ಭಾರತದಿಂದಲೂ ಸಂಝೌತ ಎಕ್ಸ್ ಪ್ರೆಸ್ ರೈಲು ಸೇವೆ ರದ್ದು

ನವದೆಹಲಿ, ಆಗಸ್ಟ್ 11: ಭಾರತದ ಅಂತರರಾಷ್ಟ್ರೀಯ ಗಡಿ ತನಕ ಸಾಗುತ್ತಿದ್ದ ಸಂಝೌತ ಎಕ್ಸ್ ಪ್ರೆಸ್ ರೈಲನ್ನು ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಭಾನುವಾರ ಘೋಷಣೆ ಮಾಡಿದೆ. ಪಾಕಿಸ್ತಾನ ಕಡೆಯ ರೈಲು ಸೇವೆ ಅಮಾನತು ಮಾಡಿದ ಮಾಡಿದ ಕೆಲ ದಿನಕ್ಕೇ ಭಾರತವು ಈ ಕ್ರಮ ತೆಗೆದುಕೊಂಡಿದೆ.

ಸಂಝೌತ ಎಕ್ಸ್ ಪ್ರೆಸ್ ಭಾನುವಾರಗಳಂದು ದೆಹಲಿಯಿಂದ ಅಟ್ಟಾರಿ ತನಕ ತೆರಳಿ, ವಾಪಸಾಗುತ್ತಿತ್ತು. ಇನ್ನು ಪಾಕಿಸ್ತಾನವು ಲಾಹೋರ್ ನಿಂದ ಅಟ್ಟಾರಿ ತನಕ ರೈಲು ಸೇವೆ ಒದಗಿಸಿತ್ತು. ಅಟ್ಟಾರಿ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಬದಲಾವಣೆ ಮಾಡುತ್ತಿದ್ದರು.

ಲಾಹೋರ್ ಮತ್ತು ಅಟ್ಟಾರಿ ಮಧ್ಯೆ ಸಂಚರಿಸುತ್ತಿದ್ದ ಸಂಝೌತ ಎಕ್ಸ್ ಪ್ರೆಸ್ ಸಂಖ್ಯೆ 14607/14608 ಅನ್ನು ಪಾಕಿಸ್ತಾನವು ಸ್ಥಗಿತಗೊಳಿಸಿದ ಮೇಲೆ ಆ ರೈಲಿಗೆ ಹೊಂದಿಕೊಂಡಂತೆ ದೆಹಲಿ- ಆಟ್ಟಾರಿ ಮಧ್ಯೆ ಚಲಿಸುತ್ತಿದ್ದ ರೈಲು ಸಂಖ್ಯೆ 14001/14002 ಅನ್ನು ರದ್ದು ಮಾಡಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.

Samjhauta Express Train

ಭಾನುವಾರಕ್ಕೆ ಇಬ್ಬರು ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದುಗೊಳಿಸಿದ ನಂತರ ಪಾಕಿಸ್ತಾನವು ಸಂಝೌತ ಎಕ್ಸ್ ಪ್ರೆಸ್ ಹಾಗೂ ಥಾರ್ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಅಮಾನತು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+