ವಿಮಾನದಲ್ಲಿ ಅಪ್ಪನಿಗೆ ಮಗಳ ಬರ್ತ್‌ಡೇ ಸರ್ಪ್ರೈಸ್: ಗಗನಸಖಿ ಯೂನಿಫಾರ್ಮ್‌ನಲ್ಲಿದ್ದ ಮಗಳನ್ನ ನೋಡಿ ತಂದೆ ಭಾವುಕ; Video Viral

ವಿಮಾನ ಪ್ರಯಾಣ ಎಂಬುದು ಎಷ್ಟೋ ಜನರಿಗೆ ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪುವ ದೈನಂದಿನ ಪ್ರಯಾಣವಾಗಿರಬಹುದು. ಆದರೆ ಇನ್ನೂ ಕೆಲವರಿಗೆ ನನಸಾಗದ ಕನಸದು. ಇತ್ತೀಚೆಗೆ ಇಂಡಿಗೋ ವಿಮಾನವೊಂದರಲ್ಲಿ ನಡೆದ ಒಂದು ಅಪರೂಪದ ಘಟನೆ ಪ್ರಯಾಣಿಕರಷ್ಟೇ ಅಲ್ಲದೆ, ಜನರ ಮನಸ್ಸನ್ನ ಮುಟ್ಟಿದೆ.

ತಂದೆಯೊಬ್ಬರ ಹುಟ್ಟುಹಬ್ಬದ ದಿನದಂದು, ಅದೇ ವಿಮಾನದಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಗಳು ಅವರಿಗೆ ನೀಡಿದ ಸರ್ಪ್ರೈಸ್ ಎಲ್ಲರ ಕಣ್ಣಂಚಿನಲ್ಲಿ ಸಂತೋಷದ ಕಣ್ಣೀರು ತರಿಸಿದೆ.

IndiGo Air Hostess

ವಿಮಾನದಲ್ಲಿ ಅಪ್ಪನಿಗೆ ಸರ್ಪ್ರೈಸ್

ಇಂಡಿಗೋ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಪಾಂಡೆ ಎಂಬ ಯುವತಿ ತನ್ನ ತಂದೆಯ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಈ ಸರ್ಪ್ರೈಸ್ ಪ್ಲಾನ್‌ ಮಾಡಿದ್ದರು. ತಮ್ಮ ಮಗಳು ಇದೇ ವಿಮಾನದಲ್ಲಿ ಕರ್ತವ್ಯದಲ್ಲಿದ್ದಾರೆ ಎಂಬ ಸಣ್ಣ ಸುಳಿವೂ ಆಕೆಯ ತಂದೆಗೆ ಇರಲಿಲ್ಲ. ವಿಮಾನದ ಬಾಗಿಲಿನ ಮೂಲಕ ಒಳಪ್ರವೇಶಿಸಿದ ತಂದೆಯನ್ನು ಸ್ವಾಗತಿಸಲು ಶ್ವೇತಾ ನೇರವಾಗಿ ಅವರ ಮುಂದೆ ಬಂದು ನಿಂತು ಆಲಂಗಿಸಲು ಕೈ ಚಾಚಿದರು.

ಗುರುತಿಸಲಾಗದೆ ಬೆರಗಾದ ತಂದೆ

ವಿಶೇಷವೆಂದರೆ, ಶ್ವೇತಾ ಅವರ ತಂದೆ ತನ್ನ ಮಗಳನ್ನ ಗಗನಸಖಿಯ ಯೂನಿಫಾರ್ಮ್‌ನಲ್ಲಿ ನೇರವಾಗಿ ನೋಡಿದ್ದು ಅದೇ ಮೊದಲು. ಹಾಗಾಗಿ, ಏಕಾಏಕಿ ಯೂನಿಫಾರ್ಮ್ ಧರಿಸಿ ಎದುರಿಗೆ ಬಂದ ಯುವತಿಯನ್ನ ನೋಡಿ ಅವರು ಒಂದು ಕ್ಷಣ ಗೊಂದಲಕ್ಕೊಳಗಾದರು. ತನ್ನೆದುರು ನಿಂತಿರುವುದು ಸ್ವತಃ ತನ್ನ ಮಗಳೇ ಎಂಬುದನ್ನು ಅರಿತುಕೊಳ್ಳಲು ಅವರಿಗೆ ಕೆಲ ಸೆಕೆಂಡುಗಳ ಕಾಲ ಹಿಡಿಯಿತು. ತಕ್ಷಣವೇ ಮಗಳನ್ನು ಗುರುತಿಸಿದ ಆ ತಂದೆಯ ಮುಖದಲ್ಲಿ ಆಶ್ಚರ್ಯ, ಆನಂದ ಮತ್ತು ಹೆಮ್ಮೆ ಒಟ್ಟಿಗೆ ಕಂಡಿತು. ಮಗಳನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ಯಂತ ಭಾವುಕರಾದರು. ಈ ಅನಿರೀಕ್ಷಿತ ಭೇಟಿ ವಿಮಾನದಲ್ಲಿದ್ದವರ ಮುಖದಲ್ಲೂ ಮಂದಹಾಸ ತರಿಸಿತು.

ನೆಟ್ಟಿಗರ ಮೆಚ್ಚುಗೆ

ಈ ಸುಂದರ ಮತ್ತು ಅಪರೂಪದ ಕ್ಷಣವನ್ನ ಶ್ವೇತಾ ಪಾಂಡೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಅಪ್ಪನೊಂದಿಗೆ ತೆಗೆಸಿಕೊಂಡ ಸೆಲ್ಫಿ ಹಾಗೂ ಅವರಿಗೆ ಬರೆದ ಹುಟ್ಟುಹಬ್ಬದ ಶುಭಾಶಯ ಪತ್ರದ ಝಲಕ್ ಕೂಡ ಒಳಗೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನ ಪಡೆದಿದೆ.

ನೆಟ್ಟಿಗರು ಈ ವಿಡಿಯೋಗೆ ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. "ತಂದೆಯ ಕಣ್ಣುಗಳಲ್ಲಿ ಮಗಳ ಸಾಧನೆಯ ಬಗೆಗಿನ ಹೆಮ್ಮೆಯ ಕಣ್ಣೀರನ್ನು ಸ್ಪಷ್ಟವಾಗಿ ಕಾಣಬಹುದು", "ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅಪರೂಪದ, ಹೃದಯಸ್ಪರ್ಶಿ ಕ್ಷಣಗಳು ನಮ್ಮ ದಿನವನ್ನು ಸುಂದರವಾಗಿಸುತ್ತವೆ" ಎಂದು ಬಳಕೆದಾರರು ಶ್ವೇತಾ ಮತ್ತು ಅವರ ತಂದೆಯ ನಡುವಿನ ಬಾಂಧವ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+