Train: ಪ್ರಯಾಣಿಕರೇ ಗಮನಿಸಿ..! ರೈಲ್ವೆ ಟಿಕೆಟ್ ಬುಕ್ಕಿಂಗ್‌ನಲ್ಲಿ ಹೊಸ ರೂಲ್ಸ್
ನವದೆಹಲಿ, ನವೆಂಬರ್ 02: ನಿಮ್ಮ ಸಂಚಾರಕ್ಕೆ ರೈಲ್ವೆ ಬಳಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಿ. ಭಾರತೀಯ ರೈಲ್ವೆಯು ದೀಪಾವಳಿ ಸಂದರ್ಭದಲ್ಲಿಯೇ ಹೊಸ ನಿಯಮಗಳನ್ನು ಜಾರಿ ಮಾಡಿದೆ. ಭಾರತೀಯ ರೈಲ್ವೆಯ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಹೊಸ ರೂಲ್ಸ್ ಜಾರಿಗೆ ಬಂದಿದ್ದು, ರೈಲ್ವೆ ಟಿಕೆಟ್ ಬುಕ್ಕಿಂನಲ್ಲಿಗ್ ಕೆಲವು ಬದಲಾವಣೆಗಳು ಆಗಲಿದೆ.
ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆಯಲ್ಲಿ ಆದ ಹೊಸ ನಿಯಮ ನವೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಈ ಹಿಂದೆ 120 ದಿನ ಮೊದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಿತ್ತು. ಆದರೆ ಹೊಸ ನಿಯಮದಂತೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಧಿ 60 ದಿನಕ್ಕೆ ಇಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೇವಲ 60 ದಿನ ಮೊದಲು ಟಿಕೆಟ್ ಬುಕ್ ಮಾಡಲು ಸಾಧ್ಯವಾಗಲಿದೆ.

ಟಿಕೆಟ್ ಕ್ಯಾನ್ಸಲೇಷನ್ ಪ್ರಮಾಣವನ್ನು ತಗ್ಗಿಸಲು ಹಾಗೂ ಟಿಕೆಟ್ ಬುಕ್ಕಿಂಗ್‌ನಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಹೊಸ ರೂಲ್ಸ್ ನವೆಂಬರ್ 1ರಿಂದ ಬುಕ್ ಮಾಡುವ ಟಿಕೆಟ್‌ಗೆ ಅನ್ವಯವಾಗಲಿದೆ. ಈ ನಿಯಮಗಳಲ್ಲಿ ಕೆಲವೊಂದು ರೈಲುಗಳಿಗೆ ವಿನಾಯತಿ ಕೊಡಲಾಗಿದೆ. ತಾಜ್ ಎಕ್ಸ್ಪ್ರೆಸ್ ಮತ್ತು ವಿದೇಶಿ ಪ್ರವಾಸಿಗರ ರೈಲು ಟಿಕೆಟ್‌ಗಳು ಈ ನಿಯಮದಿಂದ ಹೊರಗಿರಲಿವೆ.
ರೈಲ್ವೆ ಇಲಾಖೆ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿದ್ದು ಎಐನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನೂ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಎಐ ಟೆಕ್ನಾಲಜಿ ಬಳಸಿ ರೈಲುಗಳಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ. ಇದರಿಂದಾಗಿ ಎರಡು ನಿಲ್ದಾಣಗಳ ನಡುವೆ ಖಾಲಿ ಇರುವ ಸೀಟುಗಳನ್ನು ಗುರುತಿಸಿ ಅದನ್ನು ವೇಯ್ಟಿಂಗ್ ಲೀಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಮುಂಗಡ ಟಿಕೆಟ್ ಕಾಯ್ದಿರಿಸುವರು ಈ ವಿಚಾರವನ್ನು ನೆನಪಿನಲ್ಲಿಡಿ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಏಕಮುಖ ವಿಶೇಷ ರೈಲು ಸಂಚಾರ
ದೀಪಾವಳಿ ಹಬ್ಬದ ನಂತರದ ಅವಧಿ ಮತ್ತು ವಾರಾಂತ್ಯದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ನವೆಂಬರ್ 3 ರಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಏಕಮುಖ ವಿಶೇಷ ರೈಲು ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.
ರೈಲು ಸಂಖ್ಯೆ 07357 ಎಸ್ಎಸ್ಎಸ್ ಹುಬ್ಬಳ್ಳಿ-ಎಸ್ಎಂವಿಟಿ ಬೆಂಗಳೂರು ಏಕಮುಖ ವಿಶೇಷ ರೈಲು ನವೆಂಬರ್ 3, ರಂದು ಮಧ್ಯಾಹ್ನ 12:00 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುವ ರೈಲು ಹಾವೇರಿ (1:10/1:12pm), ಹರಿಹರ (1:50/1:52pm), ದಾವಣಗೆರೆ (2:10/2:12pm), ಅರಸೀಕೆರೆ (4:35/4:45pm), ತುಮಕೂರು (6:10/6:12pm), ತುಮಕೂರು (6:10/6:12pm) ನಿಲ್ದಾಣಗಳ ಮೂಲಕ ಅದೇ ದಿನ ರಾತ್ರಿ 8:15 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ವಿಶೇಷ ರೈಲು 11 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.












Click it and Unblock the Notifications