IRCTCಯಿಂದ ಹೊಸ ಸೇವೆ ಆರಂಭ: ಗಾಢ ನಿದ್ರೆಯಲ್ಲಿದ್ದಾಗ ತಮ್ಮ ನಿಲ್ದಾಣದ ಬಗ್ಗೆ ತಿಳಿದುಕೊಳ್ಳುವುದು ಹೇಗೆ?, ಇಲ್ಲಿದೆ ವಿವರ

ನೀವು ರೈಲಿನಲ್ಲಿ ಪ್ರಯಾಣಿಸುವಾಗ ತಾವು ನಿಲ್ದಾಣದಲ್ಲಿ ಇಳಿಯುತ್ತೇವೆಯೋ ಇಲ್ಲವೋ ಎನ್ನುವ ಭಯವಿದೆಯೇ? ಹಾಗಾದರೆ ನಿಮ್ಮ ಅನುಕೂಲಕ್ಕಾಗಿಯೇ ರೈಲ್ವೆ ಇಲಾಖೆ ಆರಂಭಿಸಿರುವ ಹೊಸ ಸೇವೆಯ ಬಗ್ಗೆ ತಿಳಿಯಿರಿ.

ನವದೆಹಲಿ, ಫೆಬ್ರವರಿ, 18: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಇದೀಗ ಮತ್ತೊಂದು ಹೊಸ ನಿಯವನ್ನು ತಂದಿದ್ದು, ಇದು ಪ್ರಯಾಣಿಕರು ರಾತ್ರಿ ಸಮಯದಲ್ಲಿ ರೈಲಿನಲ್ಲಿ ಅರಮವಾಗಿ ವಿಶ್ರಾಂತಿ ಪಡೆಯಲು ಸೂಕ್ತವಾದ ನಿರ್ಧಾರವಾಗಿದೆ. ನಿದ್ರೆಯ ಸಮಯದಲ್ಲಿ ನೀವು ಇಳಿಯಬೇಕಾದ ನಿಲ್ದಾಣವನ್ನು ಅತೀ ಬೇಗನೆ ತಿಳಿದುಕೊಳ್ಳುವಂತಹ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.

ನೀವು ರೈಲಿನಲ್ಲಿ ರಾತ್ರಿ ಸಮಯದಲ್ಲಿ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ರಾತ್ರಿ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಹೆಚ್ಚಾಗಿ ಗಾಢ ನಿದ್ರೆ ಮಾಡುತ್ತಾರೆ. ನಿದ್ರೆಯಿಂದಾಗಿ, ತಮ್ಮ ಗಮ್ಯಸ್ಥಾನದ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತೇವೋ ಇಲ್ಲವೋ ಎನ್ನುವ ಭಯದಲ್ಲಿ ಇರುತ್ತಾರೆ. ಆದ್ದರಿಂದ ಪ್ರಯಾಣಿಕರಿಗೆ ಭಯವನ್ನು ಹೋಗಲಾಡಿಸಲು ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ಆರಂಭಿಸಿದೆ. ಈ ಹೊಸ ಸೌಲಭ್ಯದಿಂದ ನಿಮ್ಮ ನಿಲ್ದಾಣವನ್ನು ನೀವು ಸುಲಭವಾಗಿ ತಲುಪಬಹುದಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಈ ನಿರ್ಧಾರವನ್ನು ಕೈಗೊಂಡಿದೆ.ಇದಕ್ಕೂ ಮುನ್ನ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ, ಎಸ್ಕಲೇಟರ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಆರಂಭಿಸಿದೆ.

 ನಿಲ್ದಾಣದ ಬಗ್ಗೆ ಮಾಹಿತಿ ತಿಳಿಯುವುದು ಹೇಗೆ?

ನಿಲ್ದಾಣದ ಬಗ್ಗೆ ಮಾಹಿತಿ ತಿಳಿಯುವುದು ಹೇಗೆ?

ಇದೀಗ ಹೊಸ ರೈಲ್ವೆ ಸೇವೆ ಆರಂಭವಾದ ನಂತರ ಪ್ರಯಾಣಿಕರು ರಾತ್ರಿ ವೇಳೆ ರೈಲಿನಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುತ್ತಿದೆ. ನಿದ್ರೆಯ ಸಮಯದಲ್ಲಿ ನೀವು ಇಳಿಯಬೇಕಾದ ನಿಲ್ದಾಣವನ್ನು ಕಳೆದುಕೊಳ್ಳುವ ಚಿಂತೆ ಇರುವುದಿಲ್ಲ. ನಿಲ್ದಾಣವನ್ನು ತಲುಪುವ 20 ನಿಮಿಷಗಳ ಮೊದಲು ನಿಮ್ಮನ್ನು ಎಚ್ಚರಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 ಐಆರ್‌ಸಿಟಿಸಿಯಿಂದ ನೂತನ ಸೇವೆ ಆರಂಭ

ಐಆರ್‌ಸಿಟಿಸಿಯಿಂದ ನೂತನ ಸೇವೆ ಆರಂಭ

ರೈಲ್ವೆ ಇಲಾಖೆ ಆರಂಭಿಸಿರುವ ಈ ವಿಶೇಷ ಸೇವೆಯ ಹೆಸರು "ಗಮ್ಯಸ್ಥಾನದ ಎಚ್ಚರಿಕೆ ಎಚ್ಚರಗೊಳ್ಳುವ ಎಚ್ಚರಿಕೆ"ಯಾಗಿದೆ. ವಾಸ್ತವವಾಗಿ, ರೈಲಿನಲ್ಲಿ ಮಲಗುವವರು ತಾವು ಇಳಿದುಕೊಳ್ಳಬೇಕಾದ ಸ್ಥಳಗಳನ್ನು ತಪ್ಪಿಸಿಕೊಂಡಿರುವ ಬಗ್ಗೆಯೂ ರೈಲ್ವೆ ಇಲಾಖೆಗೆ ಹಲವು ಬಾರಿ ಮಾಹಿತಿ ಬಂದಿದೆ. ಇದೀಗ ಈ ಸಮಸ್ಯೆಗೆ ಮುಕ್ತಿ ನೀಡಲು ರೈಲ್ವೆ ಹೊಸ ಸೌಲಭ್ಯವನ್ನು ಆರಂಭಿಸಿದೆ. ರೈಲ್ವೆ 139 ಸಂಖ್ಯೆಯ ವಿಚಾರಣೆ ಸೇವೆಯಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

 ಮೊಬೈಲ್‌ಗೆ ಎಚ್ಚರಿಕೆ ಸಂದೇಶ ರವಾನೆ

ಮೊಬೈಲ್‌ಗೆ ಎಚ್ಚರಿಕೆ ಸಂದೇಶ ರವಾನೆ

ಪ್ರಯಾಣಿಕರು 139 ಸಂಖ್ಯೆಯ ವಿಚಾರಣಾ ವ್ಯವಸ್ಥೆಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ರಾತ್ರಿ 11ರಿಂದ ಬೆಳಗ್ಗೆ 7ರವರೆಗೆ ಲಭ್ಯವಿರುವ ಈ ಸೌಲಭ್ಯವನ್ನು ಯಾರು ಬೇಕಾದರೂ ಪಡೆಯಬಹುದು. ಇದರಿಂದ ನಿಲ್ದಾಣಕ್ಕೆ ಆಗಮಿಸುವ 20 ನಿಮಿಷಗಳ ಮೊದಲು ನಿಮ್ಮ ಫೋನ್‌ಗೆ ಸಂದೇಶವನ್ನು ಕಳುಹಿಸಲಾಗುತ್ತದೆ.

 ಹೊಸ ಸೇವೆ ಪಡೆಯುವ ವಿವರ ಇಲ್ಲಿದೆ

ಹೊಸ ಸೇವೆ ಪಡೆಯುವ ವಿವರ ಇಲ್ಲಿದೆ

"ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್" ಅನ್ನು ಪಡೆಯಲು ಐಆರ್‌ಸಿಟಿಸಿಯ ಸಹಾಯವಾಣಿ 139ಕ್ಕೆ ಕರೆ ಮಾಡಬೇಕು. ಭಾಷೆಯನ್ನು ಆಯ್ಕೆ ಮಾಡಿದ ನಂತರ, ಗಮ್ಯಸ್ಥಾನದ ಎಚ್ಚರಿಕೆಗಾಗಿ ನೀವು ಮೊದಲು ಸಂಖ್ಯೆ 7 ಮತ್ತು ನಂತರ ಸಂಖ್ಯೆ 2 ಅನ್ನು ಒತ್ತಬೇಕು. ನಂತರ ನಿಮ್ಮ 10 ಅಂಕಿಯ ಫೋನ್‌ ನಂಬರ್‌ ಅನ್ನು ನಮೂದಿಸಿ. ಅದನ್ನು ಖಚಿತಪಡಿಸಲು 1 ಅನ್ನು ಡಯಲ್ ಮಾಡಿ. ಹೀಗೆ ಮಾಡುವುದರಿಂದ ನಿಲ್ದಾಣದ ಆಗಮನದ 20 ನಿಮಿಷಗಳ ಮೊದಲು ನೀವು ಎಚ್ಚರಗೊಳ್ಳುವ ಸಂದೇಶವನ್ನು ಪಡೆಯುತ್ತೀರಿ. ಹೀಗೆ ಐಆರ್‌ಸಿಟಿಸಿಯು ಪ್ರಯಾಣಿಕರು ತಾವು ಇಳಿದುಕೊಳ್ಳಬೇಕಾದ ಸ್ಥಳದ ಬಗ್ಗೆ ಮಾಹಿತಿ ನೀಡಲು ಈ ಹೊಸ ಸೌಲಭ್ಯವನ್ನು ಕಲ್ಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+