ನಕಲಿ ಬಾಬಾ, ಸ್ವಾಮೀಜಿಗಳ ಪಟ್ಟಿ ಬಹಿರಂಗ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಸೆ. 11:ಭಾರತದಲ್ಲಿರುವ ನಕಲಿ ಬಾಬಾ, ಸ್ವಾಮೀಜಿಗಳ ಪಟ್ಟಿಯನ್ನು ಹಿಂದೂ ಸಾಧು ಸಂತರ ಪರಮೋಚ್ಚ ಮಂಡಳಿಯಾದ ಅಖಿಲ ಭಾರತೀಯ ಅಖಾರ ಪರಿಷತ್ ಬಿಡುಗಡೆ ಮಾಡಿದೆ.

ಅಖಾರ ಪರಿಷತ್ತಿನಡಿಯಲ್ಲಿ 13ಕ್ಕೂ ಅಧಿಕ ಅಧಿಕೃತ ಅಖಾರಗಳು, ಧಾರ್ಮಿಕ ಸಂಸ್ಥೆಗಳು ಬರಲಿವೆ. ಭಾರತದಲ್ಲಿ ಬಾಬಾಗಳ ರೂಪದಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವವರ ಮೇಲೆ ನಿಗಾ ವಹಿಸಲು, ನಿಯಂತ್ರಿಸಲು ಈ ಪಟ್ಟಿ ನೆರವಿಗೆ ಬರಲಿದೆ.

ಸ್ವಯಂಘೋಷಿತ ದೇವಮಾನವರಾದ ದೇರಾ ಸಚ್ಚಾ ಸೌಧದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದೆನಿಸಿ ಜೈಲು ಸೇರಿದ ಬಳಿಕ ಪಟ್ಟಿ ತಯಾರಿಸಲು ಅಖಾರ ಮುಂದಾಯಿತು.

Asaram Bapu

ಈ ಪಟ್ಟಿಯಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್, ಹರ್ಯಾಣದ ನಾಯಕ ರಾಮ್ ಪಾಲ್, ಅತ್ಯಾಚಾರ ಆರೋಪ ಹೊತ್ತಿರುವ ಅಸಾರಾಮ್ ಬಾಪು ಹಾಗೂ ಆತನ ಮಗ ನಾರಾಯಣ ಸಾಯಿ ಹೆಸರಿವೆ.

ಸಾರ್ವಜನಿಕರು ಈ ನಕಲಿ ಬಾಬಾಗಳ ಬಗ್ಗೆ ಎಚ್ಚರದಿಂದಿರಬೇಕು ಸಾಧು ಸನ್ಯಾಸಿಗಳನ್ನು ನಂಬುವುದು ವೈಯಕ್ತಿಕ ವಿಷಯವಾದರೂ, ಅನಾಚಾರ, ಅಕ್ರಮ, ಅತ್ಯಾಚಾರ ಎಸಗಿದ ಆರೋಪಿಗಳನ್ನು ನಂಬುವುದು ಸರಿಯಲ್ಲ ಎಂದು ಸ್ವಾಮಿ ನರೇಂದ್ರ ಗಿರಿ ಕೋರಿದ್ದಾರೆ.

1. ಅಸಾರಾಮ್ ಬಾಪು (ಅಸುಮಾಲ್ ಸಿರುಮಲಾನಿ)
2. ಸುಖ್ ಬಿಂದರ್ ಕೌರ್ (ರಾಧೇ ಮಾ)
3. ಸಚ್ಚಿದಾನಂದ ಗಿರಿ (ಸಚಿನ್ ದತ್ತಾ)
4. ಗುರ್ಮೀತ್ ಸಿಂಗ್, ದೇರಾ ಸಚ್ಚಾ ಸೌದಾ
5. ಓಂ ಬಾಬಾ (ವಿವೇಕಾನಂದ ಝಾ)
6. ನಿರ್ಮಲ್ ಬಾಬ (ನಿರ್ಮಲ್ ಜೀತ್ ಸಿಂಗ್)
7. ಇಚ್ಛಾಧಾರಿ ಭಿಮಾನಂದ (ಶಿವಮೂರ್ತಿ ದ್ವಿವೇದಿ)
8. ಸ್ವಾಮೀ ಆಸೀಮಾನಂದ
9. ಓಂ ನಮಹಾ ಶಿವಾಯ್ ಬಾಬಾ
10. ನಾರಾಯಣ ಸಾಯಿ
11. ರಾಮ್ ಪಾಲ್
12. ಆಚಾರ್ಯ ಕುಷ್ಮುನಿ
13. ಬೃಹಸ್ಪತಿ ಗಿರಿ
14. ಮಲ್ಖಾನ್ ಸಿಂಗ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: List of fake babas in India
English summary
The Akhil Bharatiya Akhara Parishad (ABAP), the top body of Hindu sadhus released a list of fake babas in India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ