ಇನ್ಫೋಸಿಸ್ ಸಂಸ್ಥಾಪಕರು ಶೇರು ಮಾರಾಟ ಮಾಡುತ್ತಿಲ್ಲ, ಕಂಪನಿಯಿಂದ ಸ್ಪಷ್ಟನೆ
ಬೆಂಗಳೂರು, ಜೂನ್ 9: ಸಾಫ್ಟ್ ವೇರ್ ದೈತ್ಯ ಕಂಪನಿ ಇನ್ಫೋಸಿಸ್ ಸಂಸ್ಥಾಪಕರು ಶೇರು ಮಾರಾಟ ಮಾಡಲಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ಕಂಪನಿ ತಳ್ಳಿ ಹಾಕಿದೆ. ನಮ್ಮ ಸಂಸ್ಥಾಪಕರು ಶೇರು ಮಾರಾಟ ಮಾಡುತ್ತಿಲ್ಲ ಎಂದು ಇನ್ಫೋಸಿಸ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
"ನಮ್ಮ ಸಂಸ್ಥಾಪಕರು ಶೇರು ಮಾರಾಟ ಮಾಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಬಗ್ಗೆ ಇನ್ಫೋಸಿಸ್ ಸ್ಪಷ್ಟನೆ ಕೊಡಲು ಇಚ್ಚಿಸುತ್ತದೆ. ನಮ್ಮ ಸಂಸ್ಥಾಪಕರು ಈಗಾಗಲೇ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಈ ರೀತಿಯ ಯಾವುದೇ ಬೆಳವಣಿಗೆಗಳ ಬಗ್ಗೆ ಕಂಪನಿಗೆ ಮಾಹಿತಿ ಇಲ್ಲ," ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇನ್ಫೋಸಿಸ್ ಸ್ಪಷ್ಟಪಡಿಸಿದೆ.

ಗುರುವಾರ ಇನ್ಫೋಸಿಸ್ ಸಂಸ್ಥಾಪಕರು ತಮ್ಮ ಶೇರುಗಳನ್ನು ಮಾರಾಟ ಮಾಡಲಿದ್ದಾರೆ ಎಂಬುದು ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications