Jharkhand Assembly Election 2024: ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ

Jharkhand Assembly Election 2024: ಈಗಗಾಗಲೇ ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮತ್ತೊಂದೆಡೆ ಎಲ್ಲಾ ಪಕ್ಷಗಳಿಂದಲೂ ಟಿಕೆಟ್‌ ಹಂಚಿಕೆ ಕಾರ್ಯ ನಡೆಯುತ್ತಿದೆ. ಹಾಗೆಯೇ ಇಂದು (ಅಕ್ಟೋಬರ್ 28) ಬಿಜೆಪಿ ತನ್ನ ಅಭ್ಯಾರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ಎಷ್ಟು ಕ್ಷೇತ್ರಗಳಿಗೆ ಎಂದು ಇಲ್ಲಿ ತಿಳಿಯಿರಿ.

ಇಂದು ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬರ್ಹೈತ್ ಕ್ಷೇತ್ರದಿಂದ ಗಮ್ಲಿಯೆಲ್ ಹೆಂಬ್ರೋಮ್ ಮತ್ತು ತುಂಡಿ ಕ್ಷೇತ್ರದಿಂದ ವಿಕಾಶ್ ಮಹತೋ ಅವರನ್ನು ಘೋಷಣೆ ಮಾಡಿದೆ. ಬರ್ಹೈತ್‌ನಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್‌ ಸೊರೆನ್ ವಿರುದ್ಧ ಹೆಂಬ್ರೋಮ್ ಚುನಾವಣಾ ಕಣದಲ್ಲಿದ್ದಾರೆ.

Jharkhand Assembly Polls 2024 BJP Releases 2nd List Of Candidates know details

ಇನ್ನು ತುಂಡಿ ಕ್ಷೇತ್ರದಲ್ಲಿ 2019ರ ವಿಧಾನಸಭೆ ಚುನಾವಣೆಯಲ್ಲಿ 72,000ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ವಿಕಾಶ್ ಮಹತೋ ಹಾಗೂ ಜೆಎಂಎಂ ಅಭ್ಯರ್ಥಿ ಮಥುರಾ ಪ್ರಸಾದ್ ಮಹತೋ ನಡುವೆ ಹಣಾಹಣಿ ನಡೆಯಲಿದೆ.

ಈಗಾಗಲೇ ಬಿಜೆಪಿಯು ಅಕ್ಟೋಬರ್ 19ರಂದು ಬಿಜೆಪಿ ತನ್ನ 66 ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಪಕ್ಷದ ರಾಜ್ಯ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರು ಧನ್ವರ್‌ನಿಂದ, ಲೋಬಿನ್‌ ಹೆಂಬ್ರೋಮ್‌ ಬೊರಿಯೊದಿಂದ ಮತ್ತು ಸೀತಾ ಸೊರೆನ್‌ ಜಮ್ತಾರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮಾಜಿ ಸಿಎಂ ಚಂಪೈ ಸೊತರೇನ್‌ ಅವರು ಸರಿಕೆಲ್ಲದಿಂದ ಸ್ಪರ್ಧೆಗಿಳಿಯಲಿದ್ದಾರೆ. ಇನ್ನು 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್‌ 13 ಮತ್ತು 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 23ಕ್ಕೆ ಫಲಿತಾಂಶ ಹೊರಬೀಳಲಿದೆ.

ನಾಲ್ಕನೇ ಪಟ್ಟಿ ಬಿಡುಗಡೆ: ಇತ್ತೀಚೆಗಷ್ಟೇ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಹಿತಿ, ವಿವರ ಇಲ್ಲಿದೆ ತಿಳಿಯಿರಿ.

ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷ ನಾಲ್ಕನೇ ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇತ್ತೀಚೆಗಷ್ಟೇ ಬಿಜೆಪಿಯಿಂದ ಜೆಜೆಎಂ ಪಕ್ಷಕ್ಕೆ ಸೇರಿದ ಗಣೇಶ್ ಮೊಹ್ಲಿ ಅವರಿಗೆ ಸೆರೈಕೆಲಾ ವಿಧಾನಸಭಾ ಕ್ಷೇತ್ರದಿಂದ ಹಾಗೂ ಕುಂತಿ ಕ್ಷೇತ್ರದಿಂದ ರಾಮಸೂರ್ಯ ಮುಂಡಾ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಈಗಾಗಲೇ ಬಿಡುಗಡೆ ಮಾಡಲಾದ ಮೊದಲ ಪಟ್ಟಿಯಲ್ಲಿ 35 ಅಭ್ಯರ್ಥಿಳು, ಎರಡನೇ ಪಟ್ಟಿಯಲ್ಲಿ ಒಬ್ಬರಿಗೆ, ಮೂರನೇ ಪಟ್ಟಿಯಲ್ಲಿ ಐವರು ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡಲಾಗಿತ್ತು. ಒಟ್ಟಾರೆ ಇದುವರೆಗೂ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 81 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್‌ 13 & 20ರಂದು ಮತದಾನ ನಡೆಯಲಿದ್ದು, ನವೆಂಬರ್‌ 23ಕ್ಕೆ ಫಲಿತಾಂಶ ಹೊರಬೀಳಲಿದೆ.

ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಅಕ್ಟೋಬರ್‌ 23ರಂದು ಜಾರ್ಖಂಡ್‌ ಜಾರ್ಖಂಡ್‌ ಮುಕ್ತಿ ಮೂರ್ಚಾ (ಜೆಎಂಎಂ) ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಿದೆ. ಎಷ್ಟು ಸ್ಥಾನಗಳಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮುಂಬರುವ ವಿಧಾನಸಭಾ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ತನ್ನ 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಗುಡೆ ಮಾಡಿದೆ. ಬರ್ಹೈತ್‌ನಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಗಂಡೇ ಕ್ಷೇತ್ರದಿಂದ ಕಲ್ಪನಾ ಸೊರೇನ್ ಅವರನ್ನು ಕಣಕ್ಕಿಳಿಸಿದೆ.

ಇನ್ನು 35 ಜೆಎಂಎಂ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿಯ ಸಹೋದರ ಬಸಂತ್ ಸೊರೇನ್ ದುಮ್ಕಾ, ಜಾರ್ಖಂಡ್ ವಿಧಾನಸಭಾ ಸ್ಪೀಕರ್ ರವೀಂದ್ರನಾಥ್ ಮಹತೋ ನಾಲಾ, ಸಚಿವ ಮಿಥಿಲೇಶ್ ಠಾಕೂರ್ ಗರ್ವಾ, ಸೋನು ಸುದಿವ್ಯಾ ಗಿರಿದಿಹ್ ಮತ್ತು ಬೇಬಿ ದೇವಿ ಡುಮ್ರಿಯಿಂದ ಸರ್ಧೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+