ಕಾಶ್ಮೀರ ಸಂಘರ್ಷಕ್ಕೆ ರೂ. 34,00,00,000 ಎತ್ತಿಟ್ಟಿತಾ ಪಾಕಿಸ್ತಾನ?
ನವದೆಹಲಿ, ಜೂನ್ 1:ಕಾಶ್ಮೀರದಲ್ಲಿ ಸಂಘರ್ಷ ಸೃಷ್ಟಿಸಲು ಪಾಕಿಸ್ತಾನ ರೂಪಾಯಿ 34 ಕೋಟಿ ಬಜೆಟಿನಲ್ಲಿ ಎತ್ತಿಟ್ಟಿದ್ಯಾ? ಹೌದು ಎನ್ನುತ್ತವೆ ಗುಪ್ತಚರ ಮೂಲಗಳು. ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ ಪಾಕಿಸ್ತಾನ ಸರಕಾರ ತನ್ನ ಬಜೆಟಿನಲ್ಲಿ ಶೇಕಡಾ 5ರಷ್ಟು ಹಣವನ್ನು ಕಾಶ್ಮೀರಕ್ಕೆಂದೇ ಮೀಸಲಿಟ್ಟಿದೆ.
ಪಾಕಿಸ್ತಾನದ ಒಟ್ಟು ಬಜೆಟ್ 42 ಬಿಲಿಯನ್ ಅಮೆರಿಕನ್ ಡಾಲರ್. ಇದರಲ್ಲಿ ಪಾಕಿಸ್ತಾನದ ಸೇನೆಗೆ ಪ್ರತೀ ವರ್ಷ 6.8 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಎತ್ತಿಡಲಾಗುತ್ತದೆ. ಇದರಲ್ಲಿ ಶೇಕಡಾ 5 ಅಂದರೆ ಸುಮಾರು 34 ಕೋಟಿ ಹಣ ಕಾಶ್ಮೀರ ಸಂಘರ್ಷಕ್ಕೆ ಬಳಕೆಯಾಗುತ್ತದೆ ಎಂಬುದು ಗುಪ್ತಚರ ಇಲಾಖೆಯ ಅಂದಾಜು.[ಕಾಶ್ಮೀರದ ಸೋಪೋರೆಯಲ್ಲಿ ಎನ್ಕೌಂಟರ್, ಇಬ್ಬರು ಉಗ್ರರು ಬಲಿ]

ಕಾಶ್ಮೀರ ಸಂಘರ್ಷಕ್ಕೆ ಹೆಚ್ಚಿನ ಹಣವನ್ನು ಪಾಕಿಸ್ತಾನ ಸೇನೆಯೇ ಪೂರೈಸುತ್ತದೆ. ಕಾರಣ ಪಾಕಿಸ್ತಾನದ ಸೇನೆಗೆ ಕಾಶ್ಮೀರ ಸಂಘರ್ಷ ಜೀವಂತವಾಗಿರುವುದು ಬೇಕಾಗಿದೆ ಎಂಬುದು ಗುಪ್ತಚರ ಇಲಾಖೆಯ ಅಧಿಕಾರಿಗಳ ಅಬಭಿಪ್ರಾಯ.
ಹಲವಾರು ವಿಧಗಳಲ್ಲಿ ಕಾಶ್ಮೀರ ಸೇನೆ ಕಾಶ್ಮೀರ ಸಂಘರ್ಷಕ್ಕೆ ಹಣ ಖರ್ಚು ಮಾಡುತ್ತದೆ. ಮುಖ್ಯವಾಗಿ ಕಾಶ್ಮೀರದಲ್ಲಿ ಕಾರ್ಯಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತಯ್ಯಬಾ, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗಳಿಗೆ ಹಣ ಪೂರೈಸಲಾಗುತ್ತದೆ.[ಬುಲೆಟಿಗಿಂತ ಜಾಸ್ತಿ ಸೆಲ್ಫೀ ಹೊಡೆಯುತ್ತಿದ್ದಉಗ್ರ ಸಬ್ಜರ್ ಭಟ್!]
ಇನ್ನು ಕಾಶ್ಮೀರ ಸಂಘರ್ಷವನ್ನು ಜೀವಂತವಾಗಿಡುವ ಪ್ರತ್ಯೇಕತಾವಾದಿಗಳಿಗೂ ಹಣ ಸಂದಾಯವಾಗುತ್ತದೆ.
ತನಿಖೆ ವೇಳೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ದೊಡ್ಡ ಮಟ್ಟಕ್ಕೆ ಹಣ ಪಡೆದಿರುವುದು ತಿಳಿದು ಬಂದಿದೆ. ದೊಡ್ಡ ಮೊತ್ತದ ಹಣವನ್ನು ಬೇನಾಮಿ ಖಾತೆಗಳಿಂದ ಡೆಪಾಸಿಟ್ ಮಾಡಲಾಗಿದೆ.
ಪ್ರತ್ಯೇಕತಾವಾದಿಗಳಿಗೆ ಹರಿದು ಬರುವ ಹಣದ ಬಗ್ಗೆ ಪ್ರಾಥಮಿಕ ತನಿಖೆ ಕೈಗೊಂಡಿದ್ದ ಎನ್ಐಎ ಇದೀಗ ಎಫ್ಐಆರ್ ದಾಖಲಿಸಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಕಾಶ್ಮೀರದಿಂದ ಹಣ ಪಡೆದಿರುವ ಕಾಶ್ಮೀರ ಕಣಿವೆಯ ಹಲವರನ್ನು ಎನ್ಐಎ ತನಿಖೆಗೆ ಒಳಪಡಿಸಿದೆ.












Click it and Unblock the Notifications