Karnataka to Ayodhya Trains: ಕರ್ನಾಟಕದಿಂದ ಅಯೋಧ್ಯೆಗೆ ವಿಷೇಶ ರೈಲುಗಳ ಸೇವೆ, ಸಮಯ, ದಿನಾಂಕ, ಮಾರ್ಗಗಳ ವಿವರ ತಿಳಿಯಿರಿ

ಕರ್ನಾಟಕ, ಜನವರಿ, 16: ಅಯೋಧ್ಯೆಯ ಶ್ರೀರಾಮಮಂದಿರ ಜನವರಿ 22ರಂದು ಉದ್ಘಾಟನೆ ಆಗಲಿದ್ದು, ಈ ಕ್ಷಣಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಇನ್ನು ಅಯೋಧ್ಯೆಗೆ ಕರ್ನಾಕದಿಂದ ಅಯೋಧ್ಯೆಗೆ ಹೋಗುವವರಿಗೆ ವಿಶೇಷ ರೈಲುಗಳನ್ನು ಸಹ ಭಾರತೀಯ ರೈಲ್ವೆ ಕಲ್ಪಿಸಿದೆ. ಹಾಗಾದರೆ ರಾಜ್ಯದ ಯಾವ್ಯಾವ ಭಾಗಗಳಿಂದ ರೈಲು ಸೇವೆ ಇರಲಿದೆ? ಹಾಗೂ ಸಮಯ, ದಿನಾಂಕ, ದರಗಳ ವಿವರಗಳನ್ನು ಇಲ್ಲಿ ತಿಳಿಯಿರಿ.

ಇನ್ನು ಈ ವೇಳೆ ರಾಮಮಂದಿರ ಜೊತೆ ಇಲ್ಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಕೆಲವರು ಈಗಾಗಲೇ ಬಸ್, ಕ್ಯಾಬ್, ವಿಮಾನ, ರೈಲಿನ ಮೂಲಕ ಅಯೋಧ್ಯೆಗೆ ತೆರಳಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಅತಿ ಕಡಿಮೆ ದರ ಹಾಗೂ ಸುರಕ್ಷಿತ ಪ್ರಯಾಣದ ಸೌಲಭ್ಯ ಆಗಿರುವ ರೈಲಿನ ಮೂಲಕ ಅಯೋಧ್ಯೆಗೆ ಹೋಗುವುದು ಹೇಗೆ ಎನ್ನುವ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ.

Indian railways: Special trains service from Karnataka to Ayodhya, know details

ಸದ್ಯ ರಾಜ್ಯದಿಂದ ಅಯೋಧ್ಯೆಗೆ ಹೋಗಲು ಬೆಂಗಳೂರಿನಿಂದ ಮಾತ್ರ ರೈಲು ಸೇವೆಗಳು ಲಭ್ಯ ಇವೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್ ಗೊಯಿಬಿಬೋ ಮಾಹಿತಿ ಪ್ರಕಾರ, ಒಟ್ಟು 9 ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರ ಮಾಡುತ್ತಿದ್ದು, ಇದರಲ್ಲಿ 8 ರೈಲು ಸೇವೆಗಳು ಇವೆ.

ಯಾವ್ಯಾವ ಭಾಗಗಳಿಂದ ವಿಶೇಷ ರೈಲು

* ರೈಲು ಸಂಖ್ಯೆ 15024-ವೈಪಿಆರ್ ಜಿಕೆಪಿ ಎಕ್ಸ್‌ಪ್ರೆಸ್ - ಈ ರೈಲು ಪ್ರತಿ ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಿ ಮರು ದಿನ ಸಂಜೆ 4:25ಕ್ಕೆ ಅಯೋಧ್ಯೆಗೆ ತಲುಪುತ್ತದೆ. 1 ದಿನ 16 ಗಂಟೆ, 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 820 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ದೂರ 1,608 ಕಿಲೋ ಮೀಟರ್ ಆಗುತ್ತದೆ.

Indian railways: Special trains service from Karnataka to Ayodhya, know details

* ರೈಲು ಸಂಖ್ಯೆ 22534 - ವೈಪಿಆರ್ (ಯಶವಂತಪುರ) ಜಿಕೆಪಿ (ಗೋರಖ್‌ಪುರ) ಎಕ್ಸ್‌ಪ್ರೆಸ್ - ಈ ರೈಲು ಪ್ರತಿ ಬುಧವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:40ಕ್ಕೆ ಹೊರಟು, ಮರು ದಿನ ಸಂಜೆ 3:50ಕ್ಕೆ ಗೋಂಡಾ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪುತ್ತದೆ. 1 ದಿನ 16 ಗಂಟೆ, 10 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 855 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭ ಆಗುತ್ತದೆ. ದೂರ 1,641 ಕಿಲೋ ಮೀಟರ್ ಆಗುತ್ತದೆ.

* ರೈಲು ಸಂಖ್ಯೆ 12592 - ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಬೆಳಗ್ಗೆ 5:20ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.52ಕ್ಕೆ ಮಂಕಾಪುರಕ್ಕೆ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 32 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 865 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭ ಆಗುತ್ತದೆ. ದೂರ 1,636 ಕಿಲೋ ಮೀಟರ್ ಆಗುತ್ತದೆ.

* ರೈಲು ಸಂಖ್ಯೆ 01667 - ಯಶ್ವಂತಪುರ ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಸುಲ್ತಾನ್‌ಪುರಕ್ಕೆ ಬೆಳಗ್ಗೆ 5:30ಕ್ಕೆ ತಲುಪಲಿದೆ. (ಇಲ್ಲಿಂದ ಅಯೋಧ್ಯೆಗೆ 60 ಕಿಲೋ ಮೀಟರ್). ರೈಲು ಸಂಚಾರ ಮಾರ್ಗದ ದೂರ 1,549 ಕಿಲೋ ಮೀಟರ್ ಆಗಲಿದೆ. ಗಮನಿಸಿ ಈ ರೈಲು ಪ್ರಸ್ತುತ ಚಾಲನೆಯಲ್ಲಿ ಇಲ್ಲ.

* ರೈಲು ಸಂಖ್ಯೆ 05016 - ಯಶ್ವಂತಪುರ ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಯಶವಂತಪುರ ರೈಲ್ವೆ ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಲಿದ್ದು, ಮರುದಿನ ಮಧ್ಯಾಹ್ನ 3:50ಕ್ಕೆ ಗೋಂಡಾ ರೈಲು ನಿಲ್ದಾಣ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪಲಿದೆ. ರೈಲು ಸಂಚಾರ ಮಾರ್ಗದ ಅಂತರ 1,641 ಕಿಲೋ ಮೀಟರ್ ಆಗಲಿದೆ.

* ರೈಲು ಸಂಖ್ಯೆ 05024 - ಜಿಕೆಪಿ ಫೆಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಪ್ರತಿ ಗುರುವಾರ ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40ಕ್ಕೆ ಹೊರಟು ಮರು ದಿನ ಸಂಜೆ 4:26ಕ್ಕೆ ಅಯೋಧ್ಯೆ ತಲುಪಲಿದೆ. 1 ದಿನ 16 ಗಂಟೆ, 46 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,608 ಕಿಲೋ ಮೀಟರ್ ಆಗಲಿದೆ.

* ರೈಲು ಸಂಖ್ಯೆ 02592 - ವೈಪಿಆರ್ ಜೆಕೆಪಿ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5:20ಕ್ಕೆ ಹೊರಟು ಮರು ದಿನ ಮಧ್ಯಾಹ್ನ 1.17ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 57 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್ ಆಗಲಿದೆ.

* ರೈಲು ಸಂಖ್ಯೆ 06593 - ವೈಪಿಆರ್ ಎನ್‌ಝೆಡ್‌ಎಂ ಎಕ್ಸ್‌ಪ್ರೆಸ್ ರೈಲು ಪ್ರತಿ ಭಾನುವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5:20ಕ್ಕೆ ಹೊರಟು ಮರು ದಿನ ಸಂಜೆ 5:13ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 23 ಗಂಟೆ, 53 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್ ಆಗಲಿದೆ.

* ರೈಲು ಸಂಖ್ಯೆ 15016 ವೈಎಲ್‌ಕೆ (ಯಲಹಂಕ) ಗೋರಖ್‌ಪುರ್ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ಬೆಳಗ್ಗೆ 7:45ಕ್ಕೆ ಯಲಹಂಕ ರೈಲು ನಿಲ್ದಾಣದಿಂದ ಹೊರಟು ಎರಡನೇ ದಿನದ ಬೆಳಗ್ಗೆ 10:35ಕ್ಕೆ ಗೋಂಡ ರೈಲು ನಿಲ್ದಾಣ ತಲುಪುತ್ತದೆ. (ಈ ನಿಲ್ದಾಣದಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ಈ ರೈಲು 2 ದಿನ 2 ಗಂಟೆ 50 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. 1,629 ಅಂತರ ಇರಲಿದೆ.

ಸದ್ಯ ಇಷ್ಟು ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರಿಸುತ್ತಿವೆ. 2023ರ ಫೆಬ್ರವರಿಯಿಂದ ಅಯೋಧ್ಯೆಗೆ ಕರ್ನಾಟಕದ ಇತರೆ ಭಾಗಗಳಿಂದಲೂ ರೈಲು ಸೇವೆ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ. ಈ 11 ರೈಲುಗಳ ಪೈಕಿ ಬೆಂಗಳೂರಿನಿಂದ 3, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಿಂದ ತಲಾ 2, ಶಿವಮೊಗ್ಗ, ಬೆಳಗಾವಿಯಿಂದ ತಲಾ 1 ರೈಲು ಅಯೋಧ್ಯೆಗೆ ಹೊರಡಲಿವೆ. ದಿನಾಂಕ, ಸಮಯ ಹಾಗೂ ದರಗಳನ್ನು ಇನ್ನಷ್ಟೇ ನಿಗದಿ ಮಾಡಬೇಕು ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+