ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಸ್ಯಾಟ್ 15 ಯಶಸ್ವಿ ಉಡಾವಣೆ, ಇಸ್ರೋ ಸಾಧನೆ

By Mahesh
|
Google Oneindia Kannada News

ಬೆಂಗಳೂರು, ನ.11: ಯುರೋಪಿಯನ್ ಉಡಾವಣಾ ವಾಹಕ ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಜಿಸ್ಯಾಟ್ 15 ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಯುರೋಪಿಯನ್ ಏರಿಯನ್ ವಿಎ-227 ವಾಹಕದೊಂದಿಗೆ ಜಿಸ್ಯಾಟ್ 15 ಉಡಾವಣೆ ಯಶಸ್ವಿಯಾಗಿದೆ ಎಂದು ಬೆಂಗಳೂರಿನ ಅಂತರಿಕ್ಷ್ ಭವನದ ಮೂಲಗಳು ಹೇಳಿವೆ.

India's communication satellite GSAT-15 launched successfully

ಸುಮಾರು 3164 ಕೆಜಿ ತೂಗುವ ಉಪಗ್ರಹದಲ್ಲಿ ಸಂವಹನ ವಾಹಕ ಕೆಯು ಬ್ಯಾಂಡ್ ನಲ್ಲಿ ನಿರ್ವಹಿಸಲಿದೆ. ಜಿಪಿಎಸ್, ಜಿಯೋ ನ್ಯಾವಿಗೇಷನ್(GAGAN) ಪೇ ಲೋಡ್ ಹೊಂದಿದ್ದು ಎಲ್ 1 ಹಾಗೂ ಎಲ್ 5 ಬ್ಯಾಂಡ್ ಗಳಲ್ಲಿ ಕಾರ್ಯ ನಿರ್ವಹಿಸಲಿದೆ.

ಜಿಸ್ಯಾಟ್ ಉಪಯೋಗ: ಭಾರತದೆಲ್ಲೆಡೆ ಟೆಲಿ ಕಮ್ಯೂನಿಕೇಷನ್ ಸೇವೆ, ಜಿಪಿಎಸ್, ತುರ್ತು ಸೇವೆ ನೀಡಲು ಬಳಕೆಯಾಗಲಿದೆ. ಹಾಸನದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ(ಎಂ ಸಿಎಫ್) ಈಗ ಉಪಗ್ರಹ ಮೇಲೆ ನಿಗಾವಹಿಸಿದ್ದು, ಸರಿಯಾದ ಕಕ್ಷೆ ತಲುಪಿರುವ ಸೂಚನೆ ನೀಡಿದೆ.

ಏರಿಯನ್ ಸ್ಪೇಸ್ ನೀಡಿರುವ ಅಧಿಕೃತ ಮಾಹಿತಿಯಂತೆ ಭಾರತ ಜಿಸ್ಯಾಟ್ 17 ಹಾಗೂ ಜಿಸ್ಯಾಟ್ 18 ಉಪಗ್ರಹಗಳನ್ನು ಉಡಾವಣೆ ಮಾಡಲಿ ಏರಿಯನ್ ಸ್ಪೇಸ್ ಬಳಕೆಯಾಗಲಿದೆ.

ಗಯಾನದ ಬಾಹ್ಯಾಕಾಶ ಕೇಂದ್ರ, ಯುರೋಪಿಯನ್ ಕೌರುರುವಿನ ಕೇಂದ್ರ ಹಾಗೂ ಫ್ರೆಂಚ್ ಗಯಾನದಿಂದ ಭಾರತದ ಉಪಗ್ರಹಗಳನ್ನು(ಎಲ್ಲವೂ 3,400ಕೆಜಿ) ಏರಿಯನ್ 5 ವಾಹಕ ಬಳಸಿ 2016 ಹಾಗೂ 2017ರಲ್ಲಿ ಉಡಾವಣೆ ಮಾಡಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)

English summary
The Indian Space Research Organisation (ISRO) said that the India's latest communications satellite GSAT-15 was launched successfully by the European Ariane 5 VA-227 launch vehicle on Wednesday early morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X