ಇಂಡಿಯನ್ ಮುಜಾಹಿದೀನ್, ಪಿಎಫ್ಐಗಳಲ್ಲೂ ಇಂಡಿಯಾ ಇದೆ: ಮೋದಿ ವ್ಯಂಗ್ಯ
ನವದೆಹಲಿ, ಜುಲೈ 25: ವಿರೋಧ ಪಕ್ಷಗಳ ಒಕ್ಕೂಟದ ರಚನೆ ಬಗ್ಗೆ ವ್ಯಂಗ್ಯವಾಡಿರುವ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳು ದಿಕ್ಕುತೋಚದಂತಹ ಪರಿಸ್ಥಿತಿಗೆ ತಲುಪಿವೆ. ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎಂದರೆ ಇಂಡಿಯನ್ ಮುಜಾಹಿದ್ದೀನ್ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂದು ಕೂಡ ಆಗುತ್ತದೆ ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಜೊತೆಗಿರುವ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು 26 ವಿಪಕ್ಷಗಳು ಒಟ್ಟು ಸೇರಿ ಮಾಡಿಕೊಂಡಿರುವ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಬೆಂಗಳೂರಿನಲ್ಲಿ ನಾಮಕರಣ ಮಾಡಲಾಗಿದ್ದು ಇವುಗಳ ವಿರುದ್ಧ ಮೋದಿಯವರು ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ವಾಗ್ದಾಳಿ ನಡೆಸಿದರು.

ಇಂತಹ ದಿಕ್ಕುದೆಸೆಯಿಲ್ಲದಿರುವ ವಿರೋಧ ಪಕ್ಷಗಳನ್ನು ನಾನು ಎಂದಿಗೂ ನೋಡಿಲ್ಲ ಎಂದು ಬಿಜೆಪಿ ಸಭೆಯಲ್ಲಿ ಪ್ರಧಾನಿಗಳು ಹೇಳಿದ್ದಾರೆ. ಇಂಡಿಯಾ ಎಂದು ಹಸರಿಟ್ಟುಕೊಂಡು ವಿಪಕ್ಷಗಳು ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇವುಗಳಲ್ಲೆಲ್ಲ ಇಂಡಿಯಾ ಎಂಬ ಹೆಸರಿದೆ. ಭಾರತ ಎಂಬ ಹೆಸರನ್ನು ಬಳಸುವುದರಿಂದ ಏನೂ ಆಗುವುದಿಲ್ಲ. ಕೇವಲ ದೇಶದ ಹೆಸರನ್ನು ಬಳಸಿಕೊಂಡು ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದರು ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.
ಪ್ರತಿಪಕ್ಷಗಳು ಸೋಲು, ದಣಿದ, ಹತಾಶೆಯಿಂದ ಒಂದೇ ಅಂಶದ ಅಜೆಂಡಾದೊಂದಿಗೆ ಒಟ್ಟು ಸೇರಿವೆ ಅದು ಮೋದಿಯನ್ನು ವಿರೋಧಿಸುವುದು, ಅವರ ನಡತೆ ಅವರು ಪ್ರತಿಪಕ್ಷವಾಗಿ ಉಳಿಯಲು ಮನಸ್ಸು ಮಾಡಿದ್ದಾರೆ ಎಂದು ತೋರಿಸುತ್ತದೆ. 2024ರ ಲೋಕಸಬೆ ಚುನಾವಣೆಯಲ್ಲಿ ಜನಬೆಂಬಲದಿಂದ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹೊಸದಾಗಿ ರಚನೆಯಾಗಿರುವ ವಿರೋಧ ಪಕ್ಷಗಳ ಭಾರತ ಮೈತ್ರಿಕೂಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವ್ಯಂಗ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೌಂಟರ್ ನೀಡಿ ಮೋದಿ ಅವರು ನಮ್ಮ ಒಕ್ಕೂಟವನ್ನು ಯಾವುದೇ ಹೆಸರಿನಿಂದ ಕರೆಯಬಹುದು. ಆದರೆ ಅವರು ಮಣಿಪುರವನ್ನು ಶಾಂತಪಡಿಸಲು ಮುಂದಾಗುವುದಿಲ್ಲ. ಜನಾಂಗೀಯ ಹಿಂಸಾಚಾರವನ್ನು ಕಂಡ ರಾಜ್ಯದಲ್ಲಿ ಭಾರತದ ಕಲ್ಪನೆಯನ್ನು ಪುನರ್ನಿರ್ಮಿಸಲು ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications