India Weather: ಮುಂದಿನ ಒಂದು ವಾರ ದೇಶದ ಈ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ
India Weather: ದೇಶದ ಹಲವು ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರ, ಹರಿಯಾಣ ಕರ್ನಾಟಕ ಸೇರಿದಂತೆ ಹಲವೆಡೆ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಮತ್ತೊಂದೆಡೆ ಮುಂದಿನ ಒಂದು ವಾರ ಹಲವು ಭಾಗಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಮಾಹಿತಿ ಇಲ್ಲಿದೆ ತಿಳಿಯಿರಿ.
ಮುಂದಿನ 7 ದಿನಗಳ ಕಾಳ ಅಂದರೆ ಒಂದು ವಾರ ಈಶಾನ್ಯ ಭಾರತ, ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಪೂರ್ವ ಭಾರತದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ದಕ್ಷಿಣ ಭಾರತದಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಇರಲಿದೆ ಎಂದು ಅಂತಲೂ ತಿಳಿಸಿದೆ.

ಇನ್ನು ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆಯು ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಬಿಹಾರ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಿಹೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ವಾಯುವ್ಯ ಭಾರತದ ಹವಾಮಾನ: ಉತ್ತರಾಖಂಡದಲ್ಲಿ ಆಗಸ್ಟ್ 10ರಿಂದ ಆಗಸ್ಟ್ 14ರವರೆಗೆ ಪ್ರತ್ಯೇಕವಾದ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ. ಆಗಸ್ಟ್ 10 ರಂದು ಹಿಮಾಚಲ ಪ್ರದೇಶ, ಆಗಸ್ಟ್ 9 ರಿಂದ ಆಗಸ್ಟ್ 14ರ ವರೆಗೆ ಪೂರ್ವ ರಾಜಸ್ಥಾನ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಅಲ್ಲಲ್ಲಿ ಪ್ರತ್ಯೇಕವಾದ ಭಾರೀ ಮಳೆ ಬೀಳುವ ಮುನ್ಸೂಚನೆ ಇದೆ.
ಜುಲೈ 9ರಂದು ಚಂಡೀಗಢ ಮತ್ತು ಹರಿಯಾಣ, ಆಗಸ್ಟ್ 9ರಿಂದ ಆಗಸ್ಟ್ 12ರ ವರೆಗೆ ಉತ್ತರ ಪ್ರದೇಶ, ಆಗಸ್ಟ್ 10 ರಿಂದ 11ರವರೆಗೆ, ಲಡಾಖ್, ಜಮ್ಮು, ಗಿಲ್ಗಿಟ್, ಬಾಲ್ಟಿಸ್ತಾನ್, ಜಮ್ಮು-ಕಾಶ್ಮೀರ ಮತ್ತು ಮುಜಫರಾಬಾದ್ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. .
ಪಶ್ಚಿಮ ಮತ್ತು ಮಧ್ಯ ಭಾರತದ ಹವಾಮಾನ: ಆಗಸ್ಟ್ 9ರಂದು ಗೋವಾ, ಪಶ್ಚಿಮ ಮಧ್ಯಪ್ರದೇಶ ಮತ್ತು ಕೊಂಕಣದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ 9 ರಿಂದ ಆಗಸ್ಟ್ 10 ರವರೆಗೆ ಮಧ್ಯ ಮಹಾರಾಷ್ಟ್ರ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ದಕ್ಷಿಣ ಪ್ರದೇಶ, ಈಶಾನ್ಯ ಮತ್ತು ಪೂರ್ವ ಭಾರತದ ಹವಾಮಾನ: ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಆಗಸ್ಟ್ 10ರಿಂದ ಆಗಸ್ಟ್ 13ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಆಗಸ್ಟ್ 11 ಮತ್ತು ಆಗಸ್ಟ್ 12ರ ವರೆಗೆ ಕಾರೈಕಲ್, ತಮಿಳುನಾಡು ಮತ್ತು ಪುದುಚೇರಿ, ಆಗಸ್ಟ್ 9ರಂದು ಅರುಣಾಚಲ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ, ಆಗಸ್ಟ್ 9 ರಿಂದ ಆಗಸ್ಟ್ 10ರ ವರೆಗೆ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೇಲೆ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಹಾಗೆಯೇ ಆಗಸ್ಟ್ 9 ರಿಂದ ಆಗಸ್ಟ್ 13ರ ವರೆಗೆ ಮೇಘಾಲಯ ಮತ್ತು ಅಸ್ಸಾಂ, ಆಗಸ್ಟ್ 9 ರಿಂದ ಆಗಸ್ಟ್ 14ರ ವರೆಗೆ ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್, ಬಿಹಾರ ಮತ್ತು ಅರುಣಾಚಲ ಪ್ರದೇಶ, ಆಗಸ್ಟ್ 9 ಮತ್ತು ಆಗಸ್ಟ್ 13ರಂದು ಒಡಿಶಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications