Video: ₹20ರ ಕಚೋರಿ ತಿನ್ನಲು ನಿಂತ ಉದ್ಯಮಿಗೆ ₹20 ಲಕ್ಷ ನಷ್ಟ! ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಎಗರಿಸಿದ ಕಳ್ಳರು
Video Viral: ರಸ್ತೆ ಬದಿ 20 ರೂಪಾಯಿಯ ಕಚೋರಿ ತಿನ್ನಲು ನಿಂತಿದ್ದ ಉದ್ಯಮಿಗೆ ಆ ಆಹಾರ ದುಬಾರಿ ತಿಂಡಿಯಾಗಿ ಪರಿಣಮಿಸಿದೆ. ಅಂದರೆ ಉದ್ಯಮಿಯೊಬ್ಬರು ಕಚೋರಿ ತಿನ್ನಲು ನಿಂತು ಒಟ್ಟು ಬರೋಬ್ಬರಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಆನ್ಲೈನ್ನಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು?
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಉದ್ಯಮಿ ಯೊಬ್ಬರು ರಸ್ತೆಯಲ್ಲಿ ನಿಂತು ಹಸಿವು ನೀಗಿಸಿಕೊಳ್ಳಲು ಕಚೋರಿ ತಿನ್ನುತ್ತಿದ್ದಾರೆ. ಈ ವೇಳೆ ಸ್ಕೂಟರ್ನಲ್ಲಿ ಬಂದ ಇಬ್ಬರು ಕಳ್ಳರು, ಅವರ ವಾಹನದಲ್ಲಿದ್ದ ಸುಮಾರು 20 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ಅನ್ನು ಕದ್ದೊಯ್ದದ ಘಟನೆ ಜೈಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

20 ರೂಪಾಯಿ ಕಚೋರಿಯು ಉದ್ಯಮಿಯ 20 ಲಕ್ಷ ರೂಪಾಯಿಗೆ ಕುತ್ತುಂಟು ಮಾಡಿದೆ. ಕೆಲವೇ ನಿಮಿಷಗಳಲ್ಲಿ ಕಚೋರಿ ಜೊತೆಗೆ ಲಕ್ಷ ಲಕ್ಷ ರೂಪಾಯಿ ಹಣ ಮಾಯವಾಗಿದೆ. ಆ ಉದ್ಯಮಿಗೆ ತಾನು ತಿಂದ ಕಚೋರಿಯ ಬೆಲೆಗಿಂತ ಸುಮಾರು ಸಾವಿರ ಪಟ್ಟು ಹೆಚ್ಚು ಮೊತ್ತದ ನಷ್ಟ ಉಂಟಾಯಿತು ಎಂಬ ಶಿರ್ಷಿಕೆಯಡಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
ಪ್ಲ್ಯಾನ್ ಮಾಡಿಕೊಂಡು ಬಂದು ಹಣ ಎಸ್ಕೇಪ್
ಸೋಮವಾರ ನಹರ್ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ವ್ಯಕ್ತಿಯ ಬಳಿ ಹಣ ಇರುವುದು ಕಂಡೇ ಬೆನ್ನತ್ತಿ ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಅಂದು ಸಂಜೆ 4 ಗಂಟೆ ಸುಮಾರಿಗೆ ಚಂಪಾಲಾಲ್ ಎಂಬ ಉದ್ಯಮಿಯೊಬ್ಬರು ಕಚೋರಿ ತಿನ್ನಲು ನಿಂತಾಗ, ಹಣವಿದ್ದ ಬ್ಯಾಗ್ ಅನ್ನು ತಮ್ಮ ಸ್ಕೂಟರ್ನ ಮುಂಭಾಗದಲ್ಲಿ ಇಟ್ಟಿದ್ದರು. ಹಿಂದಿನಿಂದ ಅವರನ್ನು ಹಿಂಬಾಲಿಸಿದ್ದ ಆರೋಪಿಗಳು ಅವರ ವಾಹನ ನಿಲ್ಲಿಸಿದ್ದು ನೋಡಿ ಹಣವಿದ್ದ ಬ್ಯಾಗ್ ಲಪಟಾಯಿಸಿದ್ದಾರೆ.
ಕಚೋರಿ ಬಿಟ್ಟು ಕೂಗುತ್ತಲೇ ಚಂಪಾಲಾಲ್ ಅವರು ಆರೋಪಿಗಳನ್ನು ಬೆನ್ನಟ್ಟಿದರು. ಕೂಗಿದ್ದಕ್ಕೆ ಸ್ಥಳೀಯರು ಅವರ ಸಹಾಯಕ್ಕೆ ಬಂದರು. ಆದರೆ ಅವರು ಇಬ್ಬರು ವಾಹನದಲ್ಲಿ ಪರಾರಿಯಾಗಿವುದು ವಿಡಿಯೋದಲ್ಲಿ ಗೊತ್ತಾಗಿದೆ.
ವಿಡಿಯೋದಲ್ಲೇನಿದೆ?
ವಿಡಿಯೋದಲ್ಲಿ ಚಂಪಾಲಾಲ್ ಅವರು ತಮ್ಮ ಸ್ಕೂಟರ್ ಮೇಲೆ ಕುಳಿತು ನಿರಾಳವಾಗಿ ಕಚೋರಿ ತಿನ್ನುತ್ತಿರುವುದು ಕಾಣಿಸುತ್ತದೆ. ಕಚೋರಿ ತಿನ್ನುತ್ತಿದ್ದಂತೆಯೇ ಅವರ ಹಿಂದೆ ಮತ್ತೊಂದು ಸ್ಕೂಟರ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಪಕ್ಕದಲ್ಲೇ ನಿಂತಂತೆ ಮಾಡಿ ಕೈ ಹಾಕಿ ಬ್ಯಾಗ್ ಒಯ್ದಿದ್ದಾರೆ.
ದುಷ್ಕರ್ಮಿಗಳು ಇಬ್ಬರು ಹೆಲ್ಮೆಟ್ ಧರಿಸಿದ್ದ ಆ ಇಬ್ಬರು ವ್ಯಕ್ತಿಗಳನ್ನು ಗುರುತಿಸಲು ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಕಳ್ಳತನ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
₹20 kachori. ₹20 lakh gone. 😭 A man in Jaipur stopped for a snack, thieves grabbed his cash bag off his scooter — and he chased them ON FOOT still holding his kachori 💀 priorities: locked in🎥: https://t.co/C94ifPwczw#ViralClips #Jaipur https://t.co/52zB9Mbn4H
— Clip Goblin (@ClipGoblinHQ) October 28, 2026


Click it and Unblock the Notifications
