Kerala: ಕೇರಳಂ ವಿಧಾನಸಭೆ ಚುನಾವಣೆ 2026: ಎಲ್‌ಡಿಎಫ್–ಯುಡಿಎಫ್ ನಡುವೆ ಪೈಪೋಟಿ, ಹೇಗಿದೆ ರಾಜಕೀಯ ಕಣ
Kerala Assembly Election 2026: ಕೇರಳಂ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ಬಾರಿ ಕೇರಳಂನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಇದೇ ಸಂದರ್ಭದಲ್ಲಿ ಕಳೆದ ಎರಡು ಅವಧಿಯಿಂದಲೂ ಅಧಿಕಾರದಲ್ಲಿ ಇರುವ ಎಡ ಪ್ರಜಾಸತ್ತಾತ್ಮಕ ರಂಗ (LDF) ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದರೆ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಈ ಬಾರಿ ಅಧಿಕಾರಕ್ಕೇರುವ ತವಕದಲ್ಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಆದರೆ ಎಲ್‌ಡಿಎಫ್ ಪ್ರಬಲ ಪೈಪೋಟಿ ನೀಡುತ್ತಿದೆ. ಇನ್ನು ಈಚೆಗೆ ಕೇರಳಂ ರಾಜಧಾನಿ ತಿರುವನಂತಪುರ ಪಾಲಿಕೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಸಹ ಈ ಬಾರಿಯ ಕೇರಳಂನಲ್ಲಿ ಹೊಸ ಹುಮ್ಮಸ್ಸಿನಿಂದ ಚುನಾವಣಾ ಕಣಕ್ಕೆ ಇಳಿದಿದೆ.
ಭಾರತದಲ್ಲಿ ಕಮ್ಯುನಿಸ್ಟ್ ಆಡಳಿತವಿರುವ ಏಕೈಕ ರಾಜ್ಯವೆಂದರೆ ಅದು ಕೇರಳಂ. ಕೇರಳಂನಲ್ಲಿ ಎಡಪಂಥೀಯ ರಾಜಕೀಯಕ್ಕೆ ಸದಾ ಮನ್ನಣೆ ಇದೆ. ಈ ಬಾರಿ ಕೇರಳಂನಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. ಕಳೆದ 10 ವರ್ಷಗಳಿಂದಲೂ ಕೇರಳಂನಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಧಿಕಾರದಲ್ಲಿದೆ.

ಎಡ ಪ್ರಜಾಸತ್ತಾತ್ಮಕ ರಂಗ (LDF)ಕ್ಕೆ ಆಡಳಿತ ವಿರೋಧಿ ಅಲೆ ಭೀತಿ
ಕಳೆದ 10 ವರ್ಷಗಳಿಂದಲೂ ಕೇರಳಂನಲ್ಲಿ ಅಧಿಕಾರದಲ್ಲಿ ಇರುವ ಎಲ್‌ಡಿಎಫ್ ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಕಳೆದ ಬಾರಿ ಕೇರಳಂನಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ನಿಭಾಯಿಸಿದ್ದು, ಅಂದಿನ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರ ಆಡಳಿತ ನೀತಿಯು ಎಲ್‌ಡಿಎಫ್‌ಗೆ ಬಲ ತಂದುಕೊಟ್ಟಿತ್ತು. ಅಲ್ಲದೆ ಇದೇ ಕಾರಣಕ್ಕೆ ಎರಡನೇ ಬಾರಿ ಅಧಿಕಾರಕ್ಕೇರುವುದಕ್ಕೂ ಸಹಾಯವಾಗಿತ್ತು. ಆದರೆ ಈ ಬಾರಿಯ ಸಚಿವ ಸಂಪುಟದಲ್ಲಿ ಶೈಲಜಾ ಅವರಿಗೆ ಅವಕಾಶ ನೀಡಿಲ್ಲ. ಪಿಣರಾಯಿ ವಿಜಯನ್ (80) ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದು, ಈ ಬಾರಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಶಬರಿ ಮಲೆ ಚಿನ್ನದ ಆಭರಣಗಳ ಕಳ್ಳತನ ಪ್ರಕರಣ
ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆಯಲ್ಲಿ ಚಿನ್ನದ ಆಭರಣಗಳು ಕಳುವಾಗಿರುವುದು ಸರ್ಕಾರಕ್ಕೆ ಭಾರೀ ಮುಖಭಂಗವನ್ನು ತಂದೊಡ್ಡಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಸೇರಿದಂತೆ ಎಲ್‌ಡಿಎಫ್‌ನ ಹಲವು ನಾಯಕರ ಹೆಸರುಗಳು ಸಹ ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಇದನ್ನೇ ಬಿಜೆಪಿ ಇಲ್ಲಿ ಅಸ್ತ್ರವನ್ನಾಗಿಸಿಕೊಂಡಿದೆ.
ಪಿಣರಾಯಿ ವಿಜಯನ್ ಅವರ ವರ್ತನೆ
ಕೇರಳಂನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಮೃದುಸ್ವಭಾವ ಹೊಂದಿಲ್ಲ, ಮೊದಲಿನಂತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಅಲ್ಲದೆ ಪಿಣರಾಯಿ ವಿಜಯನ್ ಅವರು ಈಚೆಗೆ ಪತ್ರಕರ್ತರ ಮೇಲೆ ಗರಂ ಆಗಿದ್ದ ವಿಚಾರವೂ ಭಾರೀ ಸುದ್ದಿಗೆ ಕಾರಣವಾಗಿತ್ತು.
ಪ್ರಮುಖ ಸಚಿವರ ಕಾರ್ಯವೈಖರಿ
ಕೇರಳಂನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹಾಗೂ ಸಾರಿಗೆ ಸಚಿವ ಗಣೇಶ್ ಕುಮಾರ್ ಅವರ ಕಾರ್ಯವೈಖರಿ, ವೈಯಕ್ತಿಕ ಬದುಕಿನ ವಿಚಾರಗಳು ಸಹ ಕೇರಳಂ ಸರ್ಕಾರಕ್ಕೆ ಮುಖಭಂಗ ತಂದಿದೆ. ಕೇರಳಂನ ಆರೋಗ್ಯ ಇಲಾಖೆಯಲ್ಲಿ ಹಲವು ನ್ಯೂನ್ಯತೆಗಳು ಎದುರಾಗಿವೆ. ಇನ್ನು ಸಾರಿಗೆ ಸಚಿವ ಗಣೇಶ್ ಕುಮಾರ್ ಅವರು ಈಚೆಗೆ ಎರಡನೇ ಬಾರಿ ಮದುವೆಯಾಗಿದ್ದರು, ಇದರ ಹೊರತಾಗಿಯೂ ವಿವಾಹೇತರ ಸಂಬಂಧದ ವಿಚಾರ ಭಾರೀ ಸುದ್ದಿಯಾಗಿದ್ದು, ಚುನಾವಣೆಯ ಹೊಸ್ತಿನಲ್ಲಿರುವಾಗ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಿದೆ.
ಎಲ್‌ಡಿಎಫ್ ಲೋಪಗಳೇ ಯುಡಿಎಫ್‌ಗೆ ವರದಾನ
ಇನ್ನು ಈ ಬಾರಿ ಕೇರಳಂನಲ್ಲಿ ಎಲ್‌ಡಿಎಫ್‌ನ ನ್ಯೂನ್ಯತೆಯೇ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ವರದಾನವಾಗಿದೆ. ಕಾಂಗ್ರೆಸ್ ಮುಖಂಡ, ಕೇರಳಂ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರ ನೇತೃತ್ವ ಬಲ ನೀಡಿದೆ. ನವ ಕೇರಳಂ ಬಸ್ ಯೋಜನೆಯು ಅಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಸ್‌ನಲ್ಲಿ ಎಲ್ಲ ಸಚಿವರು ಸೇರಿ ಪ್ರವಾಸ (ಸ್ಥಳ ವೀಕ್ಷಣೆ ಮಾಡುವುದು ಯೋಜನೆಯ ಉದ್ದೇಶ) ಆದರೆ, ಕೇರಳಂ ಸಾಲದಲ್ಲಿ ಇರುವಾಗ ಈ ರೀತಿ ರಾಜಕಾರಣಿಗಳಿಗೆ ಐಷಾರಾಮಿ ಸೌಲಭ್ಯ ನೀಡಿದ್ದು ಟೀಕೆಗೆ ಗುರಿಯಾಗಿತ್ತು. ಈ ವಿಚಾರವು ಕೇರಳಂನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವನ್ನು ತಂದುಕೊಟ್ಟಿದೆ.
ಶಬರಿಮಲೆ ಚಿನ್ನದ ಆಭರಣಗಳ ಕಳ್ಳತನವನ್ನು ಕಾಂಗ್ರೆಸ್ ಆಂದೋಲವನಾಗಿ ಬದಲಾಯಿಸಿದೆ. ಕೇರಳಂನಲ್ಲಿನ ಆಡಳಿತ ಪಕ್ಷದ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಲಾಭವಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ.
Kerala Assembly Elections 2026 ಕೇರಳಂನಲ್ಲಿ ಬಿಜೆಪಿ ಹೇಗಿದೆ
ಕೇರಳಂನಲ್ಲಿ ಬಿಜೆಪಿ ಈಗಲೂ ಸರ್ಕಸ್ ಮುಂದುವರಿಸಿದೆ. ಆದರೆ ಈಚೆಗೆ ತ್ರಿಷೂರ್ ಲೋಕಸಭೆ ಚುನಾವಣೆಯಲ್ಲಿ ನಟ, ರಾಜಕಾರಣ ಸುರೇಶ್ ಗೋಪಿ ಗೆದ್ದಿರುವುದು ಹಾಗೂ ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 26 ಗ್ರಾಮ ಪಂಚಾಯಿತಿ, ಎರಡು ನಗರಸಭೆಗಳಲ್ಲಿ ಹಾಗೂ ತಿರುವನಂತಪುರ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ಕೇರಳಂನಲ್ಲಿ ಬಿಜೆಪಿಗೆ ಹೊಸ ಭರವಸೆ ಮೂಡಿಸಿದೆ.
-
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
GST: ಕಾಂಗ್ರೆಸ್ ಜನರ ಪರವೋ ಅಥವಾ ಹೆಚ್ಚಿನ ತೆರಿಗೆ ದರದ ಪರವೋ? ಮಾಜಿ ಸಿಎಂ ನೇರ ಪ್ರಶ್ನೆ -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ: ರಾಜಕೀಯದಲ್ಲಿ ಹೊಸ ವಿವಾದ -
ಉಜ್ವಲ ಯೋಜನೆ ಬದಲು ಸೌದೆ ಒಲೆ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ -
ತಮಿಳುನಾಡಿನಲ್ಲಿ ರಂಗೇರಿದ ಅಖಾಡ: ಹೊಸ ಶಕ್ತಿಯಾಗಿ ವಿಜಯ್ ಪ್ರವೇಶ, ಪ್ರಮುಖ ಪಕ್ಷಗಳು, ಚರ್ಚೆಯ ವಿಷಯಗಳು -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ: ಸಿದ್ದರಾಮಯ್ಯ ಹೇಳಿಕೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ











Click it and Unblock the Notifications