Get Updates
Get notified of breaking news, exclusive insights, and must-see stories!

Channapatna By Election: ಚನ್ನಪಟ್ಟಣ ರಾಜಕಾರಣದಲ್ಲಿ ಯಾರದ್ದು ಮೇಲುಗೈ? ಕ್ಷೇತ್ರದ ಇತಿಹಾಸ,ಅಂಕಿ ಅಂಶಗಳು ಇಲ್ಲಿದೆ

ಚನ್ನಪಟ್ಟಣ, ನವೆಂಬರ್‌ 13: ರಾಷ್ಟ್ರಮಟ್ಟದಲ್ಲಿ ಬೊಂಬೆನಗರಿ ಎಂದೇ ಖ್ಯಾತಿಗಳಿಸಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ 1957 ರಿಂದ 2024 ರವರೆಗೂ ಹಲವು ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಕಳೆದ 15 ವರ್ಷದಲ್ಲಿ ರಾಜಕೀಯ ಮೇಲಾಟಗಳಿಂದಾಗಿಯೇ ಮೂರು ಉಪಚುನಾವಣೆಗಳನ್ನು ಕಾಣುತ್ತಿರುವ ಅಪರೂಪದ ಕ್ಷೇತ್ರವಾಗಿ ಗುರುತಿಸಲ್ಪಡುತ್ತಿದೆ.

2008, 2013 ಹಾಗೂ 2023 ರಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳು ನಡೆದಿದ್ದು, 2009, 2011 ಹಾಗೂ 2024 ರ ಈ ಅವಧಿಯಲ್ಲಿ ಉಪ ಚುನಾವಣೆಗಳು ನಡೆದಿವೆ. ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಮೂರನೇ ಉಪಚುನಾವಣೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಕಾರಣರಾದರೆ, ಮೊದಲ ಉಪ ಚುನಾವಣೆಗೆ ಸಿ.ಪಿ.ಯೋಗೇಶ್ವರ್‌ ಕಾರಣರಾಗಿದ್ದು, ಅಂದಿನ ಕಾಂಗ್ರೆಸ್‌ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್‌ ನೀರಾವರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮೊದಲ ಉಪ ಚುನಾವಣೆ ನಡೆಯಿತು.

Channapatna By Election 2024 Election History Channapatna Seat

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಸಿ ಪಿ ಯೋಗೇಶ್ವರ್‌ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಂ.ಸಿ.ಅಶ್ವಥ್‌ ವಿರುದ್ಧ ಸೋಲು ಕಂಡರು. ಬಳಿಕ ಅದೇ ಅಶ್ವಥ್‌ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಎರಡನೇ ಉಪ ಚುನಾವಣೆಯಲ್ಲಿ ಸಿ ಪಿ ಯೋಗೇಶ್ವರ್‌ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು.

ಇನ್ನೂ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಗೆಲುವು ಕಂಡ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಕಂಡರು. ಈ ಕಾರಣದಿಂದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮೂರನೆ ಉಪ ಚುನಾವಣೆ ನಡೆಯುತ್ತಿದೆ. ಇಂದು (ನವೆಂಬರ್‌ 13) ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಡೆಯುತ್ತಿದ್ದು, ಎನ್‌ ಡಿ ಎ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಕಣದಲ್ಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ ಪಿ ಯೋಗೇಶ್ವರ್‌ ಅವರು ಕಣದಲ್ಲಿದ್ದಾರೆ.

ಮೂರು ಉಪ ಚುನಾವಣೆಗಳ ಪೈಕಿ ಎರಡು ಉಪ ಚುನಾವಣೆಗಳು ಎರಡು ವರ್ಷಗಳ ಅಂತರದಲ್ಲಿ ನಡೆದರೆ ಮೂರನೇ ಉಪ ಚುನಾವಣೆ ಹದಿಮೂರು ವರ್ಷಗಳ ಬಳಿಕ ನಡೆಯುತ್ತಿದ್ದು, ಈ ಉಪ ಚುನಾವಣೆಯ ಮತ್ತೊಂದು ವಿಶೇಷತೆ ಏನೆಂದರೆ ಈ ಮೂರು ಉಪ ಚುನಾವಣೆಯಲ್ಲೂ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳುತ್ತಿರುವುದು ಸಿ.ಪಿ.ಯೋಗೇಶ್ವರ್‌ ಅವರು ಮಾತ್ರ. 2008 ರಿಂದ ಹಿಡಿದು 2023 ರ ವರೆಗಿನ ಮೂರು ಸಾರ್ವತ್ರಿಕ ಹಾಗೂ ಎರಡು ಉಪ ಚುನಾವಣೆ ಸೇರಿ ಐದು ಚುನಾವಣೆಗಳ ಪೈಕಿ ಐದರಲ್ಲೂ ಸಿ.ಪಿ.ಯೋಗೇಶ್ವರ್‌ ಸ್ಪರ್ಧೆ ಮಾಡಿದ್ದು, ಈ ಉಪ ಚುನಾವಣೆಯಲ್ಲೂ ಬಿಜೆಪಿಯಿಂದ ಟಿಕೆಟ್‌ ಸಿಗದ ಹಿನ್ನೆಲೆ ಬಿಜೆಪಿಗೆ ಗುಡ್‌ ಬಾಯ್‌ ಹೇಳಿ, ಕಾಂಗ್ರೆಸ್‌ ನಿಂದ ಚನ್ನಪಟ್ಟಣ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಚನ್ನಪಟ್ಟಣ ತಾಲೂಕಿನ ನೀರಾವರಿಗೆ ಎಂದು ಯೋಗೇಶ್ವರ್‌ ರಾಜೀನಾಮೆ ನೀಡಿದರೆ, ಅಪರೇಷನ್‌ ಕಮಲಕ್ಕೆ ತುತ್ತಾಗಿ ಅಶ್ವಥ್‌ ರಾಜೀನಾಮೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ಎಚ್ಡಿಕೆ ಕ್ಷೇತ್ರಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ ಉಪ ಚುನಾವಣೆ ನಡೆಯುತ್ತಿದೆ. 2008 ರಿಂದ ಹಿಡಿದು 2023 ರ ವರೆಗಿನ ಮೂರು ಸಾರ್ವತ್ರಿಕ ಹಾಗೂ ಎರಡು ಉಪ ಚುನಾವಣೆ ಸೇರಿದಂತೆ ಸಿ ಪಿ ಯೋಗೇಶ್ವರ್‌ ಅವರು ಆರೂ ಚುನಾವಣೆಗಳಲ್ಲಿ ಸ್ಫರ್ಧಿಸಿದ್ದಾರೆ.

2009 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಸಿ.ಅಶ್ವಥ್‌ ಸ್ಪರ್ಧಿಸಿ 64,517 ಮತಗಳನ್ನು ಗಳಿಸಿದರೆ, ಬಿಜೆಪಿ ಕಣಕ್ಕಿಳಿದಿದ್ದ ಸಿ ಪಿ ಯೋಗೇಶ್ವರ್‌ 62,235 ಮತಗಳನ್ನು ಪಡೆದು 2,282 ಮತಗಳ ಅಲ್ಪ ಆಂತರದಿಂದ ಸೋಲು ಕಂಡಿದ್ದರು. ಬಳಿಕ 2011 ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್‌ ಸ್ಪರ್ಧಿಸಿ 75,275 ಮತಗಳನ್ನು ಪಡೆದಿದ್ದು, ಇವರ ಪ್ರತಿಸ್ಪರ್ಧಿ ಜೆಡಿಎಸ್‌ ನಿಂದ ಸ್ಪರ್ಧಿಸಿದ್ದ ಸಿಂ.ಲಿಂ.ನಾಗರಾಜು 57,472 ಗಳಿಸಿದ್ದು, 17.803 ಮತಗಳಿಂದ ಜಯಶೀಲರಾಗಿದ್ದರು. ಇದೀಗ 2024 ರ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕಣದಲ್ಲಿದ್ರೆ, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ ಪಿ ಯೋಗೇಶ್ವರ್‌ ಕಣದಲ್ಲಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದನ್ನ ಕಾದುನೋಡ್ಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+