ಅಫ್ಘಾನಿಸ್ತಾನಕ್ಕೆ 2 ಟನ್ ಔಷಧಗಳನ್ನು ತಲುಪಿಸಿದ ಭಾರತ

ನವದೆಹಲಿ, ಜನವರಿ 07: ಭಾರತವು ಮಾನವೀಯ ನೆಲೆಯಲ್ಲಿ ಅಫ್ಘಾನಿಸ್ತಾನಕ್ಕೆ 2 ಟನ್‌ ಅಷ್ಟು ಔಷಧಗಳನ್ನು ರಫ್ತು ಮಾಡಿದೆ.

ಇದೇ ಜನವರಿ 1 ರಂದು ಅಫ್ಘಾನಿಸ್ತಾನಕ್ಕೆ 5 ಲಕ್ಷ ಕೋವಿಡ್‌ ವ್ಯಾಕ್ಸಿನ್‌ ನೀಡಿ ಉದಾರತೆ ಮೆರೆದಿದ್ದ ಭಾರತ, ಇಂದು ಮತ್ತೆ 2 ಟನ್‌ ಅಗತ್ಯ ವೈದ್ಯಕೀಯ ಸಾಮಗ್ರಿಯನ್ನು ತಾಲಿಬಾನ್‌ ಆಡಳಿತದ ದೇಶಕ್ಕೆ ರವಾನಿಸುವ ಮೂಲಕ ಮಾನವೀಯತೆ ಮೆರೆದಿದೆ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಆಹಾರ ಕೊರತೆ, ನಿರುದ್ಯೋಗ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಅಲ್ಲಿನ ಜನ ಎದುರಿಸುತ್ತಿದ್ದಾರೆ.

India Sends Third Batch Of Medical Assistance To Afghanistan

ಕಾಬೂಲ್‌ನ ಇಂದಿರಾಗಾಂಧಿ ಆಸ್ಪತ್ರೆಗೆ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಾಹಿತಿ ನೀಡಿದೆ. ಆ ದೇಶದ ಜನರೊಂದಿಗೆ ವಿಶೇಷ ಸಂಬಂಧ ಮುಂದುವರಿಸಲು ಮತ್ತು ಅವರಿಗೆ ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅಫ್ಘಾನಿಸ್ತಾನ ಇದೀಗ ತಾಲಿಬಾನ್ ವಶವಾದ ಬೆನ್ನಲ್ಲೇ ಆ ದೇಶದೊಂದಿಗೆ ಭಾರತಕ್ಕಿದ್ದ ಎಲ್ಲಾ ಆಮದು, ರಫ್ತು ವ್ಯವಹಾರ ಸ್ಥಗಿತಗೊಂಡಿತ್ತು. ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದ್ದ ಸರಕು ಸಾಗಣೆಯ ಮಾರ್ಗವನ್ನು ತಾಲಿಬಾನ್ ನಿಲ್ಲಿಸಿತ್ತು.

ಭಾರತೀಯ ರಫ್ತು ಸಂಸ್ಥೆ ಒಕ್ಕೂಟ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ಅವರು ಈ ವಿಚಾರವನ್ನು ದೃಢಪಡಿಸಿದ್ದರು. "ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳು ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದವು. ಇದೀಗ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಮಧ್ಯೆ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ. ಪರಿಣಾಮವಾಗಿ ಭಾರತಕ್ಕೂ ಆಮದಾಗುವುದು ನಿಂತಿದೆ" ಎಂದು ಅಜಯ್ ಸಹಾಯ್ ತಿಳಿಸಿದ್ದರು.

ಅಫ್ಘಾನಿಸ್ತಾನದೊಂದಿಗೆ ಭಾರತ ದೀರ್ಘ ಕಾಲದಿಂದ ವ್ಯಾವಹಾರಿಕ ಸಂಬಂಧ ಹೊಂದಿದೆ. ಅಫ್ಘಾನಿಸ್ತಾನದೊಂದಿಗೆ ಅತಿ ಹೆಚ್ಚು ವ್ಯವಹಾರ ಹೊಂದಿರುವ ದೇಶಗಳಲ್ಲಿ ಭಾರತವೂ ಇದೆ.

2021ರಲ್ಲಿ ಆಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾದ ಸರಕುಗಳ ಮೌಲ್ಯ 835 ಮಿಲಿಯನ್ ಡಾಲರ್ (ಸುಮಾರು 6,200 ಕೋಟಿ ರೂಪಾಯಿ) ಇದೆ. ಇದೇ ಅವಧಿಯಲ್ಲಿ 510 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನ ನಾವು ಆಮದು ಮಾಡಿಕೊಂಡಿದ್ದೇವೆ.

ಈ ಆಮದು ರಫ್ತು ವ್ಯವಹಾರದ ಜೊತೆಗೆ ನಾವು ಅಫ್ಘಾನಿಸ್ತಾನದಲ್ಲಿ ಬಹಳಷ್ಟು ಹೂಡಿಕೆ ಮಾಡಿದ್ದೇವೆ. 400ಕ್ಕೂ ಹೆಚ್ಚು ಯೋಜನೆಗಳಲ್ಲಿ ಭಾರತ 3 ಬಿಲಿಯನ್ ಡಾಲರ್ (ಸುಮಾರು 22 ಸಾವಿರ ಕೋಟಿ ರೂಪಾಯಿ) ಹಣವನ್ನು ಹೂಡಿಕೆ ಮಾಡಿದೆ ಎಂದು ಎಫ್​ಐಇಒ ಡಿಜಿ ಡಾ. ಅಜಯ್ ಸಹಾಯ್ ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನ ಮತ್ತು ಭಾರತದ ಮಧ್ಯೆ ಸರಕು ಸಾಗಣೆಗೆ ವಿವಿಧ ಮಾರ್ಗಗಳಿವೆ. ಪಾಕಿಸ್ತಾನದ ಟ್ರಾನ್ಸಿಟ್ ರೂಟ್ ಮೂಲಕ ಸಾಗುವ ಮಾರ್ಗ ಪ್ರಮುಖವಾದುದು. ಹಾಗೆಯೇ, ಇಂಟರ್​ನ್ಯಾಷನಲ್ ನಾರ್ಥ್-ಸೌಥ್ ಟ್ರಾನ್ಸ್​ಪೋರ್ಟ್ ಕಾರಿಡಾರ್ ಮಾರ್ಗ ಹಾಗೂ ದುಬೈ ಮೂಲಕ ಹೋಗುವ ಮಾರ್ಗಗಳೂ ಇವೆ.

ಈ ಎರಡು ಮಾರ್ಗಗಳಲ್ಲಿ ಸದ್ಯಕ್ಕೆ ಭಾರತದ ಸರಕುಗಳು ಅಫ್ಘಾನಿಸ್ತಾನಕ್ಕೆ ಸಾಗಣೆ ಆಗುತ್ತಿವೆ. ಆದರೆ, ಪಾಕಿಸ್ತಾನದ ಮೂಲಕ ಹೋಗುವ ಟ್ರಾನ್ಸಿಟ್ ರೂಟ್ ಅನ್ನು ತಾಲಿಬಾನ್ ಸ್ಥಗಿತಗೊಳಿಸಿದೆ. ಅಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾಗುವ ಬಹುತೇಕ ಸರಕುಗಳು ಇದೇ ಮಾರ್ಗದಲ್ಲಿ ಸಾಗಣೆಯಾಗುತ್ತವೆ. ಹೀಗಾಗಿ, ಭಾರತದ ರಫ್ತು ಸದ್ಯದ ಮಟ್ಟಿಗೆ ಸ್ಥಗಿತಗೊಂಡಿದೆ.

Recommended Video

      ನೈಟ್ ಕರ್ಫ್ಯೂ !! ಏನಿರತ್ತೆ ? ಏನಿರಲ್ಲಾ ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+