ನೋಟಾಕ್ಕೀಗ ಐದರ ಹರೆಯ! ಕೋಟಿ ದಾಟಿದ ಓಟಿನ ಓಟ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 10: 'ಈ ರಾಜಕಾರಣಿಗಳ ಸಹವಾಸವೇ ಸಾಕು. ನಾನಂತೂ ಓಟು ಮಾಡೋಲ್ಲ ಈ ಸಾರಿ...' ಎಂದು ಹೇಳುವಾಗೆಲ್ಲ ಒಂಥರಾ ಬೇಸರ. ಸಂವಿಧಾನ ನೀಡಿದ ಅತ್ಯಮೂಲ್ಯ ಹಕ್ಕನ್ನು ಹೀಗೆ ವ್ಯರ್ಥ ಮಾಡಬೇಕಲ್ಲ ಅನ್ನೋ ಅಳುಕು. ಈ ಅಳುಕನ್ನು ಮಾಯವಾಗಿಸುವುದಕ್ಕಾಗಿಯೇ ಬಂತು 'ನೋಟಾ' ಎಂಬ ಹೊಸ ಆಯ್ಕೆ.

NOTA (None of the Above) ಆಯ್ಕೆಯನ್ನು ಒತ್ತುವ ಮೂಲಕ ಮತದಾನ ಮಾಡಿದ ಸಮಾಧಾನದ ಜೊತೆಗೆ, ಇಷ್ಟವಿಲ್ಲದ ಅಭ್ಯರ್ಥಿಗೆ ಮತ ಚಲಾಯಿಸಿ ಆತ್ಮವಂಚನೆ ಮಾಡಿಕೊಂಡಿಲ್ಲ ಎಂಬ ಆತ್ಮತೃಪ್ತಿ! ಈ ಭಾಗ್ಯ ಕರುಣಿಸಿದ್ದು ನೋಟಾ ಆಯ್ಕೆ!

ಮತದಾನ ಹತ್ತಿರ ಬಂತು ನೋಟಾ ಬಗ್ಗೆ ತಿಳಿದುಕೊಳ್ಳಿ

ಭಾರತದಲ್ಲಿ ನೋಟಾ ಆಯ್ಕೆ ಶುರುವಾಗಿದ್ದು, 2013 ರಲ್ಲಿ. ಅಂದರೆ ಈಗ ಅದಕ್ಕೆ ಐದರ ಹರೆಯ! ಇಷ್ಟು ವರ್ಷಗಳಲ್ಲಿ ನಡೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ನೋಟಾವನ್ನೇ ನೆಚ್ಚಿಕೊಂಡವರು ಹಲವಾರು ಜನ. ಕಳೆದ ವರ್ಷ ಗುಜರಾತಿನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲೂ ನೋಟಾ ಪರಿಚಯಿಸುವ ಮೂಲಕ, ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆ ಬಳಸಿದ ಮೊದಲ ರಾಜ್ಯ ಎಂಬ ಖ್ಯಾತಿಗೆ ಗುಜರಾತ್ ಪಾತ್ರವಾಯಿತು! ಐದು ವರ್ಷಗಳ ಅವಧಿಯಲ್ಲಿ ನೋಟಾ ಪಯಣದ ಕೆಲವು ಮೆಲಕುಗಳು ಇಲ್ಲಿವೆ...

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಏನಿದು ನೋಟಾ ಆಯ್ಕೆ?

ಏನಿದು ನೋಟಾ ಆಯ್ಕೆ?

ಮತದಾರನಿಗೆ ಯಾವುದೇ ಅಭ್ಯರ್ಥಿಯ ಪರದವಾಗಿ ಮತಚಲಾಯಿಸಲು ಇಷ್ಟವಿಲ್ಲದಿದ್ದಲ್ಲಿ ಆತ ನೋಟಾ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈ ಮೂಲಕ ತನ್ನ ಸಾಂವಿಧಾನಿಕ ಹಕ್ಕನ್ನೂ ಚಲಾಯಿಸಿದಂತಾಗಿತ್ತದೆ. ಆದರೆ ಸಾಂವಿಧಾನಿಕ ಹಕ್ಕು ಚಲಾಯಿಸಬೇಕಲ್ಲ ಎಂದು ಇಷ್ಟವಿಲ್ಲದಿದ್ದರೂ ಯಾವುದೋ ಅಭ್ಯರ್ಥಿಗೆ ಮತ ಚಲಾಯಿಸುವ ಗೋಜೂ ಇರುವುದಿಲ್ಲ. ಮತದಾನ ಯಂತ್ರದಲ್ಲಿ ಆಯಾ ಪಕ್ಷದ ಚಿಹ್ನೆಯೊಂದಿಗೆ ನೋಟಾ ಆಯ್ಕೆಯನ್ನೂ ನೀಡಲಾಗುತ್ತದೆ. ಅದನ್ನು ಒತ್ತಿದರೆ, ಮೇಲಿನ ಯಾವ ವ್ಯಕ್ತಿಗೂ ನಾನು ಮತ ಚಲಾಯಿಸುವುದಿಲ್ಲ ಎಂದು ಮತದಾರ ಹೇಳಿದಂತೆ!

ಗುಜರಾತ್ ಚುನಾವಣೆಯಲ್ಲಿ NOTA, ಬಿಜೆಪಿಗೆ ನೀಡುವುದೆ ಕಾಟ?

1.33 ಕೋಟಿ ನೋಟಾ ಓಟುಗಳು!

1.33 ಕೋಟಿ ನೋಟಾ ಓಟುಗಳು!

ನೋಟಾ ಆರಂಭವಾದ ಐದು ವರ್ಷಗಳಲ್ಲಿ ಒಟ್ಟು 1.33 ಕೋಟಿ ಮತಗಳು ನೋಟಾ ಪಾಲಾಗಿವೆ. ಇದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನೆಲ್ಲ ಸೇರಿ ಹೇಳುತ್ತಿರುವ ಲೆಕ್ಕ. ನೋಟಾದ ಸರಾಸರಿ ಪ್ರಮಾಣ ಹೇಳುವುದಾದರೆ ಪ್ರತಿ ರಾಜ್ಯದಲ್ಲಿ ಸುಮಾರು 2.70 ನೋಟಾ ಮತಗಳ ಚಲಾವಣೆಯಾಗಿದೆ. ಈ ಮಾಹಿತಿಯನ್ನು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಪಾರ್ಮ್ಸ್ (ಎಡಿಆರ್) ತಿಳಿಸಿದೆ.

ನೋಟಾಕ್ಕೆ ಮೂರನೇ ಸ್ಥಾನ!

ನೋಟಾಕ್ಕೆ ಮೂರನೇ ಸ್ಥಾನ!

2017 ರ ಗೋವಾ ಉಪಚುನಾವಣೆಯಲ್ಲಿ ಪಣಜಿ ಮತ್ತು ವಲ್ಪಾಯ್ ಕ್ಷೇತ್ರಗಳಲ್ಲಿ ನೋಟಾ ಮೂರನೇ ಸ್ಥಾನದಲ್ಲಿತ್ತು! ಕ್ರಮವಾಗಿ ಈ ಕ್ಷೇತ್ರಗಳಲ್ಲಿ ಶೇ.1.94, 1.99 ಸರಾಸರಿ ನೋಟಾ ಮತಗಳು ಚಲಾವಣೆಯಾಗಿದ್ದವು. 2017 ರ ದೆಹಲಿ ಉಪಚುನಾವಣೆಯಲ್ಲಿ ನೋಟಾ ನಾಲ್ಕನೇ ಸ್ಥಾನದಲ್ಲಿತ್ತು. ಅಲ್ಲದೆ 2017 ಆಂಧ್ರ ಪ್ರದೇಶದ ನಂದ್ಯಾಲ್ ಕ್ಷೇತ್ರದ ಉಪಚುನಾವಣೆಯಲ್ಲೂ ನೋಟಾ ನಾಲ್ಕನೇ ಸ್ಥಾನ ಗಳಿಸಿತ್ತು.

2014 ರ ಲೋಕಸಭಾ ಚುನಾವಣೆಯಲ್ಲಿ

2014 ರ ಲೋಕಸಭಾ ಚುನಾವಣೆಯಲ್ಲಿ

ಲೋಕಸಭಾ ಚುನಾವಣೆ2014 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ನೋಟಾ ಪರಿಚಯಿಸಲಾಯಿತು. ಈ ಚುನಾವಣೆಯಲ್ಲಿ ಒಟ್ಟು 60,02,942 ನೋಟಾ ಮತಗಳು ಚಲಾವಣೆಯಾಗಿದ್ದವು. ತಮಿಳುನಾಡಿನ ನೀಲಗಿರಿ ಕ್ಷೇತ್ರದಲ್ಲಿ ಅತೀ ಹೆಚ್ಚು(46,559) ನೋಟಾ ಮತಗಳು ದಾಖಲಾಗಿದ್ದರೆ, ಲಕ್ಷದ್ವೀಪದಲ್ಲಿ ಅತೀ ಕಡಿಮೆ (123) ನೋಟಾ ಮತಗಳು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the past five years NOTA (None of the Above) has secured 1,33,09,577 (1.33 crores) votes in State Assemblies and Lok Sabha Elections combined. In last 5 years, on an average NOTA has secured 2, 70,616 votes (2.70 lakhs) in the State Assembly Elections says a report by the Association for Democratic Reforms.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ