ಕೊರೊನಾ ಮರಣ ಪ್ರಮಾಣ ತೀವ್ರವಾಗಿ ಹೆಚ್ಚುತ್ತಿರುವ ಕರ್ನಾಟಕ ಸೇರಿ, 4 ರಾಜ್ಯಗಳ 16 ಜಿಲ್ಲೆಗಳು
ನವದೆಹಲಿ, ಆ 10: ಕಳೆದ ಒಂದು ವಾರದಲ್ಲಿ ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ, ಗುಣಮುಖರಾಗುತ್ತಿರುವವರ ಶೇಕಡಾವಾರು ಪ್ರಮಾಣವೂ ಹೆಚ್ಚಾಗುತ್ತಿವೆ.
ಇನ್ನು, ದೇಶದ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಹತ್ತು ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಗುಣಮುಖರಾಗುತ್ತಿರುವವರು ಸರಾಸರಿ ಶೇ. 68.32.
ಅತಿಹೆಚ್ಚು ಮರಣ ಹೊಂದಿದವರ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳು ಮಹಾರಾಷ್ಟ್ರ ಮತ್ತು ದೆಹಲಿಗಳಾಗಿವೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳು ಸುಮಾರು 6.23ಲಕ್ಷ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ನಾಲ್ಕು ರಾಜ್ಯಗಳ ಹದಿನಾರು ಜಿಲ್ಲೆಗಳಲ್ಲಿ, ಸೋಂಕಿತರ ಮರಣ ಪ್ರಮಾಣ, ದೇಶದ ಸರಾಸರಿಗಿಂತಲೂ ಹೆಚ್ಚು ಎನ್ನುವ ಎಚ್ಚರಿಕೆಯನ್ನು ನೀಡಿದೆ.

ಕರ್ನಾಟಕ ಸೇರಿ, 4 ರಾಜ್ಯಗಳ 16 ಜಿಲ್ಲೆಗಳು
ಹಾಗಾಗಿ, ನಾಲ್ಕು ರಾಜ್ಯಗಳಿಗೆ ತುರ್ತು ಅಲರ್ಟ್ ಹೊರಡಿಸಿರುವ ಕೇಂದ್ರ ಸರಕಾರ, ಹದಿನಾರು ಜಿಲ್ಲೆಗಳಲ್ಲಿ ದೈನಂದಿನ ಪರೀಕ್ಷೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಹೆಚ್ಚಿನ ಅಂಬುಲೆನ್ಸ್ ಒದಗಿಸಲು ಸೂಚಿಸಲಾಗಿದೆ. ಕರ್ನಾಟಕ ಸೇರಿ, 4 ರಾಜ್ಯಗಳ 16 ಜಿಲ್ಲೆಗಳ ಪಟ್ಟಿ ಕೆಳಗಿನಂತಿದೆ: (ಚಿತ್ರದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್)

ಕೊರೊನಾ ಆಘಾತ
ಆಂಧ್ರ ಪ್ರದೇಶ: ಹೈದರಾಬಾದ್
ತೆಲಂಗಾಣ: ಮೇಡಚಲ್ - ಮಲ್ಕಾಜ್ ಗಿರಿ
ಗುಜರಾತ್ : ಅಹಮದಾಬಾದ್
ಗುಜರಾತ್: ಸೂರತ್

ತಮಿಳುನಾಡು
ಕಾಂಚೀಪುರಂ
ತೂತುಕುಡಿ
ರಾಣಿಪೇಟೆ
ಧೇಣಿ
ತಿರುವಳ್ಳೂರು
ತಿರುಚಿನಾಪಳ್ಳಿ
ಚೆನ್ನೈ
(ಎಲ್ಲಾ ತಮಿಳುನಾಡಿನ ಜಿಲ್ಲೆಗಳು)

ಅತಿಹೆಚ್ಚು ಕೊರೊನಾ ರಾಜ್ಯದ ಜಿಲ್ಲೆಗಳು
ಬೆಳಗಾವಿ
ಬೆಂಗಳೂರು ನಗರ
ಕಲಬುರಗಿ
ಉಡುಪಿ












Click it and Unblock the Notifications