ಶಿಗ್ಗಾವಿ ರಾಜಕಾರಣದಲ್ಲಿ ಯಾರದ್ದು ಮೇಲುಗೈ? ಈವರೆಗಿನ ಇತಿಹಾಸ ಹೇಳುವುದೇನು? ಅಂಕಿಅಂಶ, ಮಾಹಿತಿ
ಹಾವೇರಿ, ನವೆಂಬರ್ 13: ಯಾಲಕ್ಕಿ ಕಂಪನಿ ಹಾವೇರಿ ಜಿಲ್ಲೆಯು ಉತ್ತರ ಕರ್ನಾಟಕದ ಹೆಬ್ಬಾಳಗಿಲು ಎಂದು ಕರೆಸಿಕೊಳ್ಳುತ್ತದೆ. ಮಧ್ಯ ಕರ್ನಾಟಕದ ಅಗ್ರ ಜಿಲ್ಲೆಯಾಗಿದ್ದು, ಎಂಟು ತಾಲೂಕು ಒಳಗೊಂಡಿದೆ. ಶಿಗ್ಗಾವಿ ಕ್ಷೇತ್ರವು ಭೌಗೋಳಿಕವಾಗಿ ಇದೇ ಹಾವೇರಿ ಜಿಲ್ಲೆಗೆ ಸೇರಿದರೂ ಸಹಿತ ರಾಜಕೀಯವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಗೆ ಬರುತ್ತದೆ. ಇಂದು (ನವೆಂಬರ್ 13) ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ 2024 ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.
ದಶಕಗಳಿಂದಲೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರವ ಬಿಜೆಪಿ ಭದ್ರಕೋಟೆಯಾಗಿದೆ. ಇಲ್ಲಿ ಪಂಚಮಸಾಲಿ, ದಲಿತರು, ಸಾದರು ಸೇರಿದಂತೆ ಲಿಂಗಾಯತ (ಹಿಂದೂ ಧರ್ಮ) ಸಮಾಜದ ಮತಗಳು ಹೆಚ್ಚಿವೆ. ಇನ್ನೂ ಅಲ್ಪಸಂಖ್ಯಾತರು ಒಳಗೊಂಡಂತೆ ಮುಸ್ಲಿಂ ಸಮುದಾಯದವರ ಮತಗಳು ನಂತರದ ಸ್ಥಾನದಲ್ಲಿವೆ. ಈ ಎರಡು ವರ್ಗಗಳ ಪ್ರಭಾವ ಹೆಚ್ಚಿರುವ ಕಾರಣದಿಂದಲೇ ಪ್ರತಿ ಭಾರಿಯು ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಬದಲಾಗುತ್ತದೆ.

ಹಿಂದಿನ ಚುನಾವಣೆಗಳ ಗೆಲುವು-ಸೋಲಿನ ಸಂಕ್ಷಿಪ್ತ ಮಾಹಿತಿ
ಸಂಕ್ಷಿಪ್ತವಾಗಿ ನೋಡುವುದಾದರೆ 2023ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅತ್ಯಧಿಕ ಅಂತಗಳಿಂದ ಗೆದ್ದು ಬೀಗಿದ್ದರು. ನಂತರ ಅವರನ್ನು ಬಿಜೆಪಿ ರಾಜಕೀಯ ಹಿತದೃಷ್ಟಿಯಿಂದ ಲೋಕಸಭಾ ಚುನಾವಣೆಗೆ 2024ಕ್ಕೆ ನಿಲ್ಲಿಸಲಾಯಿತು. ಅವರ ಅದರಲ್ಲೂ ಗೆದ್ದು ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆ ಆದರು.
ಈ ಹಿನ್ನೆಲ್ಲೆಯಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ರಾಜೀನಾಮೆ ನೀಡುತ್ತಿದ್ದಂತೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಯಿತು. ಬಿಜೆಪಿಯು ಸಂಸದರ ಪುತ್ರ ಭರತ್ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಿತು. ಇವರ ವಿರುದ್ಧ ಕಾಂಗ್ರೆಸ್ ಯಾಸೀರ್ ಖಾನ್ ಪಠಾಣ್ ಅವರನ್ನು ಕಣಕ್ಕೆ ಇಳಿಸಿದೆ.

ಹಿಂದೂ ಮುಸ್ಲಿಂ ಮತಗಳು ಹೆಚ್ಚಿಸುವ ಕ್ಷೇತ್ರದಲ್ಲಿ ಬಹುಕಾಲದಿಂದ ಬಿಜೆಪಿ ಪ್ರಾಬಲ್ಯ ಹೊಂದಿದೆ. 2023ರಲ್ಲಿ ಬಸವರಾಜ ಬೊಮ್ಮಾಯಿ ಅವರು (1,00,000 ಅಧಿಕ ಮತ) ಗೆದ್ದರು, ಅವರ ವಿರುದ್ಧ ಇದೇ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರು 64,038 ಮತಗಳನ್ನು ಪಡೆದು ಸೋಲನುಭವಿಸಿದರು. ಜೆಡಿಎಸ್ ಅಭ್ಯರ್ಥಿ ಚನ್ನಬಸಪ್ಪ ಯಲಿಗಾರ ಅವರು ಕೇವಲ 13,928 ಮತಗಳಿಗೆ ತೃಪ್ತಿಪಟ್ಟುಕೊಂಡರು.
2018ರ ಶಿಗ್ಗಾವಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು 83,868 ಮತ ಪಡೆದು ವಿಜಯಸಾಧಿಸಿದ್ದು, ಆಗಲು ಅವರ ವಿರುದ್ಧ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಅಲ್ಪಸಂಖ್ಯಾತ ನಾಯಕ ಸೈಯದ್ ಅಜೀಮ್ ಪೀರ ಖಾದ್ರಿ ಅವರು 74,603 ಮತ ಪಡೆದು ಪರಾಭವಗೊಂಡಿದ್ದರು.
2013ರ ಶಿಗ್ಗಾವಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರೇ ಸ್ಪರ್ಧಿಸಿದ್ದರು. ಆಗ 73,007 ಮತಗಳು ಪಡೆದು ಗೆದ್ದು, ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸೈಯದ್ ಅಜೀಮ್ ಪೀರ ಖಾದ್ರಿ 63,503 ಮತಗಳನ್ನು ಪಡೆದು ಸೋತರು.
2018ರ ಶಿಗ್ಗಾವಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ 63,780 ಮತಗಳು ಬಂದರೆ, ಕಾಂಗ್ರೆಸ್‌ನ ಸೈಯದ್ ಅಜೀಮ್ ಪೀರ ಖಾದ್ರಿ ಅವರಿಗೆ 50,918 ಮತಗಳು ಮಾತ್ರ ಲಭಿಸಿದವು. ಹೀಗೆ ಪ್ರತಿ ಬಾರಿಯ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ತಲುಪಿದೆ.












Click it and Unblock the Notifications