ಬುಲೆಟಿಗಿಂತ ಜಾಸ್ತಿ ಸೆಲ್ಫೀ ಹೊಡೆಯುತ್ತಿದ್ದಉಗ್ರ ಸಬ್ಜರ್ ಭಟ್!
ಜಮ್ಮು ಮತ್ತು ಕಾಶ್ಮೀರ, ಮೇ 31: ಕಳೆದ ವಾರ ಭದ್ರತಾ ಪಡೆಗಳು ಕಾಶ್ಮಿರದ ಹಿಜ್ಬುಲ್ಲಾ ಮುಜಾಹಿದ್ದೀನ್ ಮುಖ್ಯಸ್ಥ ಸಬ್ಜರ್ ಭಟ್ ನನ್ನು ಯಶಸ್ವೀ ಕಾರ್ಯಾಚರಣೆಯಲ್ಲಿ ಕೊಂದು ಹಾಕಿವೆ. ಈತ ಸಾಮಾಜಿಕ ಜಾಲತಾಣದಲ್ಲಿ ಬಲು ಜನಪ್ರಿಯನಾಗಿದ್ದು ಉಗ್ರ ಸಂಘಟನೆಯತ್ತ ಯುವ ಜನರನ್ನು ಸೆಳೆಯುತ್ತಿದ್ದ.
ಈತನ ಸಾಮಾಜಿಕ ಜಾಲತಾಣಗಳ ಸಂಪರ್ಕ ಯಾವ ಮಟ್ಟಕ್ಕೆ ಇತ್ತು ಎಂದರೆ ಇನ್ನೇನು ಭದ್ರತಾ ಪಡೆಗಳು ಆತನ ಮೇಲೆ ದಾಳಿ ಮಾಡಬೇಕು, ಅಷ್ಟೊತ್ತಲ್ಲಿ ಆತ ಕಲ್ಲು ತೂರಾಟಗಾರರಿಗೆ ಸಹಾಯ ಮಾಡಿ ಎಂದು ಮೊರೆ ಇಟ್ಟಿದ್ದ. ಸುಮಾರು 10 ಗಂಟೆ ಅಡಗಿಯೇ ಕುಳಿತಿದ್ದ ಸಬ್ಜರ್ ಭಟ್ ಈ ಅವಧಿಯಲ್ಲಿ ಒಂದೇ ಒಂದು ಬುಲೆಟ್ ಕೂಡಾ ಶೂಟ್ ಮಾಡಿರಲಿಲ್ಲ.

ಬುರ್ಹಾನ್ ವನಿಯಂತೆ ಸಬ್ಜರ್ ಭಟ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಬಲು ಜನಪ್ರಿಯನಾಗಿದ್ದ. ಪ್ರತಿದಿನ ಆತ ಇಲ್ಲಿ ಸಂದೇಶಗಳನ್ನು ಬರೆಯುತ್ತಿದ್ದ. ಇಲ್ಲದಿದ್ದಲ್ಲಿ ತನ್ನ ಸೆಲ್ಫೀಗಳನ್ನು ಕ್ಲಿಕ್ಕಿಸಿ ಹಾಕುತ್ತಿದ್ದ. ಮಿಟಲಿರಿ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಗನ್ ಹಿಡಿದುಕೊಂಡು ನಾನು ಕಾಶ್ಮೀರಕ್ಕೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎನ್ನುವಂತೆ ಪೋಸು ನೀಡುತ್ತಿದ್ದ.
ಆದರೆ ನಿಜಾರ್ಥದಲ್ಲಿ ಆತ ಎಷ್ಟು ಪುಕ್ಕಲನಾಗಿದ್ದನೆಂದರೆ ಕೊನೆಯ ಘಳಿಗೆಯ ಕಾರ್ಯಾಚರಣೆ ವೇಳೆ ಹೊರ ಬರುವಂತೆ ಸೇನೆಯ ಅಧಿಕಾರಿ ಕೂಗಿಕೊಳ್ಳುತ್ತಿದ್ದರೆ ಆತ ಹೊರ ಬರಲೇ ಇಲ್ಲ. ಬದಲಿಗೆ ತನ್ನ ಗೆಳೆಯರಿಗೆ ಕರೆ ಮಾಡಿ, ಕಲ್ಲು ತೂರಾಟಗಾರರಿಗೆ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಮೊರೆ ಇಡುತ್ತಿದ್ದ.
ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ ಇಂಡಿಯಾಗೆ ನೀಡಿದ ಮಾಹಿತಿಗಳ ಪ್ರಕಾರ, "ವನಿಯಂತೆ ಈತ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹುಲಿಯಾಗಿದ್ದ. ಆತನಿಗೆ ಹಲವು ಹಿಂಬಾಲಕರಿದ್ದರು. ಇದು ಯುವಕರನ್ನು ಸೆಳೆಯುವ ಉಗ್ರ ಸಂಘಟನೆಗಳ ತಂತ್ರ ಎನ್ನುತ್ತಾರೆ," ಗುಪ್ತಚರ ಇಲಾಖೆ ಅಧಿಕಾರಿಗಳು.
ಆತ ಇರುವ ಮನೆಯ ವಿಳಾಸವನ್ನು ಸೇನೆಯ ಜತೆ ಗುಪ್ತಚರ ಇಲಾಖೆ ಹಂಚಿಕೊಂಡಿತ್ತು. ನಂತರ ಆತ ಅಡಗಿಕೊಂಡಿದ್ದ ಮನೆಯನ್ನು ಸುತ್ತುವರಿಯಲಾಗಿತ್ತು. ಅಲ್ಲಿ ಮೊದಲು ಸೇನೆ ಆತನ ಮನೆಗೆ ಬೆಂಕಿ ಇಟ್ಟಿತು. ಆದರೆ ಅದಕ್ಕೆ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಮನೆಯಿಂದ ಓಡಿಹೋಗುವ ಯತ್ನ ಮಾಡಿದಾಗ ಸೇನೆ ಆತನನ್ನು ಗುಂಡಿಕ್ಕಿ ಕೊಂದು ಹಾಕಿತು.











Click it and Unblock the Notifications