ಅಚ್ಚರಿ ವರದಿ: ಫೆಬ್ರವರಿ ವೇಳೆಗೆ ಭಾರತದಲ್ಲಿ ದಿನಕ್ಕೆ 2.87 ಲಕ್ಷ ಕೊರೊನಾ ಕೇಸ್

ದೆಹಲಿ, ಜುಲೈ 8: ಕೊರೊನಾ ವೈರಸ್ ಹಾವಳಿ ಯಾವಾಗ ಅಂತ್ಯವಾಗುತ್ತೆ ಎಂಬುದಕ್ಕೆ ಸ್ಪಷ್ಟ ಉತ್ತರವೇ ಇಲ್ಲ. ಆಗಸ್ಟ್, ಸೆಪ್ಟೆಂಬರ್ ಈ ವರ್ಷಾಂತ್ಯ ಎಂದುಕೊಂಡೆ ಇಡೀ ವಿಶ್ವ ಸಾಗುತ್ತಿದೆ. ಆದರೆ, ಕೊವಿಡ್ ಸೋಂಕು ಮುಂದಿನ ವರ್ಷವೂ ಕಾಡಲಿದೆ ಎಂದು ಯುಎಸ್ ಮೂಲದ ಸಂಶೋಧನಾ ತಂಡವೊಂದು ಆಘಾತಕಾರಿ ವಿಷಯ ಬಿಚ್ಚಿಟ್ಟಿದೆ.

Recommended Video

      UN ಸಭೆಯಲ್ಲಿ Pakistan ವಿರುದ್ಧ ಭಾರತ ವಾಗ್ದಾಳಿ | Oneindia Kannada

      ಮುಂದಿನ ವರ್ಷದ ಫೆಬ್ರವರಿ ವೇಳೆ ಜಗತ್ತಿನಲ್ಲಿ ಸೋಂಕಿನ ಸಂಖ್ಯೆ ತೀವ್ರವಾಗಿ ಏರಿಕೆಯಾಗಿರುತ್ತೆ ಎಂದು ಹೇಳಿದೆ. ಅದರಲ್ಲೂ ಭಾರತ ದೇಶದಲ್ಲಿ ಕೊರೊನಾ ಸೋಂಕು ವಿಪರೀತವಾಗಿರುತ್ತೆ ಎಂದು ಅಭಿಪ್ರಾಯ ಪಟ್ಟಿದೆ.

      ಫೆಬ್ರವರಿ ವೇಳೆಗೆ ಭಾರತದಲ್ಲಿ ದಿನವೊಂದಕ್ಕೆ 2.87 ಲಕ್ಷ ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಲಿದೆ ಎಂದು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ- MIT) ಬಹಿರಂಗಪಡಿಸಿದೆ. ಸುಮಾರು 80 ದೇಶಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಪರೀಕ್ಷಾ ಸಾಮಾರ್ಥ್ಯ ಮತ್ತು ಜಗತ್ತಿನ ಶೇಕಡಾ 60ರಷ್ಟು ಜನಸಂಖ್ಯೆಯನ್ನು ಆಧರಿಸಿ ಅಧ್ಯಯನ ಮಾಡಲಾಗಿದ್ದು, ಹಲವು ಅಚ್ಚರಿ ವಿಷಯವನ್ನು ಪ್ರಸ್ತಾಪಿಸಿದೆ. ಮುಂದೆ ಓದಿ...

      ಮಾರ್ಚ್ ಅಂತ್ಯಕ್ಕೆ 60 ಕೋಟಿ ಸೋಂಕು

      ಮಾರ್ಚ್ ಅಂತ್ಯಕ್ಕೆ 60 ಕೋಟಿ ಸೋಂಕು

      ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಶೋಧನ ತಂಡ ಹೇಳಿರುವಂತೆ 2021ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಇಡೀ ಜಗತ್ತಿನಲ್ಲಿ 20 ರಿಂದ 60 ಕೋಟಿವರೆಗೂ ಕೊರೊನಾ ವೈರಸ್‌ ಸೋಂಕಿತರು ವರದಿಯಾಗಲಿದ್ದಾರೆ ಎಂದು ಹೇಳಿದೆ. ಪ್ರಸ್ತುತ ಜುಲೈ 8, 2020ರ ಸಮಯದಲ್ಲಿ 1.1 ಕೋಟಿ (11,949,280) ಕೇಸ್ ದಾಖಲಾಗಿದೆ.

      ಭಾರತದಲ್ಲಿ ಪ್ರತಿದಿನ 2.87 ಲಕ್ಷ?

      ಭಾರತದಲ್ಲಿ ಪ್ರತಿದಿನ 2.87 ಲಕ್ಷ?

      ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಸಂಶೋಧಕರು ಹೇಳಿರುವ ಪ್ರಕಾರ ಮುಂದಿನ ವರ್ಷದ ಫೆಬ್ರವರಿ ವೇಳೆ ಕೊರೊನಾ ವಿಚಾರದಲ್ಲಿ ಭಾರತ ಕೆಟ್ಟ ಸ್ಥಿತಿ ತಲುಪಲಿದೆ. ಪ್ರತಿದಿನ ಅಂದಾಜು 2.87 ಲಕ್ಷ ಕೊರೊನಾ ಕೇಸ್‌ಗಳು ಪತ್ತೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ. ಭಾರತದ ಬಳಿಕ ಯುಎಸ್‌ (ಪ್ರತಿದಿನ 95 ಸಾವಿರ ಕೇಸ್), ದಕ್ಷಿಣ ಆಫ್ರಿಕಾ (ಪ್ರತಿದಿನ 21 ಸಾವಿರ ಕೇಸ್), ಇರಾನ್ (ಪ್ರತಿದಿನ 17 ಸಾವಿರ ಕೇಸ್) ವರದಿಯಾಗಲಿದೆ ಎಂದು ಹೇಲಿದೆ.

      ಭಾರತದಲ್ಲಿ ಈಗ ಎಷ್ಟಿದೆ?

      ಭಾರತದಲ್ಲಿ ಈಗ ಎಷ್ಟಿದೆ?

      ಭಾರತದಲ್ಲಿ ಸದ್ಯ 7.4 ಲಕ್ಷ (743,481) ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ 20,653 ಜನರು ಮೃತಪಟ್ಟಿದ್ದಾರೆ. 457,058 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 265,770 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಭಾರತದಲ್ಲಿ ಒಂದು ಕೋಟಿ ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ.

      ಜಗತ್ತಿನಲ್ಲಿ ಕೊವಿಡ್ ಪ್ರಕರಣ ಎಷ್ಟಾಗಿದೆ?

      ಜಗತ್ತಿನಲ್ಲಿ ಕೊವಿಡ್ ಪ್ರಕರಣ ಎಷ್ಟಾಗಿದೆ?

      ಇದುವರೆಗೂ ಜಗತ್ತಿನಲ್ಲಿ ಒಟ್ಟು 1.19 ಕೋಟಿ (11,949,280) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 546,601 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 6,849,545 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಯುಎಸ್‌ನಲ್ಲಿ ಒಟ್ಟು 3,097,084 ಕೇಸ್ ವರದಿಯಾಗಿದೆ. 1,674,655 ಸೋಂಕಿತರನ್ನು ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಭಾರತ 743,481 ಸೋಂಕಿತರನ್ನು ಹೊಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+