Breaking: ಭಾರತದಲ್ಲಿ ಒಂದೇ ದಿನ 12,881 ಕೊರೊನಾ ಕೇಸ್, 334 ಮಂದಿ ಸಾವು
ನವದೆಹಲಿ, ಜೂನ್ 18: ಭಾರತದದಲ್ಲಿ ಒಂದೇ ದಿನ 12,881 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 334 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 3,66,946 ಇದೆ, 1,60,384 ಪ್ರಕರಣಗಳು ಸಕ್ರಿಯವಾಗಿವೆ. 1,94,325 ಮಂದಿ ಗುಣಮುಖರಾಗಿದ್ದಾರೆ, ಇದುವರೆಗೆ ಒಟ್ಟು 12,237 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬುಧವಾರ ದೇಶದಲ್ಲಿ ಹೊಸದಾಗಿ 10,974 ಜನರಿಗೆ ಕೊರೊನಾ ವೈರಸ್ ತಗುಲಿತ್ತು. 2003 ಜನರು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದರು. ತಮಿಳುನಾಡಿನಲ್ಲಿ ಒಟ್ಟು 50,193 ಕೊರೊನಾ ಸೋಂಕಿತ ಪ್ರಕರಣಗಳಿವೆ.

26,782 ಮಂದಿ ಗುಣಮುಖರಾಗಿದ್ದಾರೆ. 576 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 1 ಲಕ್ಷ 13 ಸಾವಿರ ಕೊರೊನಾ ಸೋಂಕಿತರಿದ್ದಾರೆ. 57,851 ಮಂದಿ ಗುಣಮುಖರಾಗಿದ್ದಾರೆ. 5,537 ಮಂದಿ ಸಾವನ್ನಪ್ಪಿದ್ದಾರೆ.












Click it and Unblock the Notifications