ಭಾರತೀಯ ನೌಕಾ ಸೇನೆಗೆ 'ಸ್ಕಾರ್ಪಿಯನ್' ಶಕ್ತಿ
ಮುಂಬೈ, ಏ. 7: ಭಾರತೀಯ ಸೇನೆ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ (ಸಬ್‌ಮೆರಿನ್) ನೌಕೆ ಸ್ಕಾರ್ಪಿಯನ್ ದೇಶದ ನೌಕಾ ಶಕ್ತಿಯನ್ನು ಬಲಪಡಿಸಿದೆ.
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮಜಗಾಂವ್ ಹಡಗುಕಟ್ಟೆಯಲ್ಲಿ ಭಾರತೀಯ ನೌಕಾಪಡೆಗೆ ಹೊಸ ಜಲಾಂತರ್ಗಾಮಿಯನ್ನು ಹಸ್ತಾಂತರ ಮಾಡಿದರು. ಫ್ರಾನ್ಸ್ ನ ಸಹಕಾರದಲ್ಲಿ ನಿರ್ಮಿತವಾದ ಈ ನೌಕೆಯು ಭಾರತೀಯ ನೌಕಪಡೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿದೆ.[ನೌಕಾ ಸೇನೆ ಸೇರಿದ ಯುವತಿಯರು ಹೇಳಿದ್ದೇನು?]

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ '75 ಜಲಾಂತರ್ಗಾಮಿ ಕಾರ್ಯಕ್ರಮ'ದ ಅಂಗವಾಗಿ ಮುಂದಿನ ಕೆಲವು ವರ್ಷಗಳಲ್ಲಿ ಇನ್ನೂ 6 ನೌಕೆಗಳು ನೌಕಾ ಸೇನೆ ಸೇರ್ಪಡೆಗೊಳ್ಳಲಿವೆ ಎಂದು ಪರಿಕ್ಕರ್ ತಿಳಿಸಿದರು.
ಹೊಸ ಜಲಾಂತರ್ಗಾಮಿ ನೌಕೆ 2016ರ ಸೆಪ್ಟಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸಲಿದೆ. ಭಾರತೀಯ ನೌಕಾಪಡೆಯಲ್ಲಿ ಸದ್ಯ 14 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆ, 10 ರಷ್ಯನ್ ಕಿಲೋ ಕ್ಲಾಸ್ ಮತ್ತು 4 ಜರ್ಮನ್ ಎಚ್‌ಡಿಡಬ್ಲ್ಯು ಕ್ಲಾಸ್ ಹಡಗುಗಳಿದ್ದವು ಅದಕ್ಕೆ ಸ್ಕಾರ್ಪಿಯನ್ ಹೊಸ ಸೇರ್ಪಡೆಯಾಗಿದೆ.[ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ]
ಜಲಾಂತರ್ಗಾಮಿ ನೌಕೆಯ ವಿಶೇಷಗಳೇನು?
* ನೀರಿನ ಮೇಲೆ ಮತ್ತು ಒಳಗೆ ಹೇಗೆ ಬೇಕಾದರೂ ಸಂಚರಿಸಬಲ್ಲದು
* ಸರ್ವೇ ಮಾಡಲು, ಯುದ್ಧ ಉಪಕರಣಗಳನ್ನು ಹೊತ್ತೊಯ್ಯಲು ಬಳಸಿಕೊಳ್ಳಬಹುದು.
* ಎಂಥ ವಾತಾವರಣದಲ್ಲಾದರೂ ಈ ನೌಕೆ ಸುಲಭವಾಗಿ ಸಂಚರಿಸಬಲ್ಲದು.
* ನೀರಿನ ತಳಭಾಗದ ಸ್ಷಷ್ಟ ಚಿತ್ರಣವನ್ನು ಕ್ಷಣಮಾತ್ರದಲ್ಲಿ ರವಾನಿಸುವ ಸಾಮರ್ಥ್ಯ ಹೊಂದಿದೆ.
* ಅತ್ಯಾಧುನಿಕ ಉಕ್ಕಿನಿಂದ ತಯಾರು ಮಾಡಲಾಗಿದ್ದು, ಎಂಥ ಆಘಾತವನ್ನಾದರೂ ಸುಲಭವಾಗಿ ತಡೆದುಕೊಳ್ಳಬಲ್ಲದು.












Click it and Unblock the Notifications