ಭಾರತ: ಮೊದಲ ಬಾರಿಗೆ ಒಂದೇ ದಿನದಲ್ಲಿ ಕಾಲು ಲಕ್ಷ ದಾಟಿದ ಕೊರೊನಾ ಸೋಂಕಿತರು

ನವದೆಹಲಿ, ಜುಲೈ 10: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ಕಾಲು ಲಕ್ಷ ದಾಟಿದೆ. ಕಳೆದ 24 ಗಂಟೆಯಲ್ಲಿ 26,506 ಹೊಸ ಪ್ರಕರಣಗಳು ಪತ್ತೆಯಾಗಿವೆ.

Recommended Video

      Asia cup postponed till june 2021 | Oneindia Kannada

      ಒಂದೇ ದಿನದಲ್ಲಿ 475 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 21,604 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ. 7,93,802 ಪಾಸಿಟಿವ್ ಪ್ರಕರಣಗಳಿವೆ.

      India Reports 26,506 New COVID-19 Cases, 475 Deaths in Last 24 Hours

      ಅದರಲ್ಲಿ 2,76,685 ಸಕ್ರಿಯ ಪ್ರಕರಣಗಳಿವೆ. 4,95,513 ಮಂದಿ ಗುಣಮುಖರಾಗಿದ್ದಾರೆ. ಗುರುವಾರ ಒಂದೇ ದಿನ 24879 ಕೊರೊನಾ ಕೇಸ್ ಪತ್ತೆಯಾಗಿದ್ದು, 487 ಮಂದಿ ಸಾವನ್ನಪ್ಪಿದ್ದರು.

      ರಾಜ್ಯವಾರು ಮಹಾರಾಷ್ಟ್ರದಲ್ಲಿ 6,875 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2,30,599ಕ್ಕೆ ತಲುಪಿದೆ.ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ಕಡಿಮೆಯಾಗುವ ಸೂಚನೆಯೇ ಸಿಗುತ್ತಿಲ್ಲ.

      ಪ್ರತಿದಿನವೂ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಲೇ ಇದೆ.

      ವರದಿಯ ಪ್ರಕಾರ ಕಳೆದ 24 ಗಂಟೆಯಲ್ಲಿ 65 ಸಾವಿರಕ್ಕೂ ಹೆಚ್ಚು ಕೊವಿಡ್ ಕೇಸ್‌ಗಳು ಯುಎಸ್‌ನಲ್ಲಿ ದಾಖಲಾಗಿದೆ. ಜಾನ್ಸ್ ಹಾಪ್‌ಕಿನ್ಸ್ ಯೂನಿವರ್ಸಿಟಿಯ ಪ್ರಕಾರ ಗುರುವಾರ ಒಂದೇ ದಿನ ಅಮೆರಿಕದಲ್ಲಿ 61,067 ಜನರಿಗೆ ಸೋಂಕು ತಗುಲಿದೆ.

      ಈ ಮೂಲಕ ಕೊರೊನಾ ಹಾಟ್‌ಸ್ಪಾಟ್‌ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32.1 ಲಕ್ಷ (3,219,999) ದಾಟಿದೆ. ಕಳೆದ 24 ಗಂಟೆಯಲ್ಲಿ 960 ಜನರು ಅಮೆರಿಕದಲ್ಲಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ, ಯುಎಸ್ ಒಟ್ಟು ಮೃತರ ಸಂಖ್ಯೆ 135,822ಕ್ಕೆ ಏರಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+