ಭಾಷೆ - ಧರ್ಮೋನ್ಮಾದಕ್ಕೆ ಜೀವ ಬಲಿ ಕೊಟ್ಟ ಕೇರಳ- ಬಾಂಗ್ಲಾ: ಉದೈಫ್ ಅನಕ್ಕಲ್ ಬರಹ
ಭಾರತದ ಕೇರಳ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳು ಈಚೆಗೆ ಸಂಭವಿಸಿವೆ. ಈ ಎರಡೂ ಘಟನೆಗಳಲ್ಲಿ ಮೃತಪಟ್ಟವರು ಒಂದೇ ವಯಸ್ಸಿನವರು, ಯುವಕರು ಹಾಗೂ ಕಡಿಮೆ ವೇತನಕ್ಕೆ ದಿನಗೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಮನಕಲಕುವ, ದಾರುಣ ಘಟನೆ ಹಾಗೂ ಅದರ ಹಿನ್ನೆಲೆಯ ಬಗ್ಗೆ ಹವ್ಯಾಸಿ ಬರಹಗಾರ ಉದೈಫ್ ಅನಕ್ಕಲ್, ಕಾಸರಗೋಡು ಅವರ ವಿಶೇಷ ಬರಹ ಇಲ್ಲಿದೆ.
ಎರಡು ದೇಶಗಳು, ಇಬ್ಬರು ವ್ಯಕ್ತಿಗಳು. ಒಂದೇ ದಿನ, ಒಂದೇ ಕಾರಣಕ್ಕಾಗಿ ಕೊಲ್ಲಲ್ಪಟ್ಟರು .ಒಬ್ಬರು ಬಾಂಗ್ಲಾದೇಶದಲ್ಲಿ ಇನ್ನೊಬ್ಬರು ಕೇರಳದಲ್ಲಿ. ದೀಪು ದಾಸ್ ಚಂದ್ರ ಮತ್ತು ರಾಮ್ ನಾರಾಯಣ್ ಸುಮಾರು ಒಂದೇ ವಯಸ್ಸಿನ ಯುವಕರು. ಕಡಿಮೆ ವೇತನಕ್ಕೆ ದಿನಗೂಲಿ ಕೆಲಸ ಮಾಡುವ ಕಾರ್ಮಿಕರು.
ಇಬ್ಬರು ತಮ್ಮ ಕುಟುಂಬಗಳ ಆಧಾರಸ್ತಂಭ ಆಗಿದ್ದವರು. ಅವರಿಬ್ಬರಿಗೂ ಮನೆಯಲ್ಲಿ ತಂದೆ, ತಾಯಿ, ಹೆಂಡತಿ, ಮಕ್ಕಳಿದ್ದಾರೆ.

ದೀಪು ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ. ಎಂದಿನಂತೆ ಕೆಲಸಕ್ಕೆ ಬರುವನು. ಆ ದಿನ ವಿಶ್ವ ಅರೇಬಿಕ್ ಭಾಷಾ ದಿನವಾಗಿತ್ತು. ಕೆಲಸದ ವಿರಾಮದ ಸಮಯದಲ್ಲಿ, ದೀಪು ಮತ್ತು ಅವನ ಸಹೋದ್ಯೋಗಿ ಅರೇಬಿಕ್ ಭಾಷೆಯ ಬಗ್ಗೆ ಮಾತನಾಡಲು ಪ್ರಾರಂಭಿಸುವರು. ಸಂಭಾಷಣೆ ಕಾವೇರಿ ಮೌಖಿಕ ವಾದಕ್ಕೆ ತಿರುಗುವುದು .
ಕಾರ್ಖಾನೆಯಲ್ಲಿ ನಡೆದ ಒಂದು ಸಣ್ಣ ಜಗಳ ಕಾರ್ಖಾನೆಯ ಹೊರಗೆ ಹರಡುವುದು. ದೀಪು ದೇವದೂಷಣೆ ಮಾಡಿದ್ದಾನೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹರಡುವುದು.. ಸಾವಿರಾರು ಮುಸ್ಲಿಂ ಮೂಲಬೂತವಾದಿಗಳು ಕಾರ್ಖಾನೆಯ ಮುಂದೆ ಜಮಾಯಿಸುವರು. ಇದಕ್ಕಿದ್ದಂತೆ ಹಿಂಸಾತ್ಮಕ ರೂಪ ತಾಳಿ ಕಿರುಚಲು ಶುರು ಮಾಡುವುದನ್ನು ಮನಗಂಡ ಕಾರ್ಖಾನೆಯ ನೌಕರರು ದೀಪುವಿನ ಜೀವ ಉಳಿಸಲು ಕಾರ್ಖಾನೆಯ ಸುರಕ್ಷಿತ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಪೊಲೀಸರಿಗೆ ಕರೆ ಮಾಡುವರು. ಪೊಲೀಸರು ಸ್ಥಳಕ್ಕೆ ತಲುಪುವರು.
'ನಾನು ಯಾರ ಮೇಲೂ ದೌರ್ಜನ್ಯ ನಡೆಸಿಲ್ಲ' ಎಂದು ಅಳುತ್ತಾ ಪೊಲೀಸರಿಗೆ ಹೇಳುತ್ತಿದ್ದ. ಪೊಲೀಸರು ಅಸಹಾಯಕರಾಗಿದ್ದಾರೆ. ಜಮಾಯಿಸಿದ ಗಲಭೆಕೋರರು ಗುಂಪು ಗೇಟಿನ ಹೊರಗಡೆ ಕಿರುಚುತ್ತಲೇ ಇರುವರು ದೀಪುವಿನ ಬಿಡುಗಡೆ ಸಾಧ್ಯವಾಗದಿದ್ದಾಗ ಬಲಪ್ರಯೋಗದ ಮೂಲಕ ಕಾರ್ಖಾನೆಯ ಗೇಟನ್ನು ಒಡೆದು ಒಳಗೆ ನುಗ್ಗುವರು. ಬಾಗಿಲುಗಳನ್ನು ಒಡೆದು ಒಳಗೆ ಪ್ರವೇಶಿಸಿ ದೀಪುವನ್ನು ಹೊರಗೆ ಎಳೆದುಕೊಂಡು ಹೋಗುವರು. ಆಯುಧಗಳಿಂದ ಹೊಡೆದು,ಕ್ರೂರವಾಗಿ ಥಳಿಸಿ ರಕ್ತ ಚೆಲ್ಲುವರು, ಅಲ್ಲೂ ಮುಗಿಯದೆ ಅರ್ಧ ಜೀವವಿರುವ ದೀಪುವನ್ನು ಉಗ್ರಗಾಮಿ ಗುಂಪು ಮರಕ್ಕೆ ಕಟ್ಟಿಹಾಕಿ ಸುಟ್ಟು ಹಾಕುವರು. ..!
ಕೇರಳದಲ್ಲಿ ರಾಮ್ ನಾರಾಯಣ್ ಯುವಕನ ನೋವಿನ ಕಥೆ
ರಾಮ್ ನಾರಾಯಣ್ ...ಕೆಲಸದಿಂದ ವಿರಾಮ ತೆಗೆದು ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ಹಿಂದಿರುಗುವ ಮೊದಲು, ಪಾಲಕ್ಕಾಡ್‌ನ ಕಂಚಿಕೋಡ್‌ನಲ್ಲಿ ಕೆಲಸದಲ್ಲಿರುವ ಸಂಬಂಧಿಯನ್ನು ಭೇಟಿ ಮಾಡಿ,ರೈಲು ಮೂಲಕ ಹಿಂದಿರುಗುವುದಕ್ಕೆ ಮುಂದಾಗಿದ್ದ, ಸ್ಥಳ ಪರಿಚಯ ಕಡಿಮೆಯಾದ ಕಾರಣ ರಾಮ್ ನಾರಾಯಣ್ ಅಲೆಯುತ್ತಾ ಅಟ್ಟಪ್ಪಲಂ ಎಂಬ ಸ್ಥಳವನ್ನು ತಲುಪಿದ್ದ.
ವಲಯಾರ್ ಅಟ್ಟಪ್ಪಲಂ ತಲುಪಿದ ರಾಮ್ ಅವರನ್ನು ಹಿಂದುತ್ವವಾದಿಗಳು ತಡೆದರು. ಪ್ರಶ್ನೆ ಪ್ರಾರಂಭವಾಯಿತು, ಗುಂಪಿನ ವಿಚಾರಣೆಯನ್ನು ನೋಡಿ ನಾರಾಯಣ್ ಭಯಭೀತರಾಗಿದ್ದರು. ಹೆಚ್ಚೇನು ಕೇಳದ ದಾಳಿಕೋರರು ಹೊಡೆಯಲು ಪ್ರಾರಂಭಿಸುವರು ನೀನು ಎಲ್ಲಿಂದ ಬಂದಿದ್ದೀ? ನೀನು ಬಾಂಗ್ಲಾದೇಶಿಯೇ? " ನೀನು ಕಳ್ಳತನಕ್ಕೆ ಬಂದಿದ್ದೀಯಾ.." " ನಿನ್ನೊಂದಿಗೆ ಇನ್ಯಾರಾದರೂ ಇದ್ದಾರೆಯೇ.."
ಪ್ರಶ್ನೆಗಳು ಒಂದರ ನಂತರ ಒಂದರಂತೆ ಪುನರಾವರ್ತನೆಯಾಗುತ್ತಿದ್ದವು. ಅವನಿಗೆ ಮಲಯಾಳಂ ಬರುತ್ತಿರಲಿಲ್ಲ. ಏನೋ ಹೇಳಲು ಪ್ರಯತ್ನಿಸುತ್ತಿದ್ದನು, ದಾಳಿಕೋರರಿಗೆ ಉತ್ತರ ಬೇಕಾಗಿರಲಿಲ್ಲ. ಪ್ರತಿಯೊಂದು ಪ್ರಶ್ನೆಗೆ, ಕ್ರೂರವಾಗಿ ಥಳಿಸಲಾಯಿತು. ಅವನ ತಲೆ, ಮುಖ, ಎದೆ ಹಾಗೂ ಹೊಟ್ಟೆಯ ಮೇಲೆ ಬಲವಾಗಿ ಹೊಡೆಯಲಾಯಿತು. ದಾಳಿಕೋರರು ಒಟ್ಟುಗೂಡಿ ಅವನನ್ನು ಹೊಡೆಯುತ್ತಲೇ ಇದ್ದರು. ಕಾಲಲ್ಲಿ ತಿವಿಯುತ್ತ, ಎಳೆದಾಡಿ ಅಟ್ಟಾಡಿಸುತ್ತಿದ್ದರು. ನಾನು ಕಳ್ಳನಲ್ಲ.. " ನಾನು ಮನೆಗೆ ಹೋಗಬೇಕು " ನಾನು ಕಂಚಿಕೋಡ್‌ನಲ್ಲಿ ಕೆಲಸ ಮಾಡುತ್ತೇನೆ.." ಪದೇ ಪದೇ ಹೊಡೆಯುತ್ತಿದ್ದ ಹೊಡೆತಗಳ ನಡುವೆ ಅವನು ಹಿಂದಿಯಲ್ಲಿ ಗೊಣಗುತ್ತಿದ್ದ. ದಾಳಿಕೋರರು ಕೇಳಲಿಲ್ಲ.
ಕೊನೆಗೆ, ಹೊಡೆತದಿಂದ ಸುಸ್ತಾಗಿದ್ದ ಅವನು ನೀರಿಗಾಗಿ ಬೇಡಿಕೊಂಡನು. ಆಗಲೂ, ಬರೀ ಹೊಡೆಯುವುದೊಂದೇ ಪ್ರತಿಕ್ರಿಯೆ. ತನ್ನ ಜೇಬಿನಲ್ಲಿದ್ದ ರೈಲು ಟಿಕೆಟ್ ತೋರಿಸಲು ತನ್ನ ಕೈಲಾದಷ್ಟು ಪ್ರಯತ್ನಿಸಿದನು. ಪ್ರಯೋಜನೆಯಿರಲಿಲ್ಲ. ಕೊನೆಗೆ, ರಕ್ತ ಉಗುಳುತ್ತಾ ಅವರ ಮುಂದೆ ಸಾವಿಗೆ ಶರಣಾದ! ದೀಪು ದಾಸ್ ಮತ್ತು ರಾಮ್ ನಾರಾಯಣ್ ಕೊಲ್ಲಲ್ಪಟ್ಟ ಕಾರಣ ಅವರಿಗೆ ತಿಳಿದಿಲ್ಲ. ಗುಂಪು ವಿಚಾರಣೆಯಲ್ಲಿ ಅವರಿಗೆ ಮರಣದಂಡನೆ ವಿಧಿಸಿದಾಗ, ಅವರಿಗೆ ಕೊನೆಯದಾಗಿ ನೆನಪಾಗುವುದು ಮನೆಯಲ್ಲಿ ಅವರಿಗಾಗಿ ಕಾಯುತ್ತಿದ್ದ ಅವರ ಪುಟ್ಟ ಮಕ್ಕಳ ಮುಖಗಲಾಗಿರಬಹುದು.
ಅವರಿಬ್ಬರನ್ನೂ ಕೊಂದದ್ದು ದ್ವೇಷ. ಧರ್ಮದ ಮೇಲಿನ ದ್ವೇಷ. ಜಾತಿಯ ಮೇಲಿನ ದ್ವೇಷ. ಬಣ್ಣ, ಭಾಷೆ, ದೇಶದ ಮೇಲಿನ ದ್ವೇಷ. ದೀಪು ದಾಸ್ ಚಂದ್ರ ಮತ್ತು ರಾಮ್ ನಾರಾಯಣ್ ಬಾಘೇಲ್ ಇಬ್ಬರ ದೇಹಗಳಿಂದ ಚೆಲ್ಲಿದ ರಕ್ತ ಒಂದೇ ಬಣ್ಣದ್ದಾಗಿತ್ತು.
ಮೈ ಮುರಿದು ಕೆಲಸ ಮಾಡಿದವರ ರಕ್ತ, ಬಡವರ ರಕ್ತ ನಿಮ್ಮ ಧರ್ಮ ಅಲ್ಲದವರ ಮೇಲೆ, ನಿಮ್ಮ ಜಾತಿ ಅಲ್ಲದವರ ಮೇಲೆ ,ನಿಮ್ಮ ಭಾಷೆ, ಬಣ್ಣ ,ದೇಶವಲ್ಲದವರ ಮೇಲೆ ನೀವು ದ್ವೇಷವಿಟ್ಟುಕೊಳ್ಳುವುದಾದರೆ ನಾಳೆ ನೀವು ಕೂಡ ಕೊಲೆಗಾರರಾಗುತ್ತೀರಿ ಖಂಡಿತ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications