದ ಎರಡು ದಿನಗಳಿಂದ ನೀವು ಯಾರಿಗಾಗಿ ಕಣ್ಣೀರು ಸುರಿಸುತ್ತಿದ್ದೀರೋ ಆ ಕಾಂಗ್ರೆಸ್‌ನ ಮಾಜಿ ಪ್ರಧಾನಿಯ ಗೌರವಕ್ಕಾಗಿ ಎದುರಿಸಿ' ಎಂದು ಹೇಳಿದರು.

      ರಾಜೀವ್ ಗಾಂಧಿ ಅವರ ಹೆಸರನ್ನು ಮುಂದಿಟ್ಟುಕೊಂಡು ಬಾಕಿ ಉಳಿದಿರುವ ಚುನಾವಣೆಗಳನ್ನು ಎದುರಿಸುವಂತೆ ಅವರು ಸವಾಲು ಹಾಕಿದರು.

      'ನಿಮ್ಮ ತಂದೆ ಮಿಸ್ಟರ್ ಕ್ಲೀನ್ ಎಂದು ನಿಮ್ಮ ಕುಟುಂಬಕ್ಕೆ ಆಪ್ತರಾಗಿರುವವರು ಹೇಳುತ್ತಾರೆ. ಆದರೆ, ನಿಮ್ಮ ತಂದೆಯ ಬದುಕು ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು' ಎಂದು ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+