ಇಬ್ಬರು ಕನ್ನಡಿಗರಿಗೆ ಭಾರತೀಯ ಶಿಕ್ಷಣ ಸುಧಾರಣೆ ಹೊಣೆ; ಜೋಶಿ, ನೀಲೇಕಣಿ ಮೇಲಿದೆ ಅಪಾರ ನಿರೀಕ್ಷೆ

ಬೆಂಗಳೂರು: ಕಾಕ್ರೋಜ್‌ ಜನತಾ ಪಾರ್ಟಿ ನಡೆಸಿದ ಹೋರಾಟ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ರಾಜೀನಾಮೆಗೆ ಕೊನೆಗೊಂಡಿಲ್ಲ. ಭಾರತದ ಶಿಕ್ಷಣ ವ್ಯವಸ್ಥೆಯನ್ನೇ ಸುಧಾರಿಸಲು ನಾಂದಿ ಹಾಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಶಿಕ್ಷಣ ಸಚಿವಾಲಯದ ಹೊಣೆಯನ್ನು ಕನ್ನಡಿಗ ಪ್ರಲ್ಹಾದ್ ಜೋಶಿ ಹೆಗಲಿಗೇರಿಸಿದರೆ, ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ವಿಶೇಷವಾಗಿ ರಾಷ್ಟ್ರೀಯ ಪರೀಕ್ಷೆ ಪ್ರಾಧಿಕಾರದ ವ್ಯವಸ್ಥೆ ಸುಧಾರಣೆಗೆ ಮತ್ತೊಬ್ಬ ಕನ್ನಡಿಗ, ಉದ್ಯಮಿ ನಂದನ್ ನೀಲೇಕಣಿಗೆ ವಹಿಸಿದ್ದಾರೆ. ಸಿಜೆಪಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಗೆ ತಡೆಗೆ ನಡೆಸಿದ ಹೋರಾಟದಿಂದ ಪರೀಕ್ಷಾ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಮುನ್ನುಡಿ ಬರೆದಿದೆ.

ನೀಲೇಕಣಿ ಸಾರಥ್ಯದ ಟಾಸ್ಕ್‌ ಫೋರ್ಸ್‌ನಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಎಸ್.ಸೋಮನಾಥ್, ಗುಪ್ತಚರ ಇಲಾಖೆ ಮಾಜಿ ನಿರ್ದೇಶ ಥಪನ್ ದೇಕಾ, ಐಐಟಿ ಮದ್ರಾಸ್ ನಿರ್ದೇಶಕ ವಿ.ಕಾಮಕೋಟಿ, ಶಿಕ್ಷಣ ಇಲಾಖೆಯ ಮಾಜಿ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನ್ ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (National Testing Agency) ನಡೆಸುವ ಪರೀಕ್ಷೆಗಳು ಬಗ್ಗೆ ಈ ಫೋರ್ಸ್ ಗಮನ ಹರಿಸಲಿದೆ.

Pralhad Joshi

ಹಲವು ಕ್ಷೇತ್ರಗಳ ಪರಿಣತರನ್ನು ಹೊಂದಿರುವ ಈ ಪಡೆ ಸಂಸ್ಥೆ ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಅಗತ್ಯ ಕ್ರಮಗಳ ಜಾರಿಗೊಳಿಸಲಿದೆ. ಅದರಲ್ಲಿಯೂ ತಾಂತ್ರಿಕವಾಗಿ ನವೀಕರಿಸಲು ನೆರವಾಗಲಿದೆ. ಇದರೊಂದಿಗೆ ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲ್ಲಿದೆ.

ಪರೀಕ್ಷಾ ವ್ಯವಸ್ಥೆ ವಿಶ್ವಾಸಾರ್ಹ ಹಾಗೂ ಪಾರದರ್ಶಕವಾಗಿರಬೇಕು. ನಿಲೇಕಣಿ ನೇತೃತ್ವದ ಕಾರ್ಯಪಡೆ ಸಲಹೆಗಳನ್ನು ನೀಡಲಿದೆ. ಅದರ ಆಧಾರದ ಮೇಲೆ ಸರಕಾರ ಕ್ರಮ ಕೈಗೊಳ್ಳಲಿದೆ. ಪ್ರಶ್ನೆ ಪತ್ರಿಕೆ ಸೋರಿಯಂಥ ಅಪಾರಾಧಗಳ ವಿಚಾರಣೆಗೆ ತ್ವರಿತ ನ್ಯಾಯಲಯಳನ್ನು ಸ್ಫಾತಿಸಿದ್ದೇವೆ, ಎಂದು ಮೋದಿ ಘೋಷಿಸಿದ್ದರು.

ಪರೀಕ್ಷಾ ಸುಧಾರಣಾ ಕಾರ್ಯಪಡೆ ತಜ್ಞರ ಬಗ್ಗೆ ಇಲ್ಲಿ ಸಂಕ್ಷಿಪ್ತ ಮಾಹಿತಿ

ನಂದನ್ ನಿಲೇಕಣಿ (ಅಧ್ಯಕ್ಷರು)

ತಂತ್ರಜ್ಞಾನ ಶಿಲ್ಪಿ (Technology Architect) ಎಂದೇ ಕರೆಯಲ್ಪಡುವ ನಿಲೇಕಣಿ ಭಾರತದಲ್ಲಿ ಜಾರಿಯಾದ ಗುರುತಿನ ಚೀಟಿ ಆಧಾರ್ ಹೊಣೆ ಹೊತ್ತವರು ಯುಪಿಎ ಸರ್ಕಾರದಲ್ಲಿ ಜಾರಿಗೊಳಿಸಿದ ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾದವರು. 2004ರಲ್ಲಿ ಬೆಂಗಳೂರು ದಕ್ಷಿಣ ಸಂಸದೀಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಎದುರಿಗೆ ಪರಾಭವಗೊಂಡಿದ್ದರು. ಬೆಂಗಳೂರನ್ನು ಐಟಿ ಹಬ್ ಎಂದು ಕರೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಅನ್ನು ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿಯೊಂದಿಗೆ ಸ್ಥಾಪಿಸಿದವರು.

ಭಾರತದ ಅತ್ಯಂತ ಪ್ರಭಾವಿ ತಂತ್ರಜ್ಞಾನ ನಾಯಕರಲ್ಲಿ ಒಬ್ಬರು. ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯ ರಚನೆಯ ನೇತೃತ್ವ ವಹಿಸಿದ್ದರು. ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯಗಳನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸುವಲ್ಲಿ ಅವರ ಅಪಾರ ಪರಿಣತಿ ಪರಿಗಣಿಸಿ, ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವ ಹೊಣೆಯನ್ನು ಭಾರತ ಸರ್ಕಾರ ಇವರಿಗೆ ವಹಿಸಿದೆ. ಪರೀಕ್ಷೆಗಳಲ್ಲಿ ಸುರಕ್ಷಿತ ಡಿಜಿಟಲ್ ಮೂಲಸೌಕರ್ಯ, ಗುರುತಿನ ಪರಿಶೀಲನೆ, ಎಐ-ಚಾಲಿತ ನಿಗಾ ಮತ್ತು ತಂತ್ರಜ್ಞಾನದ ಮೂಲಕ ಪಾರದರ್ಶಕತೆ ತರುವಲ್ಲಿ ನಿಲೇಕಣಿ ಗಮನ ಹರಿಸುವ ನಿರೀಕ್ಷೆ ಇದೆ

ಡಾ. ಎಸ್. ಸೋಮನಾಥ್ - ಇಸ್ರೋ ಮಾಜಿ ಅಧ್ಯಕ್ಷರು

ಚಂದ್ರಯಾನ-3 ಮತ್ತು ಆದಿತ್ಯ-ಎಲ್1 ಸೌರ ಮಿಷನ್ ಸೇರಿ ಪ್ರಮುಖ ಬಾಹ್ಯಾಕಾಶ ಯೋಜನೆಗಳ ಜಾರಿ ವೇಳೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನೇತೃತ್ವ ವಹಿಸಿದವರು ಇಸ್ರೋ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್. ಕ್ಲಿಷ್ಟ ಸಿಸ್ಟಮ್ಸ್ ಎಂಜಿನಿಯರಿಂಗ್, ವಿಶ್ವಾಸಾರ್ಹತೆ ಮತ್ತು ಮಿಷನ್ ಭದ್ರತೆಯಲ್ಲಿ ದಶಕಗಳ ಅನುಭವ ಹೊಂದಿರುವ ಇವರು ಏರೋಸ್ಪೇಸ್ ಎಂಜಿನಿಯರ್. ಯಾವುದೇ ಲೋಪವಿಲ್ಲದ (fail-safe) ಮತ್ತು ಅತ್ಯಂತ ಸುರಕ್ಷಿತ ಕಾರ್ಯಾಚರಣಾ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವಲ್ಲಿ ಇವರಿಗೆ ಪರಿಣತಿ ಇದೆ. ಪರೀಕ್ಷಾ ವ್ಯವಸ್ಥೆಯ ಮೂಲಸೌಕರ್ಯ, ಪ್ರಕ್ರಿಯೆಯ ಸಮಗ್ರತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿರಲಿದೆ.

ತಪನ್ ಡೇಕಾ - ಗುಪ್ತಚರ ಇಲಾಖೆಯ (IB) ಮಾಜಿ ನಿರ್ದೇಶಕರು

ಅಸ್ಸಾಂ-ಮೇಘಾಲಯ ಕೇಡರ್‌ನ 1988ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾದ ತಪನ್ ಡೇಕಾ ಅವರು ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಕ್ಷೇತ್ರದಲ್ಲಿ ಸುದೀರ್ಘ ವೃತ್ತಿ ಜೀವನದ ನಂತರ ಗುಪ್ತಚರ ಇಲಾಖೆಯ (IB) ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ, ಸೈಬರ್ ಬೆದರಿಕೆ ಮತ್ತು ಸಂಘಟಿತ ಅಪರಾಧಗಳ ತನಿಖೆಯಲ್ಲಿ ಇವರಿಗೆ ಅಪಾರ ಅನುಭವವಿದೆ. ಪರೀಕ್ಷಾ ಪೇಪರ್ ಸೋರಿಕೆ ಮಾಡುವ ಸಂಘಟಿತ ಜಾಲಗಳನ್ನು ತಡೆಯುವುದು, ಆಂತರಿಕ ಬೆದರಿಕೆಗಳು ಹಾಗೂ ಪರೀಕ್ಷಾ ವಂಚನಾ ಜಾಲಗಳನ್ನು ಮಟ್ಟಹಾಕುವುದು ಮತ್ತು ಪರೀಕ್ಷಾ ವ್ಯವಸ್ಥೆಯುದ್ದಕ್ಕೂ ಭದ್ರತಾ ನಿಯಮಗಳನ್ನು ಬಲಪಡಿಸುವುದರ ಮೇಲೆ ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಇವರು ಸಲಹೆ ನೀಡಲಿದ್ದಾರೆ.

ಡಾ. ವಿ. ಕಾಮಕೋಟಿ - ಐಐಟಿ ಮದ್ರಾಸ್ ನಿರ್ದೇಶಕರು

ಕಂಪ್ಯೂಟರ್ ಸೈನ್ಸ್ ವಿಜ್ಞಾನಿ ಮತ್ತು ಐಐಟಿ ಮದ್ರಾಸ್‌ ನಿರ್ದೇಶಕರಾದ ಡಾ. ವಿ. ಕಾಮಕೋಟಿ ಅವರು ಕಂಪ್ಯೂಟರ್ ಆರ್ಕಿಟೆಕ್ಚರ್, ಎಂಬೆಡೆಡ್ ಸಿಸ್ಟಮ್ಸ್ ಮತ್ತು ದೇಶಿ ಕಂಪ್ಯೂಟಿಂಗ್ ತಂತ್ರಜ್ಞಾನಗಳಲ್ಲಿನ ಕಾರ್ಯಕ್ಕೆ ಹೆಸರುವಾಸಿ. ಭಾರತೀಯ ಭಾಷಾ ಕಂಪ್ಯೂಟಿಂಗ್ ಮತ್ತು ಸ್ವದೇಶಿ ಪ್ರೊಸೆಸರ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದವರು. ಇಷ್ಟೆಲ್ಲಾ ತಾಂತ್ರಿಕ ನೈಪುಣ್ಯತೆಗಳೊಂದಿಗೆ ಹಲವು ವಿವಾದಗಳಿಗೂ ಗುರಿಯಾದವರು ಇವರು, ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಜ್ವರ ಗುಣಪಡಿಸುವ ಜೊತೆಗೆ ಮೂತ್ರದಲ್ಲಿ ಹಲವು ಔಷಧೀಯ ಗುಣಗಳಿವೆ ಎಂಬ ಹೇಳಿಕೆ ಹಲವು ವಿವಾದಗಳಿಗೆ ಕಾರಣವಾಗಿತ್ತು. ಇಂಥ ಹೇಳಿಕೆಗಳಿಗೆ ವೈಜ್ಞಾನಿಕ ಪುರಾವೆಗಳಿಲ್ಲವೆಂದು ವಿಜ್ಞಾನಿಗಳು ಡಾ.ಕಾಮಕೋಟಿ ಹೇಳಿಕೆಯನ್ನು ವಿರೋಧಿಸಿದ್ದರು.

ಅನಿತಾ ಕರ್ವಾಲ್ - ಮಾಜಿ ಶಿಕ್ಷಣ ಕಾರ್ಯದರ್ಶಿ

ಗುಜರಾತ್ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಅನಿತಾ ಕರ್ವಾಲ್ ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯಾಗಿ ಮತ್ತು ಅದಕ್ಕೂ ಮುನ್ನ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (CBSE) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಅವರು ಶಾಲಾ ಶಿಕ್ಷಣದ ಪ್ರಮುಖ ಸುಧಾರಣೆಗಳು, ಕಲಿಕಾ ಫಲಿತಾಂಶಗಳ ಉಪಕ್ರಮಗಳು ಮತ್ತು ಪರೀಕ್ಷಾ ಆಡಳಿತದ ಮೇಲ್ವಿಚಾರಣೆ ನಡೆಸಲಿದ್ದಾರೆ. ನೀತಿ ಅನುಷ್ಠಾನ ಮತ್ತು ಶಾಲಾ ಆಡಳಿತದ ಅವರ ಅನುಭವವು ಪರೀಕ್ಷಾ ಸುಧಾರಣೆಗಳನ್ನು ಭಾರತದ ಶೈಕ್ಷಣಿಕ ಚೌಕಟ್ಟು ಮತ್ತು ಸಾಂಸ್ಥಿಕ ವಾಸ್ತವಗಳಿಗೆ ಅನುಗುಣವಾಗಿ ರೂಪಿಸುವ ಭರವಸೆ ಇದೆ.

ಅಮೃತ್ ಲಾಲ್ ಮೀನಾ - ಸರಕು ಸಾಗಣೆ (Logistics) ಮತ್ತು ಆಡಳಿತ ತಜ್ಞರು

ಹಿರಿಯ ಐಎಎಸ್ ಅಧಿಕಾರಿಯಾದ ಅಮೃತ್ ಲಾಲ್ ಮೀನಾ ಅವರು ಮೂಲ ಸೌಕರ್ಯ, ಸರಕು ಸಾಗಣೆ (ಲಾಜಿಸ್ಟಿಕ್ಸ್) ಹಾಗೂ ಸಾರ್ವಜನಿಕ ಆಡಳಿತದಲ್ಲಿ ಪ್ರಮುಖ ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಬೃಹತ್ ಪ್ರಮಾಣದ ಕಾರ್ಯಾಚರಣಾ ವ್ಯವಸ್ಥೆ, ಪೂರೈಕೆ ಸರಪಳಿ ಮತ್ತು ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯತೆಯನ್ನು ನಿರ್ವಹಿಸುವಲ್ಲಿ ಇವರ ಪರಿಣತಿ ಅಪಾರ ಪರೀಕ್ಷಾ ಸುಧಾರಣೆಗಳ ಸಂದರ್ಭದಲ್ಲಿ, ಪರೀಕ್ಷಾ ಸಾಮಗ್ರಿಗಳ ಸುರಕ್ಷಿತ ಸಾಗಣೆ, ಶೇಖರಣೆ, ವಿತರಣೆ, ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಲೋಪದೋಷಗಳನ್ನು ಕಡಿಮೆ ಮಾಡುವ ಕಾರ್ಯಾಚರಣಾ ಸುಧಾರಣೆಗಳ ಕುರಿತು ಅವರು ಸಲಹೆ ನೀಡಲಿದ್ದಾರೆ.

ಒಟ್ಟಿನಲ್ಲಿ ಸಿಜೆಪಿ ನೆಟ್ಟ ಸಸಿ, ಸೊಂಪಾಗಿ ಬೆಳೆದು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಲಿ ಎಂಬುವುದು ಭಾರತೀಯರ ಆಶಯ. ಅರದಲ್ಲಿಯೂ ಈ ಕಾರ್ಯಪಡೆ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅಗತ್ಯವಿರುವ ಒಂದೊಂದು ವಿಶೇಷ ಪರಿಣತಿ ಇದ್ದು, ಸೂಕ್ತ ವ್ಯವಸ್ಥೆ ಜಾರಿಯಾಗಗು ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+