Jharkhand Election 2024 Exit Poll: ಎಬಿಪಿ ಮಾರ್ಟಿಜ್ ಪ್ರಕಾರ ಜಾರ್ಖಂಡ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

Jharkhand Assembly Election 2024 Exit Poll: ಜಾರ್ಖಂಡ್‌ ವಿಧಾನಸಭೆ ಚುನಾವಣೆ 2024ರ ಎರಡು ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಇದೀಗ ಎಬಿಪಿ ಮಾರ್ಟಿಜ್‌ ಚುಣಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ಹಾಗಾದರೆ ಈ ವಾಹಿನಿಯ ಪ್ರಕಾರ ಯಾವ ಪಕ್ಷ ಗೆಲುವು ಸಾಧಿಸಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಎಬಿಪಿ ಮಾರ್ಟಿಜ್‌ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಜಾರ್ಖಂಡ್‌ನಲ್ಲಿ ಎನ್‌ಡಿಎ 47, ಜೆಎಂಎಂ 30, ಪಕ್ಷೇತರ 4 ಸ್ಥಾನಗಳನ್ನು ಪಡೆದಿದೆ. ಈ ಮೂಲಕ ಜಾರ್ಖಂಡ್‌ನಲ್ಲಿ 81 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ 47 ಸ್ಥಾನಗಳನ್ನು ಪಡೆಯುವ ಭರ್ಜರಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41 ಆಗಿದೆ.

Jharkhand Assembly Election 2024 ABP-Materize Exit Poll Prediction

ಜಾರ್ಖಂಡ್‌ನಲ್ಲಿ ನವೆಂಬರ್ 13ರಂದು 43 ವಿಧಾನಸಭೆ ಕ್ಷೇತ್ರಗಳು, ಇಂದು (ನವೆಂಬರ್ 20) 38 ವಿಧಾನಸಭಾ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆದಿದ್ದು, ಶೇಕಡ 67.59ರಷ್ಟು ಮತದಾನ ಆಗಿದ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಇನ್ನು ಮಹರಾಷ್ಟ್ರದ 288 ವಿಧಾನಸಭೆ ಸ್ಥಾನಗಳಿಗೂ ಮತದಾನ ಮುಕ್ತಾಯವಾಗಿದ್ದು, 58.22ರಷ್ಟು ಮತದಾನವಾಗಿದೆ ಎಂದು ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ. ನವೆಂಬರ್ 23ರಂದು ಫಲಿತಾಂಶ ಪ್ರಕಟ ಆಗಲಿದೆ.

ಇಲ್ಲಿ ಆಡಳಿತಾರೂಢ ಜೆಎಂಎಂ, ಕಾಂಗ್ರೆಸ್‌ ಹಾಗೂ ಆರ್‌ಜೆಡಿ, ಸಿಪಿಐಎಂ ಸ್ಪರ್ಧೆ ಮಾಡಿವೆ. ಬಿಜೆಪಿ, ಜೆಡಿಯು, ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌, ಲೋಕಜನಶಕ್ತಿ ಸ್ಪರ್ಧಿಸಿವೆ. ಇನ್ನು ಬಿಎಸ್ಪಿ ಸೇರಿ 10ಕ್ಕೂ ಹೆಚ್ಚು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಬಿಜೆಪಿ ಅತ್ಯಧಿಕ 68, ಜೆಎಂಎಂ 43, ಕಾಂಗ್ರೆಸ್‌ 30, ಆಲ್‌ ಜಾರ್ಖಂಡ್‌ ಸ್ಟೂಡೆಂಟ್ಸ್‌ ಯೂನಿಯನ್‌ 10, ಆರ್‌ಜೆಡಿ 7, ಸಿಪಿಐಎಂ 4, ಜೆಡಿಯು 2 ಸ್ಥಾನಗಳಲ್ಲಿ ಕಣದಲ್ಲಿವೆ.

ಹಿಂದಿನ ಚುನಾವಣೆಯಲ್ಲಿ ಜೆಎಂಎಂ ಹಾಗೂ ಕಾಂಗ್ರೆಸ್‌ ಮೈತ್ರಿಯೊಂದಿಗೆ 46 ಸ್ಥಾನ ಪಡೆದು ಯುಪಿಎ ಅಧಿಕಾರದಲ್ಲಿತ್ತು. ಇನ್ನು ಇಂದು ಕಲ್ಪನಾ ಸೊರೇನ್ ಮಾತನಾಡಿದ್ದು, ಜಾರ್ಖಂಡ್ ರಾಜ್ಯವು ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮಹಿಳೆಯರಿಗೆ ಸಿಗಬೇಕಾದ ಗೌರವ ಸಿಗುತ್ತಿದೆ. ಹೇಮಂತ್ ಸೊರೇನ್ ರಾಜ್ಯದ ಮಹಿಳೆಯರ ಮಗ ಮತ್ತು ಸಹೋದರನಂತೆ ಕೆಲಸ ಮಾಡಿದ್ದಾರೆ. ಜಾರ್ಖಂಡ್ ರಾಜ್ಯದ ಅಭಿವೃದ್ಧಿಗಾಗಿ ಹೇಮಂತ್ ಸೋರೆನ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ನನ್ನ ಆಲೋಚನೆಗಳನ್ನು ನನ್ನ ಕೆಲಸದ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+