Hyperloop Project: ಬೆಂಗಳೂರು-ಚೆನ್ನೈಗೆ ಕೇವಲ 30 ನಿಮಿಷದಲ್ಲಿ ಪ್ರಯಾಣ: ಹೇಗೆ ಸಾಧ್ಯ?

ಈಗಾಗಲೇ ದೇಶದಲ್ಲಿ ಐಷಾರಾಮಿ ವಂದೇ ಭಾರತ್ ರೈಲು ಭಾರೀ ಜನಮನ್ನಣೆ ಗಳಿಸುವ ಮೂಲಕ ಪ್ರಸಿದ್ಧಿ ಪಡೆದಿದೆ. ಇದೀಗ ಭಾರತದ ಮೊದಲ ಹೈಪರ್ಲೂಪ್ ಪ್ರಾಜೆಕ್ಟ್ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹಾಗಾದ್ರೆ ಇದರ ವಿಶೇಷತೆ ಏನು ಹಾಗೂ ಈ ಬಗ್ಗೆ ತಮ್ಮ ಟ್ವೀಟ್‌ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತದ ಮೊದಲ ಹೈಪರ್ಲೂಪ್ ಪ್ರಾಜೆಕ್ಟ್ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಐಐಟಿ ಮದ್ರಾಸ್ನ ಆವಿಷ್ಕಾರ್ ಹೈಪರ್ಲೂಪ್ ತಂಡ ಹಾಗೂ ಟುಟರ್ ಎಂಬ ಸ್ಟಾರ್ಟಪ್ ಜಂಟಿಯಾಗಿ ಐಐಟಿ ಸೆಂಟರ್ನಲ್ಲಿ ಹೈಪರ್ಲೂಪ್ ಮಾದರಿಯೊಂದನ್ನು ನಿರ್ಮಿಸಿವೆ. ಈ ಪ್ರೋಟೋಟೈಪ್ 410 ಮೀಟರ್ ಉದ್ದವಿದೆ. ಸದ್ಯ ಇದು ಏಷ್ಯಾದ ಅತೀ ಉದ್ದದ ಪ್ರೋಟೋಟೈಪ್ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ಆಗಿದೆ.

India s FIRST Hyperloop Project Bengaluru to Chennai Travel in Just 30 minutes

ಅದರಲ್ಲೂ ಬೆಂಗಳೂರು ಮತ್ತು ಚೆನ್ನೈ ನಡುವೆ ಸುಮಾರು 350 ಕಿಮೀ ಅಂತರ ಇದೆ. ಈ ಯೋಜನೆ ಪೂರ್ಣಗೊಂಡರೆ, ಬೆಂಗಳೂರಿನಿಂದ ಚೆನ್ನೈಗೆ ಹೈಪರ್ಲೂಪ್ ಟ್ರ್ಯಾಕ್ನಲ್ಲಿ ಕೇವಲ 30 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ವೇಗ ಬುಲೆಟ್ ಟ್ರೈನ್ ವೇಗವನ್ನು ಮೀರಿಸುವುದರಲ್ಲಿ ಯಾವುದೇ ಅಬುಮಾನವಿಲ್ಲ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾರ್ಚ್‌ 16ರಂದು ಐಐಟಿ ಮದ್ರಾಸ್ನಲ್ಲಿರುವ ಈ ಹೈಪರ್ಲೂಪ್ ಪ್ರಯೋಗವಾಗುತ್ತಿರುವ ಕೇಂದ್ರಕ್ಕೆ ಭೇಟಿ ನೀಡಿದರು.

ಈ ವೇಳೆ ಕಾರ್ಯದ ಪ್ರಗತಿ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಸ್ಟ್‌ವೊಂದನ್ನು ಕೂಡ ಈ ಬಗ್ಗೆ ಹಂಚಿಕೊಂಡಿದ್ದಾರೆ. ಏಷ್ಯಾದ ಅತಿದೊಡ್ಡ ಹೈಪರ್ಲೂಪ್ ಟ್ಯೂಬ್ ಶೀಘ್ರದಲ್ಲೇ ವಿಶ್ವದ ಅತಿದೊಡ್ಡದ ಟ್ರ್ಯಾಕ್ ಆಗಲಿದೆ. ಹೈಪರ್ಲೂಪ್ ಟ್ರಾನ್ಸ್ಪೋರ್ಟೇಶನ್ಗೆ ಬೇಕಾದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈಗಾಗಲೇ ಭಾರತೀಯ ರೈಲ್ವೆ, ಎಲ್ ಅಂಡ್ ಟಿ, ಆವಿಷ್ಕಾರ್ ಹೈಪರ್ಲೂಪ್ ಸಂಸ್ಥೆಗಳು ಸೇರಿ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಕಾರ್ಯ ಮುಗಿಸಿವೆ. 40-50 ಕಿಲೋ ಮೀಟರ್‌ನಷ್ಟು ಉದ್ದದ ಟೆಸ್ಟ್ ಟ್ರ್ಯಾಕ್ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದ್ದು, ಇದು ವಿಶ್ವದ ಅತೀ ಉದ್ದದ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ಆಗಲಿದೆ. ಗಂಟೆಗೆ 1,100 ಕಿಲೋ ಮೀಟರ್ ವೇಗದಲ್ಲಿ ಪ್ರಯಾಣಿಸಬಹುದಾ ಎಂದು ಈ ಟ್ರ್ಯಾಕ್ನಲ್ಲಿ ಪರೀಕ್ಷಿಸಲಾಗುತ್ತದೆ.

ಗಾಳಿಯ ಒತ್ತಡವಿಲ್ಲದ ಬೃಹತ್ ಟ್ಯೂಬ್ನೊಳಗೆ ಕ್ಯಾಪ್ಸೂಲ್ ಆಕಾರದ ಪೋಡ್ ಅನ್ನು ಅಯಸ್ಕಾಂತೀಯ ಶಕ್ತಿ ಮೂಲಕ ಚಲಿಸುವಂತೆ ಮಾಡಲಾಗುತ್ತದೆ. ಟ್ಯೂಬ್ನೊಳಗಡೆ ಈ ಪೋಡ್ ಯಾವುದಕ್ಕೂ ಘರ್ಷಿಸುವುದಿಲ್ಲ. ಟ್ರ್ಯಾಕ್ ಮತ್ತು ಗಾಳಿಯ ಘರ್ಷಣೆ ಇಲ್ಲದ್ದರಿಂದ ಪೋಡ್ ಅತೀ ವೇಗವಾಗಿ ಸಾಗಬಲ್ಲುದು. ಗಂಟೆಗೆ 1,000 ಕಿಲೋ ಮೀಟರ್‌ನಷ್ಟು ವೇಗದಲ್ಲಿ ಸಂಚಾರ ಮಾಡಬಹುದು ಎನ್ನಲಾಗುತ್ತಿದೆ.

ಸ್ವಿಟ್ಜರ್ಲ್ಯಾಂಡ್, ನೆದರ್ಲ್ಯಾಂಡ್ಸ್ ಮೊದಲಾದ ಕೆಲ ದೇಶಗಳಲ್ಲಿ ಹೈಪರ್ಲೂಪ್ ಟೆಸ್ಟಿಂಗ್ ಟ್ರ್ಯಾಕ್ ನಿರ್ಮಿಸಿ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲಿಯೂ ಸಹ ಇನ್ನೂ ಪೂರ್ಣವಾಗಿ ಟ್ರ್ಯಾಕ್ ನಿರ್ಮಾಣ ಆಗಿಲ್ಲ. ಐಐಟಿ ಮದ್ರಾಸ್ನಲ್ಲಿ ಕೆಲವು ತಿಂಗಳುಗಳಿಂದ ಈ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಪೂರ್ಣ ಬೆಂಬಲ ನೀಡಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+