ಜಾರ್ಖಂಡ್ ಅಸೆಂಬ್ಲಿ ಚುನಾವಣೆ, ಕರ್ನಾಟಕ ಉಪ ಚುನಾವಣೆ LIVE News Updates in Kannada: ಕರ್ನಾಟಕದಲ್ಲಿ ಶೇ.45.02ರಷ್ಟು ಮತದಾನ
ಕರ್ನಾಟಕದ ರಾಜಕೀಯದಲ್ಲಿ ಈಗ ಹಲವು ವಾರ್ ಶುರುವಾಗಿವೆ. ಉಪಚುನಾವಣೆ ಗೆಲುವು ಅನಿವಾರ್ಯ ಎಂಬ ಪರಿಸ್ಥಿತಿಯು ಬಿಜೆಪಿ, ಕಾಂಗ್ರೆಸ್ & ಜೆಡಿಎಸ್ ನಾಯಕರಿಗೆ ಎದುರಾಗಿದೆ. ಇದೇ ಕಾರಣಕ್ಕೆ ದೊಡ್ಡ ತಿಕ್ಕಾಟವೂ ಶುರುವಾಗಿದೆ. ಇಂದು ಚನ್ನಪಟ್ಟಣ, ಸಂಡೂರು & ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇದರ ಜೊತೆಗೆ ದೂರದ ಜಾರ್ಖಂಡ್ ರಾಜ್ಯದ ವಿಧಾನಭೆಗೆ ಕೂಡ ಚುನಾವಣೆ ಆರಂಭವಾಗಿದೆ.
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿ, ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ನಡುವೆ, ಕಾಂಗ್ರೆಸ್ ನಾಯಕರ ಗ್ಯಾರಂಟಿ ಪ್ಲಾನ್ ವರ್ಕೌಟ್ ಆಗಿತ್ತು. ಹೀಗೆ ದೇಶದಲ್ಲಿ ಮಾಯವಾಗಿ ಹೋಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಮತ್ತೊಮ್ಮೆ ಉಸಿರು ನೀಡಿತ್ತು. ಕಾಂಗ್ರೆಸ್ ಪಕ್ಷ ಬಹುಮತವನ್ನು ಮೀರಿ ಭಾರಿ ಪ್ರಮಾಣದಲ್ಲಿ ಸ್ಥಾನಗಳನ್ನು ತನ್ನದಾಗಿಸಿಕೊಂಡು ಸರ್ಕಾರ ರಚನೆ ಕೂಡ ಮಾಡಿದೆ. ಆದರೆ, 2024ರ ಲೋಕಸಭೆ ಚುನಾವಣೆ ನಂತರ ಉಪಚುನಾವಣೆ ಎದುರಾಗಿದೆ.

ಉಪಚುನಾವಣೆ ನಡೆಯುತ್ತಿರುವುದು ಏಕೆ?
2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಅತಿಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಒಂದೇ ಒಂದು ಗುರಿಯೊಂದಿಗೆ ಕಾಂಗ್ರೆಸ್ & ಬಿಜೆಪಿ ಫೈಟಿಂಗ್ ಆರಂಭಿಸಿದ್ದವು. ಈ ಸಮಯದಲ್ಲೇ ಜೆಡಿಎಸ್ ಕೂಡ ಬಿಜೆಪಿ ಬೆನ್ನಿಗೆ ನಿಂತು ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಹಾಲಿ ಶಾಸಕರು ಕೂಡ ಸ್ಪರ್ಧೆ ಮಾಡಿದ್ದರು.
ಹಿಂದೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಇದೀಗ ಮಂಡ್ಯದ ಸಂಸದರಾಗಿ & ಕೇಂದ್ರ ಸಚಿವರಾಗಿದ್ದಾರೆ. ಮತ್ತೊಂದು ಕಡೆ ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲೂ ಅಲ್ಲಿನ ಶಾಸಕರು ಸಂಸದರಾಗಿ ಆಯ್ಕೆಯಾದ ಕಾರಣಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ.
ಜಾರ್ಖಂಡ್ ಅಖಾಡದಲ್ಲಿ ಯಾರ ಬಾವುಟ?
ಕರ್ನಾಟಕದ ಚನ್ನಪಟ್ಟಣ, ಸಂಡೂರು & ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಜೊತೆಗೆ ದೂರದ ಜಾರ್ಖಂಡ್ ರಾಜ್ಯದಲ್ಲಿ ಇದೀಗ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಜಾರ್ಖಂಡ್ ರಾಜ್ಯದಲ್ಲಿ ಒಟ್ಟು 2 ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಅಂದ್ರೆ ನವೆಂಬರ್ 13 ರಂದು ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನವು ನಡೆಯಲಿದೆ. ಈ ಮೂಲಕ ನವೆಂಬರ್ 20 ರಂದು 2ನೇ ಹಂತದಲ್ಲಿ 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗೆ ಒಟ್ಟಾರೆ ಜಾರ್ಖಂಡ್ ರಾಜ್ಯದ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿಗೆ ಈಗ ವೋಟಿಂಗ್ ನಡೆಯಲಿದೆ.







ಜಾರ್ಖಂಡ್‌ನಲ್ಲಿ ಗೆಲ್ಲುವ ಭರವಸೆ ಇದೆ

Jharkhand Election 2024: ಜಾರ್ಖಂಡ್ ಮತದಾರರಿಗೆ ಮೋದಿ ಮನವಿ
Jharkhand Assembly Election 2024: ಜಾರ್ಖಂಡ್‌ನಲ್ಲಿ ಯಾರ ಸರ್ಕಾರ, ಮಾಜಿ ಸಿಎಂ ಕೊಟ್ಟ ಸುಳಿವು
Channapatna By Election: ಚನ್ನಪಟ್ಟಣ ರಾಜಕಾರಣದಲ್ಲಿ ಯಾರದ್ದು ಮೇಲುಗೈ? ಕ್ಷೇತ್ರದ ಇತಿಹಾಸ,ಅಂಕಿ ಅಂಶಗಳು ಇಲ್ಲಿದೆ

Jharkhand Election: ದ್ವೇಷದ ರಾಜಕಾರಣ ಮಾಡುವವರನ್ನು ದೂರ ಇಡಿ; ಹೇಮಂತ್ ಸೊರೆನ್ ಮನವಿ
ಕರ್ನಾಟಕದ 3 ಕ್ಷೇತ್ರಗಳಲ್ಲಿ ಮಧ್ಯಾಹ್ನ 1ಗಂಟೆವರೆಗೆ ಶೇ.45.02ರಷ್ಟು ಮತದಾನ



Sandur By Election: ಸಂಡೂರು ಉಪ ಚುನಾವಣೆ, ಕ್ಷೇತ್ರದ ರಾಜಕೀಯ ಇತಿಹಾಸ
Channapatna By Election: ಚನ್ನಪಟ್ಟಣದಲ್ಲಿ 29 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ
ಕರ್ನಾಟಕ ಉಪಚುನಾವಣೆ: ಶಿಗ್ಗಾವಿ ಸೇರಿ ಮೂರು ಕ್ಷೇತ್ರಗಳಲ್ಲಿ ಮತದಾನ ಆಗಿದ್ದೆಷ್ಟು?


Priyanka Gandhi: ವಯನಾಡಿನ ಮತಗಟ್ಟೆಗೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿಯನ್ನು ತಬ್ಬಿಕೊಂಡ ಜನ- ಪ್ರೀತಿಗೆ ಆಭಾರಿ ಎಂದ 'ಕೈ' ನಾಯಕಿ
#WATCH | #JharkhandElections2024 | BJP candidate from Saraikela assembly constituency & former CM, Champai Soren says, "It is everyone's right to cast votes according to their choice. We have raised the issue of infiltrators and land grabbing and I will keep raising this issue.… pic.twitter.com/6wJe17cPK1
— ANI (@ANI) November 13, 2024


ಶಿಗ್ಗಾವಿ ರಾಜಕಾರಣದಲ್ಲಿ ಯಾರದ್ದು ಮೇಲುಗೈ? ಈವರೆಗಿನ ಇತಿಹಾಸ ಹೇಳುವುದೇನು? ಅಂಕಿಅಂಶ, ಮಾಹಿತಿ























Click it and Unblock the Notifications