Jammu & Kashmir Republic Bharat-Matrize Exit Poll Results: ಜಮ್ಮು & ಕಾಶ್ಮೀರದ ರಿಪಬ್ಲಿಕ್‌ ಬಿಜೆಪಿಗೆ ಗೆಲುವು

ನವದೆಹಲಿ, ಅಕ್ಟೋಬರ್ 05: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಮೂರು ಹಂತದ ಮತದಾನ ಮುಕ್ತಾಯವಾಗಿದೆ. ಇದೀಗ ರಿಪಬ್ಲಿಕ್‌ ಭಾರತ್ ಮ್ಯಾಟ್ರಿಜ್‌ ಈ ರಾಜ್ಯದ ಚುಣಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ಹಾಗಾದರೆ ಈ ವಾಹಿನಿಯ ಪ್ರಕಾರ ಯಾವ ಪಕ್ಷ ಗೆಲುವು ಸಾಧಿಸಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಿಪಬ್ಲಿಕ್‌ ಭಾರತ್ ಮ್ಯಾಟ್ರಿಜ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25-31 ಸ್ಥಾನ ಪಡೆಯಲಿದ್ದ, ಈ ಮೂಲಕ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

Jammu And Kashmir Assembly Election 2024 Republic Tv Exit Poll Prediction

ಯಾವ್ಯಾವ ಪಕ್ಷ ಎಷ್ಟು ಸ್ಥಾನ?

* ಬಿಜೆಪಿ 25-31
* ಕಾಂಗ್ರೆಸ್‌ 12
* ಎಐಪಿ 0-2
* ಎನ್‌ಸಿ 11-15
* ಪಿಡಿಪಿ - 28
* ಇತರೆ ಪಕ್ಷಗಳು- 0-1

2014ರ ಬಳಿಕ ಮೊದಲ ಬಾರಿಗೆ ಅಂದರೆ 10 ವರ್ಷಗಳ ನಂತರ ಈ ರಾಜ್ಯದಲ್ಲಿ ಚುನಾವಣೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಒಟ್ಟು ವಿಧಾನಸಭಾ ಕ್ಷೇತ್ರಗಳು 90 ಆಗಿದೆ. ಮೂರು ಹಂತದಲ್ಲಿ ಮತದಾನ ನಡೆದಿದ್ದು, ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46 ಆಗದೆ.

ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಒಟ್ಟು ಶೇಕಡ 63.88ರಷ್ಟು ಮತದಾನವಾಗಿತ್ತು. ಇನ್ನು ಇಂದು (ಅಕ್ಟೋಬರ್‌ 05) ಶನಿವಾರ ಸುದ್ದಿ ವಾಹಿನಿಗಳು ವಿವಿಧ ಸಂಸ್ಥೆಗಳ ಜೊತೆಗೆ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಪ್ರಕಟ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಸ್ಟ್ 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆದಿದೆ. 'ಇಂಡಿಯಾ' ಮೈತ್ರಿಕೂಟ, ಬಿಜೆಪಿ ಚುನಾವಣೆಯಲ್ಲಿ ಎದುರಾಳಿ ಪಕ್ಷಗಳಾಗಿವೆ.

ಇನ್ನು ಬಹುತೇಕ ಸುದ್ದಿ ಸಂಸ್ಥೆಗಳು ಕಣಿವೆ ರಾಜ್ಯ ಜಮ್ಮು & ಕಾಶ್ಮೀರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಲ್ಲಿ ಪ್ರಕಟ ಮಾಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+