ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ತಮಿಳುನಾಡು ನಂತರ ಮತ್ತೆರಡು ರಾಜ್ಯದಲ್ಲಿ ರೆಡ್‌ ಅಲರ್ಟ್

|
Google Oneindia Kannada News

ದೆಹಲಿ, ಜುಲೈ 8: ಭಾರತದ ಪಾಲಿಗೆ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿ ಕೊರೊನಾ ಹಾಟ್‌ಸ್ಟಾಟ್ ರಾಜ್ಯಗಳಾಗಿ ಗುರುತಿಸಿಕೊಂಡಿದೆ. ದೇಶದ ಒಟ್ಟು ಸೋಂಕಿತರ ಪೈಕಿ ಶೇಕಡಾ 60 ರಷ್ಟು ಕೇಸ್‌ಗಳು ಈ ಮೂರು ಪ್ರದೇಶಗಳಲ್ಲಿ ವರದಿಯಾಗಿದೆ. ಇದೀಗ, ದೇಶಕ್ಕೆ ಮತ್ತೆರಡು ರಾಜ್ಯಗಳು ಭಾರಿ ಆತಂಕವನ್ನು ಸೃಷ್ಟಿವತ್ತಾ ಹೆಜ್ಜೆ ಇಟ್ಟಿದೆ.

Recommended Video

Red alert in Kodagu district | Madkeri | Oneindia Kannada

ಕೊರೊನಾ ಹಾಟ್‌ಸ್ಪಾಟ್‌ ರಾಜ್ಯಗಳಲ್ಲಿ ಪ್ರಮುಖವಾಗಿ ಗಮನಿಸುವುದಾರೇ ಹೆಚ್ಚು ಕೊವಿಡ್ ಕೇಸ್ ವರದಿಯಾಗಲಿದೆ, ಅದರಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಇರಲಿವೆ ಹಾಗೂ ಒಂದು ಪ್ರಮುಖ ನಗರ ಡೇಂಜರ್ ಜೋನ್‌ ಆಗಿರಲಿದೆ.

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೊವಿಡ್-19 ಕಥೆಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕೊವಿಡ್-19 ಕಥೆ

ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು ನಂತರ ದಕ್ಷಿಣ ಭಾರತದ ಎರಡು ರಾಜ್ಯಗಳು ಹಾಟ್‌ಸ್ಪಾಟ್‌ ಆಗಿ ಬದಲಾಗುತ್ತಿದೆ. ಈ ಎರಡು ರಾಜ್ಯಗಳ ಕಳೆದ ಒಂದು ವಾರದ ಅಂಕಿಗಳು ನಿಜಕ್ಕೂ ಆತಂಕ ಹೆಚ್ಚಿಸಿದೆ. ಮುಂದೆ ಓದಿ....

ನಿಯಂತ್ರಣ ತಪ್ಪಿದ ಕರ್ನಾಟಕ?

ನಿಯಂತ್ರಣ ತಪ್ಪಿದ ಕರ್ನಾಟಕ?

ಒಂದು ಹಂತದಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿತ್ತು. ಕೊರೊನಾ ನಿಯಂತ್ರಣ ಸಮೀಕ್ಷೆಯಲ್ಲಿ ಸಿಎಂ ಯಡಿಯೂರಪ್ಪ ಪ್ರಶಂಸೆ ಪಡೆದುಕೊಂಡಿದ್ದರು. ಆದ್ರೀಗ, ಕರ್ನಾಟಕದಲ್ಲಿ ನಿಯಂತ್ರಣ ತಪ್ಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ಇದು ಇನ್ನು ದೊಡ್ಡ ಮಟ್ಟದ ಏರಿಕೆ ಕಾಣುವ ಸೂಚನೆ ನೀಡಿದೆ.

ಕರ್ನಾಟಕದ ಜೊತೆ ತೆಲಂಗಾಣ?

ಕರ್ನಾಟಕದ ಜೊತೆ ತೆಲಂಗಾಣ?

ನೆರೆ ರಾಜ್ಯ ತೆಲಂಗಾಣದಲ್ಲಿ ಕೊರೊನಾ ವೈರಸ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಇದೆ. ಹಾಗ್ನೋಡಿದ್ರೆ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಈ ಎರಡು ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣವೂ ಬಹುತೇಕ ಒಂದೇ ರೀತಿ ಇದೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,818. ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ 27,612. ಆದರೆ, ಗುಣಮುಖರಾಗಿರುವ ಸೋಂಕಿತರ ಪೈಕಿ ತೆಲಂಗಾಣ ಮುಂದಿದೆ.

ಬೆಂಗಳೂರು ಡೇಂಜರ್ ಜೋನ್

ಬೆಂಗಳೂರು ಡೇಂಜರ್ ಜೋನ್

ಕರ್ನಾಟಕದಲ್ಲಿ ನಿನ್ನೆ 1498 ಜನರಿಗೆ ಕೊರೊನಾ ಅಂಟಿಕೊಂಡಿದೆ. ಈ ಪೈಕಿ ಬೆಂಗಳೂರಿನಲ್ಲಿ 800 ಮಂದಿಗೆ ಸೋಂಕು ದೃಢವಾಗಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11361ಕ್ಕೆ ಏರಿದೆ. ಅದರಲ್ಲಿ 9395 ಪ್ರಕರಣಗಳು ಸಕ್ರಿಯವಾಗಿದೆ. ಈವರೆಗೂ 155 ಜನರು ಸಾವನ್ನಪ್ಪಿದ್ದಾರೆ. ಕಳೆದ ಹತ್ತು ದಿನದಿಂದ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ.

ಹತ್ತು ದಿನಗಳ ಸರಾಸರಿ ಪ್ರಕರಣಗಳ

ಹತ್ತು ದಿನಗಳ ಸರಾಸರಿ ಪ್ರಕರಣಗಳ

ಕಳೆದ ಹತ್ತು ದಿನಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗಿದೆ. ತೆಲಂಗಾಣದಲ್ಲಿ ಪ್ರತಿದಿನ ಸುಮಾರು 350 ಕೇಸ್ ವರದಿಯಾಗುತ್ತಿತ್ತು. ಆದರೆ, ಕಳೆದ ಎರಡು ವಾರಗಳಿಂದ ಸೋಂಕಿತರ ಸಂಖ್ಯೆ ಪ್ರತಿದಿನ ಅಂದಾಜು 1200 ವರದಿಯಾಗುತ್ತಿದೆ. ಕರ್ನಾಟಕದಲ್ಲೂ ಕಳೆದ ಎರಡು ವಾರಕ್ಕೂ ಮುಂಚೆ ಪ್ರತಿದಿನ 250-300 ಕೇಸ್ ದಾಖಲಾಗುತ್ತಿತ್ತು. ಆದರೆ, ಜುಲೈ ತಿಂಗಳಿನಿಂದ ಪ್ರತಿದಿನ ಅಂದಾಜು 1130 ಸರಾಸರಿ ಕೇಸ್‌ಗಳು ದಾಖಲಾಗಿದೆ.

ಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತ

English summary
After maharashtra, tamil nadu now karnataka and telangana becoming coronavirus hotspots in country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X