Virat Kohli: 'ಹಾರ್ಟ್ ಬ್ರೇಕಿಂಗ್' ಸುದ್ದಿ! ವಿರಾಟ್ ಕೊಹ್ಲಿ ಶ್ಘಾಘಿಸಿದ ಫ್ಯಾನ್ಸ್: ಕಿಂಗ್ ಕೊಹ್ಲಿ ಫುಲ್ ಟ್ರೆಂಡಿಂಗ್..
ಬೆಂಗಳೂರು, ಮೇ 12: ಭಾರತೀಯ ಕ್ರಿಕೆಟ್ ತಂಡದ ಬಲಿಷ್ಠ ಆಟಗಾರರಲ್ಲಿ ಒಬ್ಬರಾಗಿರುವ, ಚಾರ್ಮ್, ಬ್ಯಾಟಿಂಗ್, ಅಬ್ಬರದ ರನ್‌ಗಳಿಂದ ಮಾತ್ರವಲ್ಲದೇ ಫಿಟ್ನೆಸ್ ನಿಂದಲೂ ಎಲ್ಲರ ಮನಗೆದ್ದಿರುವ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಟೆಸ್ಟ್ ಪಂದ್ಯದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರ ಈ ನಿರ್ಧಾರವು (ಘೋಷಣೆ) ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ. ವಿರಾಟ್ ಕೊಹ್ಲಿ #ViratKohli ಹ್ಯಾಷ್‌ಟ್ಯಾಗ್ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರ ಆಘಾತ ತಂದಿದೆ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು 20-20 ಪಂದ್ಯವಳಿಗಳಿಂದ ನಿವೃತ್ತಿ ಘೋಷಿಸಿದ್ದರು. ಇದೀಗ ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿಯುವುದಾಗಿ ಬಿಸಿಸಿಐಗೆ ಶನಿವಾರವೇ ತಿಳಿಸಿದ್ದರು. ಕಳೆದ ಎರಡು ದಿನಗಳಿಂದಲೂ ಇದೇ ಸುದ್ದಿ ಹರಿದಾಡುತ್ತಿತ್ತು. ಕಿಂಗ್ ಕೊಹ್ಲಿ ಕ್ರಿಕೆಟ್ ನಿಂದ ದೂರ ಸರಿಯುವ ನಿರ್ಧರಿಸಿದ್ದಾರೆ ಎಂಬ ವಿಚಾರವೇ ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ನೋಡ ನೋಡುತ್ತಿದ್ದಂತೆ ಸೋಮವಾರ ಅಧಿಕೃತ ಘೋಷಣೆ ಆಗಿಯೇ ಬಿಟ್ಟಿದೆ. ತಮ್ಮ ನಿರ್ಧಾರದ ಮೂಲಕ ಸಾಂಪ್ರದಾಯಿಕ ಕ್ರಿಕೆಟ್‌ನಿಂದ ಉತ್ತಮ ಟೀಂ ಇಂಡಿಯಾ ಬ್ಯಾಟರ್ ಹೊರನಡೆದಂತಾಗಿದೆ.

ಕಿಂಗ್ ಕೊಹ್ಲಿ ಸಮರ್ಪಣೆಗೆ ಶ್ಘಾಘನೆ
ಟೆಸ್‌ನಿಂದ ಹೊರ ನಡೆದ ವಿರಾಟ್ ಕೊಯ್ಲಿ ಆಟದ ಬಗ್ಗೆ, ಅವರ ಸಮರ್ಪಣಾ ಮನೋಭಾವ, ಕೌಶಲ ಬಗ್ಗೆ ಅಭಿಮಾನಿಗಳು, ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ನೀವು ತೋರಿಸಿದ ಅಪ್ರತಿಮ ಸಾಹಸ, ಪ್ರತಿ ಘರ್ಜನೆ, ಆಟದ ಪ್ರತಿ ಹಂತದಲ್ಲೂ ನಿಮ್ಮ ಆಲೋಚನೆ, ಪ್ರತಿ ಪಂದ್ಯವನ್ನು ನೀವು ಆಡುವ ರೀತ ಮರೆಯಲಾಗದ ಕ್ಷಣವೆಂದು ಹಾರೈಸಿದ್ದಾರೆ. ಟೆಸ್ಟ್ ಪಂದ್ಯ ಪ್ರತಿ ಕ್ಷಣಗಳನ್ನು ನೀವು ಜೀವಂತವಾಗಿಸಿದ್ದೀರಿ ಎಂದು ಹೇಳಿದ್ದಾರೆ.
ಭಾರತದಲ್ಲಿ ಇನ್ಮುಂದೆ 'ಕ್ರಿಕೆಟ್ ಮೊದಲಿನಂತೆ ಇರುವುದಿಲ್ಲ. ಇದು 'ನಿಜಕ್ಕೂ ಹಾರ್ಟ್ ಬ್ರೇಕಿಂಗ್' ಸುದ್ದಿಯಾಗಿದೆ ಎಂದು ವಿರಾಟ್ ಕೊಹ್ಲಿ ಅವರ ಟೆಸ್ಟ್ ಪಂದ್ಯ ನಿವೃತ್ತಿ ನಿರ್ಧಾರವನ್ನು ಒಲ್ಲದ ಮನಸ್ಸಿನಿಂದ ಅಭಿಮಾನಿಗಳು ಸ್ವೀಕರಿಸುತ್ತಿದ್ದಾರೆ. ಕ್ರಿಕೆಟ್ ಪಂದ್ಯಗಳಲ್ಲಿ ಅವರ ತೋರುವ ಜಾಣ್ಮೆ, ನಾಯಕತ್ವ ಎಲ್ಲವನ್ನು ಈ ವೇಳೆ ಫ್ಯಾನ್ಸ್ ಶ್ಘಾಘಿಸಿದ್ದಾರೆ.
The Man who Changed Test Cricket. ❤️
— Shani Yadav 🆎❤️ (@JrYadav1409) May 12, 2025
Everything will not be the same without you King 💔
Thank You For Everything 🙏❤️#ViratKohli #King #TestCricket #BCCI pic.twitter.com/QFBamlrs2K
ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ
ಕಿಂಗ್ ಕೊಹ್ಲಿ ಫೋಟೋ ಸಮೇತ ಮತ್ತೊಬ್ಬ ಅಭಿಮಾನಿಯು ''ಕ್ರಿಕೆಟ್ ನಿನಗೆ ಋಣಿಯಾಗಿದೆ ಕೊಹ್ಲಿ' ಕ್ರಿಕೆಟ್ ಅನ್ನು ಒಂದು ಧರ್ಮವನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ವಿರಾಟ್. ಆದರೆ ನೀವು ಟೆಸ್ಟ್ ಕ್ರಿಕೆಟ್‌ನಿಂದ ತುಂಬಾ ಬೇಗನೆ ನಿವೃತ್ತಿ ಹೊಂದಿದ್ದೀರಿ ಎಂದು ನಾನು ಹೇಳುತ್ತೇನೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಈ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಬೇಡವಾದ ಆಹಾರ ಗಂಟಲಿನಿಂದ ಒಳಕ್ಕೆ ಹೇಗೆ ಇಳಿಯುವುದಿಲ್ಲ. ಇಂದು ಕೊಹ್ಲಿ ಟೆಸ್ಟ್ ಪಂದ್ಯಾವಳಿ ವಿದಾಯ ಸ್ವೀಕರಿಸಲು ಆಗುತ್ತಿಲ್ಲ. ಟೆಸ್ಟ್ ಕ್ರಿಕೆಟ್ ಪಂದ್ಯ ನಿಮ್ಮನ್ನು ಸದಾ ಮಿಸ್ ಮಾಡಿಕೊಳ್ಳುತ್ತದೆ. ಮಿಸ್ ಯೂ ವಿರಾಟ್ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ಅವರ ಆಟ, ಅವರು ರನ್ ಗಳಿಸುವ ಬಗೆ, ಕ್ರಿಕೆಟ್ ವೇಳೆ ಕೊಹ್ಲಿಯ ವಿರಾಟ್ ರೂಪ ದರ್ಶನ, ನಾಯಕತ್ವ ನೋಡಿದ ಅವರ ಫ್ಯಾನ್ಸ್ ಅವರನ್ನು ಟೆಸ್ಟ್‌ನಿಂದ ಬಿಟ್ಟು ಕೊಡಲು ತಯಾರಿಲ್ಲ.
ಹೀಗಾಗಿಯೇ ಫ್ಯಾನ್ಸ್ ಇವತ್ತಿನ ಬೆಳವಣಿಗೆಯಿಂದ ಶಾಕ್ ಆಗಿದ್ದಾರೆ. ಲವ್ ಯು ವಿರಾಟ್ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್, ಟ್ವಿಟ್ಟರ್ (ಎಕ್ಸ್)ಗಳಲ್ಲಿ ಕೊಹ್ಲಿ ಫೋಟೋಗಳು ರಾರಾಜಿಸುತ್ತಿವೆ.












Click it and Unblock the Notifications