ತಿರುಪತಿ-ಹೈದರಾಬಾದ್‌ಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ಲ್ಯಾಂಡಿಂಗ್‌ ಆಗಿದ್ದು ಎಷ್ಟು ಗಂಟೆಗೆ ಗೊತ್ತಾ?

IndiGo Flight: ಅಹಮದಬಾದ್‌ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 242ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಭೀಕರ ದುರಂತ ಮಾಸುವ ಮುನ್ನವೇ ಒಂದಲ್ಲ ಒಂದು ಆಘಾತಗಳು ಎದುರಾಗುತ್ತಲಿದ್ದು, ಕೊನೇ ಕ್ಷಣದಲ್ಲಿ ವಿಮಾನಗಳು ಸುರಕ್ಷಿತವಾಗಿ ಭೂಸ್ಪರ್ಷ ಮಾಡಿದ ಘಟನೆಗಳು ನಡೆದಿವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಸದ್ಯ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತಿರುಪತಿ-ಹೈದರಾಬಾದ್‌ಗೆ ಹೊರಟಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷ ಹಿನ್ನೆಲೆ ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿ ಕೊನೆಗೆ ಸುರಕ್ಷಿತವಾಗಿ ಕೇಳಗಿಳಿದಿರುವ ಘಟನೆ ನಡೆದಿದೆ.

IndiGo Flight Returns To Tirupati From Hyderabad Due to this reason

ಏರ್‌ಬಸ್ A321neo ವಿಮಾನ ಭಾನುವಾರ (ಜುಲೈ 20) ಸಂಜೆ 7:42ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಿಂದ ಹೊರಟಿತ್ತು. ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಳಿಕ 40 ನಿಮಿಷಗಳ ಕಾಲ ವಿಮಾನ ಆಕಾಶದಲ್ಲೇ ಹಾರಾಟ ನಡೆಸಿ, ರಾತ್ರಿ 8:34ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.

ಈ ಘಟನೆ ಹಿನ್ನೆಲೆ ಹೈದರಾಬಾದ್‌ಗೆ ನಿಗದಿಯಾಗುದ್ದ ಕೊನೆಯ ವಿಮಾನ ಹಾರಾಟವನ್ನು ರದ್ದುಪಡಿಸಲಾಯಿತು. ಇನ್ನು ವಿಮಾನ ರದ್ದುಪಡಿಸಿದ ಹಿನ್ನೆಲೆ ಪ್ರಯಾಣಿಕರು ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಇನ್ನೂ ಘಟನೆಯ ಕುರಿತು ವಿಮಾನಯಾನ ಸಂಸ್ಥೆಯಿಂದ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಇಂತಹ ಘಟನೆಗಳು ನಡದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+