Jharkhand Assembly Election 2024: ಜಾರ್ಖಂಡ್ ಚುನಾವಣೆ..ಈ ಜಿಲ್ಲೆಯಲ್ಲೇ ಅತಿ ಕಡಿಮೆ ಮತದಾನ

ತೀವ್ರ ಕುತೂಹಲ ಕೆರಳಿಸಿರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆ ಮತದಾನ ನಡೆಯುತ್ತಿದ್ದು, ಜಾರ್ಖಂಡ್‌ನ 43 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮಧ್ಯಾಹ್ನವರೆಗೆ ಶೇ.46.25ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್‌ನ 15 ಜಿಲ್ಲೆಗಳಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ಜಾರ್ಖಂಡ್‌ನಲ್ಲಿ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು, ನವೆಂಬರ್ 20ರಂದು ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಚುನಾವಣೆ ಫಲಿತಾಂಶ ನವೆಂಬರ್‌ 23 ಶನಿವಾರದಂದು ಹೊರಬೀಳಲಿದೆ. ಜೆಎಂಎಂ ನಾಯಕ, ಮುಖ್ಯಮಂತ್ರಿ ಹೇಮಂತ ಸೋರೆನ್‌, ಮಾಜಿ ಸಂಸದೆ ಗೀತಾ ಕೋಡಾ ಸೇರಿದಂತೆ ಒಟ್ಟು 683 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Jharkhand Assembly Election 46 25 PC Voter Turnout Recorded In 43 Assembly Seats Till Afternoon

ಇಂದು ಮಧ್ಯಾಹ್ನವರೆಗೆ ಜಾರ್ಖಂಡ್‌ ಗುಮ್ಲಾ ಜಿಲ್ಲೆಯಲ್ಲಿ ಶೇ.52.11ರಷ್ಟು ಅತಿ ಹೆಚ್ಚು ಮತದಾನವಾಗಿದ್ದು, ಲೋಹರ್ ದಗದಲ್ಲಿ ಶೇ.51.53, ಖುಂತಿಯಲ್ಲಿ ಶೇ.51.37 ಮತ್ತು ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯಲ್ಲಿ ಶೇ.50.71ರಷ್ಟು ಮತದಾನವಾಗಿದೆ. ಸಿಮ್ಡೆಗಾದಲ್ಲಿ ಶೇ 50.66 ರಷ್ಟು ಮತದಾನ ದಾಖಲಾಗಿದ್ದು, ಲತೇಹರ್‌ನಲ್ಲಿ ಶೇ 50.41, ಕೊಡೆರ್ಮಾದಲ್ಲಿ ಶೇ 47.33 ಮತ್ತು ರಾಮಗಢದಲ್ಲಿ ಶೇ 46.81 ರಷ್ಟು ಮತದಾನವಾಗಿದೆ.

ಗರ್ವಾ ಜಿಲ್ಲೆಯಲ್ಲಿ ಶೇಕಡಾ 46.75, ಪಶ್ಚಿಮ ಸಿಂಗ್‌ಭುಮ್‌ನಲ್ಲಿ ಶೇಕಡಾ 46.41, ಹಜಾರಿಬಾಗ್‌ನಲ್ಲಿ ಶೇಕಡಾ 45.77, ಚತ್ರಾದಲ್ಲಿ ಶೇಕಡಾ 45.76 ಮತ್ತು ಪೂರ್ವ ಸಿಂಗ್‌ಭುಮ್‌ನಲ್ಲಿ ಶೇಕಡಾ 44.88 ರಷ್ಟು ಮತದಾನವಾಗಿದೆ. ಇನ್ನು ಪಲಮುದಲ್ಲಿ ಶೇಕಡ 44 ರಷ್ಟು ದಾಖಲಾಗಿದ್ದು, ರಾಂಚಿ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಅತಿ ಕಡಿಮೆ ಶೇಕಡ 40.98 ಮತದಾನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+