Union Budget 2025: ಕೇಂದ್ರ ಬಜೆಟ್‌ ಮಂಡನೆ ದಿನಾಂಕ, ಸಮಯ ಹಾಗೂ ಪ್ರತಿ ಎಲ್ಲಿ ಸಿಗುತ್ತದೆ ತಿಳಿಯಿರಿ

Union Budget 2025: ಮಂಬರುವ 2025-2ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಲಿದ್ದಾರೆ. ಹಾಗಾದರೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿವರೆಗೂ ಎಷ್ಟು ಬಜೆಟ್‌ ಮಂಡಿಸಿದ್ದಾರೆ? ಮುಂಬರುವ ಬಜೆಟ್‌ ಎಷ್ಟನೇಯದ್ದು ಹಾಗೂ ದಿನಾಂಕ, ಸಮಯಗಳು, ಪ್ರತಿ ಎಲ್ಲಿ ಸಿಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕೇಂದ್ರ ಬಜೆಟ್ 2025-26 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದಯ ಮಂಡಿಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ 3ನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಲಿದ್ದು, ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಲಿರುವ 8ನೇ ಕೇಂದ್ರ ಬಜೆಟ್‌ ಆಗಲಿದೆ.

Know Details of Union Budget 2025 Presentation Date and Timings

ಕೇಂದ್ರ ಬಜೆಟ್ ಮಂಡನೆ ದಿನಾಂಕ & ಸಮಯ: ಕೇಂದ್ರ ಬಜೆಟ್ 2025 ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್‌ ಅಧಿವೇಶನದ ವೇಳೆ ಮಂಡಿಸಲಿದ್ದಾರೆ. ಸಂಸತ್‌ನ ಬಜೆಟ್ ಅಧಿವೇಶ ಜನವರಿ ಅಂತ್ಯದಲ್ಲು ಆರಂಭವಾಗುವ ಸಾಧ್ಯತೆಯಿದ್ದು, ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದಾಗಲಿದ್ದು, ಇದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿವೆ.

ಬಜೆಟ್‌ ಮಂಡನೆ ವೀಕ್ಷಿಸುವುದೇಗೆ?: ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನ ಪ್ರಸಾರ ಮಾಡಲಾಗುತ್ತದೆ. ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗಳು ಕೇಂದ್ರ ಬಜೆಟ್ 2025-26ರ ಮಂಡನೆಯನ್ನು ಪ್ರಸಾರ ಮಾಡಲಿವೆ.

ಬಜೆಟ್ ಪ್ರತಿ ಎಲ್ಲಿ ಸಿಗುತ್ತದೆ?: ಕೇಂದ್ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್‌ ಮೊಬೈಲ್ ಆಪ್‌ನಲ್ಲಿ ಪಿಡಿಎಫ್‌ ಪ್ರತಿಯ ರೂಪದಲ್ಲಿ ಸಿಗಲಿದೆ. ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ಅಥವಾ Android ಮತ್ತು iOS ಬಳಕೆದಾರರು ಯೂನಿಯನ್ ಬಜೆಟ್‌ನ ಬಹುಭಾಷಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಬಜೆಟ್‌ ಪ್ರತಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿದೆ.

ಕೇಂದ್ರ ಬಜೆಟ್ 2025 ಮಂಡನೆಗೆ ಇನ್ನೂ ಕೇಲವೇ ದಿನಗಳು ಮಾತ್ರ ಬಾಕಿಯಿಚೆ. ಇನ್ನು ಮಧ್ಯಮ ವರ್ಗದವರಯ ಈ ಬಜೆಟ್‌ನಲ್ಲಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದಂತೆಯೇ ಬಜೆಟ್‌ ಮಂಡನೆ ಆದರೆ ಮಧ್ಯಮ ವರ್ಗದವರಿಗೆ ಪಾಯಸ ಕುಡಿದಷ್ಟು ಸಂತಪಡಲಿದ್ದಾರೆ. ಹಾಗೆಯೇ ಹಲವು ಕ್ಷೇತ್ರಗಳಲ್ಲಿ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಆದಾಯ ತೆರಿಗೆ ವಿನಾಯಿತಿ ಎಷ್ಟು ಸಿಗಬಹುದು ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+