Annamalai U-Turn: ಕಾಕ್ರೋಚ್ ಜನತಾ ಪಾರ್ಟಿ; ಅಭಿಜೀತ್ ದೀಪ್ಕೆಗೆ ಬೆಂಬಲ ನೀಡಿಲ್ಲ ಎಂದ ಅಣ್ಣಾಮಲೈ!, "ದೇಶಭಕ್ತಿಯ ಪಾಠ ಬೇಕಿಲ್ಲ'

ಕಾಕ್ರೋಚ್ ಜನತಾ ಪಾರ್ಟಿಯ ವಿಚಾರದಲ್ಲಿ ತಮಿಳುನಾಡಿನ ರಾಜಕಾರಣಿ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಗುರುವಾರ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಹೋರಾಟದ ಬಗ್ಗೆ ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್‌ ವೈರಲ್ ಆಗಿತ್ತು. ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟದ ಬಗ್ಗೆ ಮಾತನಾಡಿದ್ದು ಬೇರೆ, ಆದರೆ ಸಿಜೆಪಿ - ಅಭಿಜೀತ್ ದೀಪ್ಕೆಗೆ ಬೆಂಬಲ ಕೊಟ್ಟಿಲ್ಲ ಎಂದು ಕೆ. ಅಣ್ಣಾಮಲೈ ಅವರು ಸ್ಪಷ್ಟಪಡಿಸಿದ್ದಾರೆ.

ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸಿದ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆಸಿದ ದಮನಕಾರಿ ಕ್ರಮವನ್ನು ಕೆ ಅಣ್ಣಾಮಲೈ ಅವರು ಗುರುವಾರ ಟೀಕೆ ಮಾಡಿದ್ದರು. ಇದಾದ ಒಂದು ದಿನದ ನಂತರ ಕೆ ಅಣ್ಣಾಮಲೈ ಅವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜತನಾ ಪಾರ್ಟಿಗೆ ತಮ್ಮ ಬೆಂಬಲ ಇದೆ ಎಂದು ಅರ್ಥೈಸಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ತಮ್ಮ ನಾವು ನಾಯಕರು ಎನ್ನುವ ಆಂದೋಲನ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, ಕೇಂದ್ರವನ್ನು ಟೀಕಿಸುವುದರಿಂದ ಹಿಡಿದು, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದು, ಸಿಜೆಪಿ ಪ್ರತಿಭಟನೆಗಳ ಹಿಂದಿನ ಉದ್ದೇಶವನ್ನು ಬೆಂಬಲಿಸುವವರೆಗೆ ಎಲ್ಲಾ ವಿಷಯಗಳ ಬಗ್ಗೆಯೂ ಭಾಷಣ ಮಾಡಿದ್ದರು.

K Annamalai U-Turn Denies Backing Cockroach Janata Party Abhijeet Deepke Dont Lecture MePatriotism

ನಾವು ಎಂದಿಗೂ ಕಾಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವುದಿಲ್ಲ. ಅವರ ಕಾರ್ಯಸೂಚಿ ಬೇರೆ ಮತ್ತು ನಮ್ಮದು ಬೇರೆ ಎಂದು ಈ ವರ್ಷದ ಆರಂಭದಲ್ಲಿ ಬಿಜೆಪಿಯನ್ನು ತೊರೆದು ತಮ್ಮದೇ ಆದ ರಾಜಕೀಯ ಪಕ್ಷ ಪ್ರಾರಂಭಿಸಿದ್ದಾಗ ಅಣ್ಣಾಮಲೈ ಹೇಳಿದ್ದರು. ಆದಾಗ್ಯೂ, ಅದೇ ರೀತಿಯಲ್ಲಿ, ಪ್ರಜಾಪ್ರಭುತ್ವದಲ್ಲಿ ಹೋರಾಡುವ ಹಕ್ಕು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಇದೆ ಎಂದು ಅವರು ಪ್ರತಿಪಾದಿಸಿದರು.

ಸಿಜೆಪಿ ಪ್ರತಿಭಟನಾಕಾರರ ಬಗ್ಗೆ ಅಣ್ಣಾಮಲೈ ಏನು ಹೇಳಿದ್ದೇನು

ಅಕ್ಟೋಬರ್ 10 ರಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಸಿಜೆಪಿ ಪ್ರತಿಭಟನಾಕಾರರ ವಿರುದ್ಧ ನಡೆದ ಪೊಲೀಸ್ ಕ್ರಮವನ್ನು ಅಣ್ಣಾಮಲೈ ಅವರು ಟೀಕಿಸಿದ್ದರು. ನನಗೆ ದೇಶದ ಹಲವು ರಾಜ್ಯಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡಿದ ಅನುಭವವಿದೆ. ಭಾರತದ ಏಕತೆ ಮತ್ತು ಸಾರ್ವಭೌಮತ್ವ ನನಗೆ ತಿಳಿದಿದೆ. ಆದ್ದರಿಂದ, ಯಾರೂ ನನಗೆ ದೇಶಭಕ್ತಿಯ ಕುರಿತು ಉಪನ್ಯಾಸ ನೀಡುವ ಅಗತ್ಯವಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಸಿಜೆಪಿ ಪ್ರತಿಭಟನಾಕಾರರು ಯಾವುದೇ ತಪ್ಪು ಮಾಡಿದ್ದರೆ, ಸೇಡಿನ ವಿಧಾನವನ್ನು ಅನುಸರಿಸುವ ಬದಲು ಅಧಿಕಾರಿಗಳು ಕಾನೂನಿನ ಪ್ರಕಾರ ಮುಂದುವರಿಯಬೇಕು. ಕಾನೂನಿ ಪ್ರಕಾರ ಬಂಧನ ಪ್ರಕ್ರಿಯೆ ನಡೆಸಬೇಕು ಎಂದು ನಾವು ನಂಬುತ್ತೇವೆ. ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆ ಇದ್ದರೆ, ನಿಮಗೆ ಎಲ್ಲ ಸಂಸ್ಥೆಗಳು ಇವೆ - ಐಬಿ, ರಾ. ಅವುಗಳನ್ನು ಬಳಸಿ, ಅವರನ್ನು ಕಂಬಿಗಳ ಹಿಂದೆ ತಳ್ಳಿ. ಆದಾಗ್ಯೂ, ಅದೇ ರೀತಿ, ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಪ್ರಯತ್ನಗಳನ್ನು ಒಪ್ಪಲಾಗದೂ ಎಂದೂ ಕೆ ಅಣ್ಣಾಮಲೈ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+