ICSE ISC Result 2024: 10 & 12ನೇ ತರಗತಿ ಫಲಿತಾಂಶ ಪ್ರಕಟ, ಪರಿಶೀಲಿಸುವುದೇಗೆ?-ಇಲ್ಲಿದೆ ಮಾಹಿತಿ
ICSE ISC Result 2024: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಇಂದು (ಮೇ 06) ಪ್ರಕಟಿಸಿದೆ. ಹಾಗಾದರೆ ಫಲಿತಾಂಶವನ್ನು ವೀಕ್ಷಣೆ ಮಾಡುವುದೇಗೆ ಎನ್ನವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು cince.org ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶಗಳನ್ನು ಪರಿಶೀಲನೆ ಮಾಡಬಹುದು. ಇನ್ನೂ ಹೇಗೆ ವೀಕ್ಷಣೆ ಮಾಡುವುದು ಎನ್ನುವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನಿಸಿ.

ಫಲಿತಾಂಶ ಪರಿಶೀಲಿಸುವುದೇಗೆ?
* ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್ಸ್‌ಸೈಟ್ cisce.orgಗೆ ಭೇಟಿ ನೀಡಿ.
* ನೀವು ಯಾವ ತರಗತಿ ಎಂದು ಆಯ್ಕೆ ಮಾಡಿ, ಕ್ಲಿಕ್ ಮಾಡಿ.
* ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
* ಬಳಿಕ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
* ವೀಕ್ಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳು ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
The Council for the Indian School Certificate Examinations announced results for the ICSE and ISC Examinations Year 2024.
— ANI (@ANI) May 6, 2024
2,695 schools presented candidates for the ICSE (Class X) Year 2024 Examination with 82.48% (2,223) schools attaining 100% pass percentage. 1,366 schools…
* 2,695 ಶಾಲೆಗಳಲ್ಲಿ ಐಸಿಎಸ್‌ಇ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 2,223 ಶಾಲೆಗಳಲ್ಲಿ ಶಾಕಡ 100ರಷ್ಟು ಫಲಿತಾಂಶ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ 1,366 ಶಾಲೆಗಳಲ್ಲಿ ಐಎಸ್‌ಇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 904 ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿದುಬಂದಿದೆ.
* ಇನ್ನು ಐಸಿಎಸ್‌ಇ 10ನೇ ತರಗತಿಯಲ್ಲಿ ಶೇಕಡ 99.31ರಷ್ಟು ಬಾಲಕರು ತೇರಗಡೆಯಾದರೆ, ಶೇಕಡಾ 99.65ರಷ್ಟು ಬಾಲಕೀಯರು ಉತ್ತೀರ್ಣರಾಗಿದ್ದಾರೆ. ಮತ್ತೊಂದೆಡೆ ಐಎಸ್‌ಇ 12ನೇ ತರಗತಿಯಲ್ಲಿ ಶೇಕಡ 97.53ರಷ್ಟು ಬಾಲಕರು ಉತ್ತೀರ್ಣರಾದರೆ, ಶೇಕಡಾ 98.92ರಷ್ಟು ಬಾಲಕೀಯರು ಉತ್ತೀರ್ಣರಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಗಮನಿಸಿದರೆ ಐಸಿಎಸ್‌ಇ & ಐಎಸ್‌ಸಿ ಫಲಿತಾಂಶದಲ್ಲಿ ಬಾಲಕೀಯರೇ ಮೈಲುಗೈ ಸಾಧಿಸಿದ್ದಾರೆ.












Click it and Unblock the Notifications