Gen-Zಗೆ ಕ್ಲಾಸ್ ತಗೊಂಡ ಕಂಗನಾ, ರೇಣುಕಾ ಚೌಧರಿ ಟಾಂಗ್, ಹೀಗ್ ಮಾತನಾಡಿದ್ರೆ ಸೋಲೋದು ಗ್ಯಾರಂಟಿ ಅಂದ ನೆಟ್ಟಿಗರು

ನವದೆಹಲಿ: ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಈಗ ಮತ್ತೆ ಸುದ್ದಿಯಲ್ಲಿದ್ದಾರೆ ನೋಡಿ. ದೇಶದಲ್ಲಿ ನಡೆಯುತ್ತಿರುವ ಜೆನ್ ಜೀ ಯುವಕರ ಪ್ರತಿಭಟನೆಯ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ತೀವ್ರ ಆಕ್ಷೇಪಾರ್ಹ ಹಾಗೂ ಕಟು ಪದಗಳನ್ನ ಬಳಸಿ ಪೋಸ್ಟ್ ಹಂಚಿಕೊಂಡಿದ್ದು, ಇದು ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಂಸದೆಯಾಗಿ ಈ ರೀತಿಯ ಕೀಳು ಮಟ್ಟದ ಭಾಷೆ ಬಳಸಿರುವುದಕ್ಕೆ ವಿಪಕ್ಷಗಳ ನಾಯಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಂಗನಾ ತಕ್ಷಣವೇ ದೇಶದ ಯುವಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Kangana Ranaut

ಜೆನ್ ಜೀ ವಿರುದ್ಧ ಕಂಗನಾ ಟೀಕೆ

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನಾ ಬರೆದುಕೊಂಡಿರುವ ಕಂಗನಾ ರಣಾವತ್, ಪ್ರತಿಭಟನೆಯಲ್ಲಿ ನಿರತರಾಗಿರುವ ಯುವಜನತೆಯ ವಿಡಿಯೋಗಳು ಮತ್ತು ರೀಲ್ಸ್‌ಗಳನ್ನ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. "ನನ್ನ ಜೀವನದಲ್ಲಿ ಎಂದೂ ಇಷ್ಟೊಂದು ಅಸಹ್ಯಕರ ವಾತಾವರಣವನ್ನ ಒಂದೇ ಕಡೆ ನೋಡಿರಲಿಲ್ಲ. ಈ ಜೆನ್ ಜೀ ಪ್ರತಿಭಟನೆಯ ರೀಲ್ಸ್‌ಗಳು ವಾಂತಿ ತರಿಸುವಂತಿವೆ. ಅವರು ಬಳಸುತ್ತಿರುವ ಭಾಷೆ ಮತ್ತು ಮಾತನಾಡುವ ಶೈಲಿ ತೀರಾ ಕೆಳಮಟ್ಟದ್ದಾಗಿದೆ," ಎಂದು ಬರೆದುಕೊಂಡಿದ್ದಾರೆ.

ಅಷ್ಟಕ್ಕೇ ನಿಲ್ಲಿಸದೆ, ಯುವಜನತೆಯ ಬೆಳೆಸುವಿಕೆಯನ್ನು ಪ್ರಶ್ನಿಸಿರುವ ಅವರು, "ಇಂತಹ ಅಸಂಸ್ಕೃತ ನಡವಳಿಕೆಯನ್ನ ಹೊಂದಿರುವ ಯುವಕರಿಗೆ ಯಾರು ಜನ್ಮ ನೀಡುತ್ತಿದ್ದಾರೋ ಮತ್ತು ಹೇಗೆ ಬೆಳೆಸುತ್ತಿದ್ದಾರೋ ಗೊತ್ತಿಲ್ಲ" ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯುವಕರನ್ನು 'ಜಿರಳೆಗಳು' ಹಾಗೂ 'ಕಸ' ಎಂದು ಜರಿದಿರುವ ಕಂಗನಾ, "ಭಾರತವು ಸಂಸ್ಕೃತಿ ಮತ್ತು ವೈವಿಧ್ಯತೆಗೆ ಹೆಸರಾದ ದೇಶ. ಆದರೆ ನೀವು ಜಿರಳೆಗಳಂತೆ ನಡೆದುಕೊಳ್ಳುತ್ತಿದ್ದೀರಿ. ಈ ವಿಡಿಯೋಗಳನ್ನಾ ನೋಡಿ ನನಗೆ ತೀವ್ರ ಆಘಾತವಾಗಿದ್ದು, ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ," ಎಂದಿದ್ದಾರೆ.

ಮಹಿಳೆಯರ ಬಗ್ಗೆ ಸಂಸದೆಯ ವಿವಾದಾತ್ಮಕ ಹೇಳಿಕೆ

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯರ ನಡವಳಿಕೆಯನ್ನ ವಿಶೇಷವಾಗಿ ಗುರಿಯಾಗಿಸಿಕೊಂಡ ಕಂಗನಾ, "ಸ್ವತಂತ್ರ ವೃತ್ತಿಪರ ಮಹಿಳೆಯರ ಜೀವನವನ್ನ ಅನುಕರಿಸಲು ಹೊರಟಿರುವ ಯುವತಿಯರ ನಡವಳಿಕೆ ಅಸಹ್ಯಕರವಾಗಿದೆ. ಕಷ್ಟಪಟ್ಟು ಸ್ವಾತಂತ್ರ್ಯವನ್ನು ಗಳಿಸದೆ, ಪೋಷಕರ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವತಿಯರನ್ನು 'ಜನರೇಷನ್ ಗಟ್ಟರ್' ಎಂದು ಕರೆದಿರುವ ಅವರು, "ಇಂತಹ ಯುವತಿಯರಿಗೆ ಸಮಾಜಕ್ಕೆ ನೀಡಲು ಏನೂ ಇಲ್ಲ. ಮಾದಕ ದ್ರವ್ಯ ಹಾಗೂ ಮದ್ಯಪಾನ ಮಾಡುತ್ತಾ ಸಮಯ ಕಳೆಯುವ ಇವರು ಗೃಹಿಣಿಯರಾಗಲು ಕೂಡ ಅನರ್ಹರು. ಯಾವುದೇ ಜವಬ್ದಾರಿ ಇಲ್ಲದೆ ಸ್ವಾತಂತ್ರ್ಯ ಅನುಭವಿಸಲು ಹೊರಟಿರುವ ಇವರು ಅಸಹ್ಯ ಜೀವಿಗಳು," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷಗಳ ಆಕ್ರೋಶ

ಕಂಗನಾ ರಣಾವತ್ ಅವರ ಈ ಹೇಳಿಕೆಗೆ ರಾಜಕೀಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಎಐಎಂಐಎಂ ನಾಯಕ ವಾರಿಸ್ ಪಠಾಣ್ ಕಂಗನಾ ಹೇಳಿಕೆಯನ್ನಾ ತೀವ್ರವಾಗಿ ಖಂಡಿಸಿದ್ದು, "ಸಂಸದೆಯಾಗಿ ಈ ರೀತಿಯ ಭಾಷೆ ಬಳಸಿರುವುದು ಅತ್ಯಂತ ಖಂಡನೀಯ. ನೀಟ್ ಪರೀಕ್ಷೆಯ ಪೂರ್ಣ ರೂಪ ಅಂದರೆ ನೀಟ್‌ ಫುಲ್‌ ಪಾರ್ಮ್‌ ಏನೆಂದು ಕೇಳಿದರೆ ಕಂಗನಾಗೆ ಗೊತ್ತಿರಲಿಕ್ಕಿಲ್ಲ. ಅವರು ಸಮಸ್ತ ಜೆನ್ ಜೀ ಯುವಜನತೆಯ ಬಳಿ ಕ್ಷಮೆ ಕೇಳಬೇಕು. ದೇಶದ ಯುವಜನತೆಯ ಬಗ್ಗೆ ತಮ್ಮ ಪಕ್ಷದ ಸಂಸದರು ಆಡುತ್ತಿರುವ ಇಂತಹ ಮಾತುಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರವಾಗಿ ಪರಿಗಣಿಸಬೇಕು," ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹಾಗೂ ನೆಟ್ಟಿಗರು ಸಹ ಕಂಗನಾ ಹೇಳಿಕೆಗೆ ಕಟುವಾಗಿ ತಿರುಗೇಟು ನೀಡಿದ್ದಾರೆ. "ಜನಪ್ರತಿನಿಧಿಯಾಗಿ ದೇಶದ ಯುವ ಸಮುದಾಯವನ್ನ ಈ ರೀತಿ ನಿಂದಿಸುವುದು ಸರಿಯಲ್ಲ. ಇಂತಹ ಅಹಂಕಾರದ ಮಾತುಗಳನ್ನಾಡಿದರೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವುದು ಗ್ಯಾರಂಟಿ" ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+